ದಲಿತರ ಮನೆಯಲ್ಲಿ ತಹಶೀಲ್ದಾರ್ ಭೋಜನ
Team Udayavani, Mar 22, 2021, 4:52 PM IST
ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ತಹಶೀಲ್ದಾರ್ ಆಶಪ್ಪ ಪೂಜಾರಿ ಹಾಗೂ ಸಿಬ್ಬಂದಿ ದಲಿತ ಕುಟುಂಬದ ಹೂವಕ್ಕ ಯಲ್ಲಪ್ಪ ಅವರ ಮನೆಯಲ್ಲಿ ಭೋಜನ ಸವಿದರು.
ಹೂವಕ್ಕ ಯಲ್ಲಪ್ಪ ಅವರ ಮನೆಯಲ್ಲಿ ತಯಾರಿಸಿದ್ದ ಅನ್ನ, ನುಗ್ಗೇಕಾಯಿ ಸಾರು, ಉಪ್ಪಿನಕಾಯಿ ನಂಚಿಕೊಂಡು ರಾತ್ರಿ ಊಟವನ್ನು ಸವಿದರು. ಗ್ರಾಪಂ ಅಧ್ಯಕ್ಷ ಮದಾರಸಾಬ ಸಿಂಗನಮಲ್ಲಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಎಲಿವಾಳ, ಎಸ್.ಎಸ್ .ಬಿಚ್ಚಾಲಿ, ಮುತ್ತು ಪಾಟೀಲ ಮತ್ತಿತರರು ಸಾಥ್ ನೀಡಿದರು.
ಜಲ ಜೀವನ್ ಕಾಮಗಾರಿಗೆ ಚಾಲನೆ :ಮುಳಗುಂದ: ನಾಗಾವಿ ತಾಂಡಾದಲ್ಲಿರಾಷ್ಟ್ರೀಯ ಜಲ ಜೀವನ್ ಮಿಷನ್‌ಕಾಮಗಾರಿಗೆ ಶಾಸಕ ಎಚ್.ಕೆ. ಪಾಟೀಲ ಭೂಮಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದಅವರು, ಒಟ್ಟು 84 ಲಕ್ಷ ರೂ. ವೆಚ್ಚದ ಕಾಮಗಾರಿಯನ್ನುಗುಣಮಟ್ಟದಿಂದ ಶೀಘ್ರದಲ್ಲಿಯೇಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ವಾಸಣ್ಣಕುರಡಗಿ, ಬಿ.ಆರ್.ದೇವರಡ್ಡಿ, ಗ್ರಾಪಂಉಪಾಧ್ಯಕ್ಷ ಸುರೇಶ ಪವಾರ, ಮಾಜಿಉಪಾಧ್ಯಕ್ಷ ದಯಾನಂದ ಪವಾರ, ಗೌರಿ ತೋಟದ, ಕುಮಾರ ಪವಾರ,ಯಮನಪ್ಪ ನಾಯಕ, ಮೀರವ್ವಲಮಾಣಿ, ಕುಬೇರಪ್ಪ ರಾಠೊಡ,ಮಾನಪ್ಪ ತೋಟದ,ರಾಮಪ್ಪ ಪವಾರ,ತುಕಾರಾಮ ಕಟ್ಟಿಮನಿ,ಸುಭಾಷಲಮಾಣಿ, ಈರಪ್ಪ ನಾಯಲ, ಅನಿಲ ಪವಾರ ಇತರರಿದ್ದರು.
ಗ್ರಾಪಂ ಅಧ್ಯಕ್ಷರು-ಸದಸ್ಯರಿಗೆ ಸನ್ಮಾನ :
ನರಗುಂದ: ತಾಲೂಕಿನ ಸಂಕದಾಳ ಗ್ರಾಮದಲ್ಲಿ ವೀರಭದ್ರ ಸ್ವಾಮಿ ಬ್ರಹ್ಮೋತ್ಸವ ಹಾಗೂ ರಸಮಂಜರಿಕಾರ್ಯಕ್ರಮದ ಅಂಗವಾಗಿಬೆನಕನಕೊಪ್ಪ ಮತ್ತು ಚಿಕ್ಕನರಗುಂದಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಎಲ್ಲಸದಸ್ಯರನ್ನು ಸತ್ಕರಿಸಲಾಗಿದೆ.
ಕೆಪಿಸಿಸಿ ಸಂಯೋಜಕ ಡಾ.ಸಂಗಮೇಶ ಕೊಳ್ಳಿಯವರ ಹಾಗೂ ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ ನೇತೃತ್ವದಲ್ಲಿ ಗ್ರಾಪಂ ಅಧ್ಯಕ್ಷ ಮುತ್ತು ರಾಯರಡ್ಡಿ, ಉಪಾಧ್ಯಕ್ಷೆಮಲ್ಲವ್ವ ಮರೆಣ್ಣವರ, ಸದಸ್ಯರಾದಈರವ್ವ ಮುದಿಗೌಡ್ರ, ಶಂಕ್ರವ್ವಚಲವಾದಿ, ಶೋಭಾ ಕೋನಣ್ಣವರ, ಶರಣಬಸಪ್ಪ ಹಳೇಮನಿ,ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಶ್ರುತಿ ಬ್ಯಾಳಿ, ಬಾಪುಗೌಡ ಹಿರೇಗೌಡ್ರ,ಶಿವಯೋಗಿ ಭೂಮಣ್ಣವರ, ಪತ್ರಪ್ಪ ಭೂಮಣ್ಣವರ, ದುಂಡವ್ವಮರ್ಚಕ್ಕನವರ, ಬಸು ಭೂಮಣ್ಣವರಅವರನ್ನು ಸತ್ಕರಿಸಲಾಗಿದೆ.ಕಾರ್ಯಕ್ರಮದಲ್ಲಿ ಗ್ರಾಮದಎಲ್ಲ ಹಿರಿಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.