ಗಡಿಯಲ್ಲಿ ಕನ್ನಡದ ಗುಡಿ ಕಟ್ಟಿದ ಗುರುದ್ವಯರು
ಕನ್ನಡ ಡಿಂಡಿಮ ಬಾರಿಸಿದ ಬಾಲ್ಕಿ ಶ್ರೀಗಳಕನ್ನಡ ಸೇವೆ ಅಪಾರವಾದುದು
Team Udayavani, Dec 28, 2021, 6:17 PM IST
ನರಗುಂದ: ಮರಾಠಿ ಹಾಗೂ ಉರ್ದು ಭಾಷೆಯ ಮಧ್ಯೆ ಸಿಲುಕಿ ದಯನೀಯ ಸ್ಥಿತಿಯಲ್ಲಿದ್ದ ಕನ್ನಡ ಭಾಷೆಗೆ ಶಕ್ತಿ ತುಂಬಿದ ನಾಗನೂರು ಹಾಗೂ ಬಾಲ್ಕಿ ಶ್ರೀಗಳು ಗಡಿಯಲ್ಲಿ ಕನ್ನಡ ಗುಡಿ ಕಟ್ಟಿದ ಗುರುದ್ವಯರು ಎಂದು ಸಾಹಿತಿ ವೀರನಗೌಡ ಮರಿಗೌಡ್ರ ಹೇಳಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ ಆಶ್ರಯದಲ್ಲಿ 329ನೇ ಮಾಸಿಕ ಶಿವಾನುಭವ ಹಾಗೂ ಕರ್ನಾಟಕ ಏಕೀಕರಣ ಹೋರಾಟಗಾರರಾದ ಬಾಲ್ಕಿ ಚನ್ನಬಸವ ಪಟ್ಟದೇವರ ಮತ್ತು ನಾಗನೂರ ರುದ್ರಾಕ್ಷಿಮಠದ ಶಿವಬಸವ ಮಹಾಸ್ವಾಮಿಗಳ 132ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಗನೂರಿನ ಶಿವಬಸವ ಶ್ರೀಗಳು ಏಕೀಕರಣ ಹೋರಾಟದಲ್ಲಿ ಅದ್ವೀತಿಯ ಕೊಡುಗೆ ನೀಡಿದ್ದಾರೆ. ಬೆಳಗಾವಿ ಗಡಿ ಭಾಗದಲ್ಲಿ ಸ್ವಾತಂತ್ರ್ಯ ಚಳವಳಿ ಮೂಲಕ ರಾಷ್ಟ್ರೀಯ ಪ್ರಜ್ಞೆ ಹಾಗೂ ಕರ್ನಾಟಕ ಏಕೀಕರಣ ಚಳವಳಿ ಮೂಲಕ ಕನ್ನಡ ಪ್ರಜ್ಞೆ ಬೆಳೆಸಿದವರು ಕನ್ನಡಯೋಗಿ ಶಿವಬಸವ ಶ್ರೀಗಳು. 1932ರಲ್ಲಿ ಪ್ರಸಾದ ನಿಲಯ ಸ್ಥಾಪಿಸಿ ಸ್ವಾತಂತ್ರ್ಯ ಯೋಧರಿಗೆ ಆಶ್ರಯ ಕಲ್ಪಿಸಿ ಸ್ವಾತಂತ್ರ್ಯ ಪ್ರೇಮ ಮೆರೆದಿದ್ದರು ಎಂದು ಸಾಹಿತಿ ವೀರನಗೌಡ ಮರಿಗೌಡ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಂತ ಬಾಲ್ಕಿ ಡಾ| ಚನ್ನಬಸವ ಪಟ್ಟದ್ದೇವರ ಕ®ಡ ° ಕೈಂಕರ್ಯ ಸ್ಮರಣೀಯ. ನಿಜಾಮರ ಆಳ್ವಿಕೆಯಲ್ಲಿ ಉರ್ದು ಪ್ರಭಾವವಿದ್ದರೂ ಮಕ್ಕಳ ಶಿಕ್ಷಣಕ್ಕಾಗಿ ಕನ್ನಡ ಶಾಲೆಗಳನ್ನು ತೆರೆಯುವ ಮೂಲಕ ಕನ್ನಡ ಡಿಂಡಿಮ ಬಾರಿಸಿದ ಬಾಲ್ಕಿ ಶ್ರೀಗಳಕನ್ನಡ ಸೇವೆ ಅಪಾರವಾದುದು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಅಖಂಡ ಕರ್ನಾಟಕದಕನಸನ್ನು ಕಂಡ ಪೂಜ್ಯದ್ವಯರು ಗಡಿಯಲ್ಲಿ ಕನ್ನಡ ಕಹಳೆಯೂದಿ ಕನ್ನಡ ನಾಡು-ನುಡಿ, ನೆಲ-ಜಲಕ್ಕೆ ತಮ್ಮನ್ನೆ ಅರ್ಪಿಸಿಕೊಂಡಿದ್ದರು. ಅವರ ಸ್ವಾತಂತ್ರ್ಯ, ಕನ್ನಡ ಪ್ರೇಮ ನಮಗೆಲ್ಲ ಮಾದರಿಯಾಗಿದೆ. ಮರಾಠಿಭಾಷಿಕರ ಪುಂಡಾಟಿಕೆಗೆ ಬಗ್ಗದೆ ಕನ್ನಡ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಿದ ನಾಗನೂರ ಶಿವಬಸವ ಶ್ರೀಗಳು ಅನ್ನ ದಾಸೋಹ ಜೊತೆಗೆ ಮಾತೃಭಾಷೆ ಜಾಗೃತಿ ಮೂಡಿಸಿದ ಕೀರ್ತಿ ಪೂಜ್ಯದ್ವಯರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕಸಾಪ ನಿಕಟಪೂರ್ವ ತಾಲೂಕು ಅಧ್ಯಕ್ಷೆ ಮಂಗಳಾ ಪಾಟೀಲ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆನಂದ ಭೋವಿ ಮಾತನಾಡಿದರು. ಚನ್ನಪ್ಪ ಚಿನಿವಾಲರ, ಹಸನಸಾಬ್ ಬಾಳಪನ ³ ವರ ಉಪಸ್ಥಿತರಿದ್ದರು. ಪ್ರೊ| ಆರ್.ಬಿ. ಚಿನಿವಾಲರ ನಿರೂಪಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.