ಬಿಡಾಡಿ ದನಗಳಿಗೂ ತಪ್ಪಿಲ್ಲ ನೀರಿನ ಗೋಳು


Team Udayavani, May 17, 2019, 4:14 PM IST

gadaga-tdy-2..

ಗದಗ: ಹೆಚ್ಚುತ್ತಿರುವ ತಾಪದಿಂದ ದಾಹ ತೀರಿಸಿಕೊಳ್ಳಲು ನಳಕ್ಕೆ ಬಾಯಿವೊಡ್ಡಿರುವ ಮೂಕ ಜೀವಿಗಳು.

ಗದಗ: ಗದಗ- ಬೆಟಗೇರಿ ಅವಳಿ ನಗರದ ವಿವಿಧೆಡೆ ರಸ್ತೆ ವಿಭಜಕಗಳ ಮಧ್ಯೆ ನೆಟ್ಟಿರುವ ಸಸಿಗಳನ್ನು ಉಳಿಸಿಕೊಳ್ಳಲು ನಗರಸಭೆ ತೋರುವಷ್ಟು ಕಾಳಜಿಯನ್ನು ಬೀಡಾಡಿ ದನಗಳ ದಾಹ ತೀರಿಸುವತ್ತ ಗಮನ ಹರಿಸುತ್ತಿಲ್ಲ. ಹೀಗಾಗಿ ಪ್ರಾಣಿಗಳು ಬಿಸಿಲಿನ ಬೇಗೆಯಿಂದ ದೇಹ ತಣಿಸಿಕೊಳ್ಳಲು ಪೋಲಾಗುವ ನಳ ಹಾಗೂ ರಸ್ತೆಗಳಲ್ಲಿ ನಿಂತ ನೀರಿಗೆ ಬಾಯಿವೊಡ್ಡುವಂತಾಗಿದೆ.

ಹೌದು, ಸತತ ಬರಗಾಲ ಹಾಗೂ ಮಳೆ ಕೊರತೆಯಿಂದಾಗಿ ಬಿಸಿಲಿನ ತಾಪ ದಿನಗಳೆದಂತೆ ಹೆಚ್ಚುತ್ತಿದೆ. ಕಳೆದ ಹದಿನೈದು ದಿನಗಳಿಂದ ಉಷ್ಣಾಂಶ ಗರಿಷ್ಠ 38ರಿಂದ 40 ಡಿಗ್ರಿ ಸೆಲ್ಸಿಯಸ್‌ ವರೆಗೆ ದಾಖಲಾಗುತ್ತಿದೆ. ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಜನಸಾಮಾನ್ಯರು ಎಳೆ ನೀರು, ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ, ಬಿರು ಬಿಸಿಲಿನಿಂದ ಪ್ರಾಣಿಗಳಿಗೆ ಕುಡಿಯುವ ನೀರು ಸಿಗದೇ ಅನುಭವಿಸುವ ಸಂಕಷ್ಟ ಅವುಗಳಿಗೇ ಗೊತ್ತು.

ಆಗಾಗ ನಗರಸಭೆ ನಡೆಸಿದ ಬೀಡಾಡಿ ದನಗಳ ಕಾರ್ಯಾಚರಣೆಯಿಂದಾಗಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇತ್ತೀಚೆಗೆ ಬೀಡಾಡಿ ದನಗಳ ಸಂಖ್ಯೆ ಭಾಗಶಃ ಕಡಿಮೆಯಾಗಿವೆ. ಆ ಪೈಕಿ ಬಹುತೇಕ ಮಾಲೀಕರಿಗೆ ಸೇರಿವೆ. ಆದರೆ, ಮಾಲೀಕರ ಮನೆಗಳಲ್ಲಿ ಜಾಗ, ಮೇವಿನ ಕೊರತೆಯಿಂದಾಗಿ ಸೂರ್ಯೋದಯವಾಗುತ್ತಿದ್ದಂತೆ ದನಗಳು ಬೀದಿಗೆ ಬರುತ್ತಿವೆ. ಹೀಗಾಗಿ ನೂರಾರು ದನಗಳು ಹಸಿವು, ದಾಹ ತೀರಿಸಿಕೊಳ್ಳಲು ಪರಿತಪಿಸುವಂತಾಗಿದೆ.

ನಗರಸಭೆ ನೀರಿನ ತೊಟ್ಟಿಗಳು ಮಾಯ!:

ಕೆಲ ವರ್ಷಗಳ ಹಿಂದೆ ಗದಗ- ಬೆಟಗೇರಿ ಅವಳಿ ನಗರದಲ್ಲಿ ಬೀಡಾಡಿ ದನಗಳ ಅನುಕೂಲಕ್ಕಾಗಿ ನಗರಸಭೆಯಿಂದ ಹಳೇ ಬಸ್‌ ನಿಲ್ದಾಣ, ವೀರೇಶ್ವರ ಗ್ರಂಥಾಲಯ, ಒಕ್ಕಲಗೇರಿ, ಧೋಬಿ ಘಾಟ, ಭೀಷ್ಮ ಕೆರೆ, ಮಹೇಂದ್ರಕರ ಸರ್ಕಲ್, ಪಾಲಾ-ಬಾದಾಮಿ ರಸ್ತೆ, ಬೆಟಗೇರಿ ಸೇರಿದಂತೆ ಸುಮಾರು 8-10 ಕಡೆ ನೀರಿನ ತೊಟ್ಟಿ ಇರಿಸಲಾಗಿತ್ತು. ಅದರೊಂದಿಗೆ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಇಲಾಖೆಯಿಂದಲೇ ನೀರಿನ ತೊಟ್ಟಿ ಇಡಲಾಗಿತ್ತು. ಬೇಸಿಗೆ ದಿನಗಳಲ್ಲಿ ಎಲ್ಲ ನೀರಿನ ತೊಟ್ಟಿಗಳನ್ನೂ ನಗರಸಭೆ ಟ್ಯಾಂಕರ್‌ ಮೂಲಕ ನೀರು ತುಂಬಿಸಲು ವಿಶೇಷ ಒತ್ತು ನೀಡಲಾಗುತ್ತಿತ್ತು. ಆ ಪೈಕಿ ನಗರಸಭೆ ಅಳವಡಿಸಿದ್ದ ನೀರಿನ ತೊಟ್ಟಿಗಳು ಸಿಮೆಂಟಿನದ್ದಾಗಿದ್ದರಿಂದ ರೈಲ್ವೆ ನಿಲ್ದಾಣ ಸಮೀಪದ ದುರ್ಗಾ ದೇವಿ ದೇವಸ್ಥಾನದ ಬಳಿ ಅಳವಡಿಸಿರುವ ತೊಟ್ಟಿ ಹೊರತಾಗಿ ಬಹುತೇಕ ಮಾಯವಾಗಿವೆ ಎಂಬುದು ನಗರಸಭೆ ಮೂಲಗಳ ಹೇಳಿಕೆ.

ಇನ್ನು ರೈಲ್ವೆ ಇಲಾಖೆ ಕಾಮಗಾರಿಯೊಂದರ ನಿಮಿತ್ತ ನಿಲ್ದಾಣದ ಬಳಿ ತೊಟ್ಟಿಯನ್ನೂ ಧ್ವಂಸಗೊಳಿಸಿದ್ದರಿಂದ ಬೀಡಾಡಿ ದನಗಳೊಂದಿಗೆ ಅಲ್ಲಿನ ಟಾಂಗಾಗಳ ಕುದುರೆಗಳೂ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಟಾಂಗಾ ಕುದುರೆಗಳ ನೀರಿನ ದಾಹ ತೀರಿಸಿಲು ಆನತಿ ದೂರದ ದುರ್ಗಾದ ದೇವಿ ದೇವಸ್ಥಾನದ ಬಳಿ ತೊಟ್ಟಿಗೆ ಕರೆತರುತ್ತಾರೆ ಎಂದು ಹೇಳಲಾಗಿದೆ.

ಆದರೆ, ಬೆಟಗೇರಿ ಬಸ್‌ ನಿಲ್ದಾಣ, ಸೆಟ್ಲಮೆಂಟ್, ಸ್ಟೇಷನ್‌ ರಸ್ತೆ, ಗಾಂಧಿ ವೃತ್ತ, ಶಾನಭಾಗ ಹೋಟೆಲ್ ಭಾಗದಲ್ಲಿ ಇಂದಿಗೂ ಹೆಚ್ಚಾಗಿ ಬೀಡಾಡಿ ದನಗಳು ಬೀಡು ಬಿಡುತ್ತಿವೆ. ಆಯಾ ಭಾಗದಲ್ಲಿ ಪ್ರಾಣಿಗಳು ದಾಹ ನೀಗಿಸಿಕೊಳ್ಳಲು ಯಾವುದೇ ವ್ಯವಸ್ಥೆಯಿಲ್ಲದೇ, ಪರದಾಡುವಂತಾಗಿದೆ. ಇನ್ನು ರಸ್ತೆಗಳಲ್ಲಿ ಬೀಡಾಡಿ ದನಗಳ ಅಡ್ಡಾದಿಡ್ಡಿ ಓಡಾಟದಿಂದ ವಾಹನ ಸವಾರರಿಗೆ ಸಂಚಕಾರ ತಂದೊಡ್ಡುತ್ತಿವೆ ಎಂಬುದು ಗಮನಾರ್ಹ.

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

24-

Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ

18-gadaga

Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.