ಸಂಭ್ರಮದ ನಾಗರ ಪಂಚಮಿ
•ನಾಗಪ್ಪ ಮೂರ್ತಿಗೆ ಹಾಲೆರೆದ ಮಹಿಳೆಯರು •ಜೋಕಾಲಿ ಆಡಿ ಖುಷಿಪಟ್ಟ ಮಕ್ಕಳು
Team Udayavani, Aug 5, 2019, 9:26 AM IST
ಗದಗ: ನಾಗರ ಪಂಚಮಿ ಅಂಗವಾಗಿ ವಿವಿಧೆಡೆ ಮಹಿಳೆಯರು ನಾಗದೇವರಿಗೆ ಹಾಲೆರೆದರು.
ಗದಗ: ನಾಗರ ಪಂಚಮಿ ಮುನ್ನದಿನವಾದ ರವಿವಾರ ನಾಗ ಚತುರ್ಥಿ ನಿಮಿತ್ತ ಗದಗ- ಬೆಟಗೇರಿ ಸೇರಿದಂತೆ ಜಿಲ್ಲಾದ್ಯಂತ ಸಂಭ್ರಮದಿಂದ ಸಾರ್ವಜನಿಕರು ನಾಗದೇವತೆಗಳಿಗೆ ಹಾಲೆರೆದರು.
ಮಳೆ, ಬೆಳೆ, ಜೀವನ ಸಮೃದ್ಧಗೊಳಿಸುವಂತೆ ಪೂಜೆ ಸಲ್ಲಿಸಿದರು. ಹಬ್ಬದ ಅಂಗವಾಗಿ ಗೋಲ್ ಬೊಗರಿ, ಜೋಕಾಲಿಯಲ್ಲಿ ಜೀಕುವ ಮೂಲಕ ಮಹಿಳೆಯರು, ಮಕ್ಕಳು ಸಂಭ್ರಮದ ಅಲೆಯಲ್ಲಿ ತೇಲಿದರು.
ಬೆಳಗ್ಗೆಯಿಂದಲೇ ಅವಳಿ ನಗರದ ಜನರು ಮನೆಯಲ್ಲಿ ಹಾಗೂ ವಿವಿಧ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗಳ ಮೂರ್ತಿಗಳು, ಹಾವಿನ ಹುತ್ತಗಳು ಹಾಗೂ ಹಬ್ಬದ ನಿಮಿತ್ತ ಮನೆಯಲ್ಲಿಟ್ಟಿದ್ದ ಮಣ್ಣಿನ ನಾಗದೇವರಿಗೆ ಮನೆ ಮಂದಿ ಹಾಲರೆದು, ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಈ ವೇಳೆ ಕೆಲವರು ಇದು ನನ್ನ ಪಾಲು, ಇದು ತಂದೆ, ತಾಯಿ, ಅಜ್ಜ, ಅಜ್ಜಿ, ಅಕ್ಕ ಹಾಗೂ ಅಣ್ಣ ಹಾಗೂ ತಮ್ಮನ ಪಾಲು ಎಂದು ಹೇಳುವ ಮೂಲಕ ಹಾಲೆರೆದು ಧನ್ಯತೆ ಮೆರೆದರು.
ಇದೇ ವೇಳೆ ಮನೆಯಲ್ಲಿ ತಯಾರಿಸಿದ್ದ ಶೇಂಗಾ, ಪುಠಾಣಿ, ರವೆ, ದಾನಿ, ಅಳ್ಳಿಟ್ಟು, ಎಳ್ಳು ಸೇರಿದಂತೆ ಇನ್ನಿತರೆ ಉಂಡಿಗಳನ್ನು ನೈವೇದ್ಯ ವಾಗಿ ಅರ್ಪಿಸಿ, ಬಳಿಕ ಮನೆಯ ಮಂದಿಯೆಲ್ಲ ಒಟ್ಟಿಗೆ ಕುಳಿತು ಭೋಜನ ಸವಿದರು.
ಅಲ್ಲದೇ, ಶ್ರಾವಣ ಮಾಸದ ಅಂಗವಾಗಿ ಮನೆಯಂಗಳದ ಬೃಹತ್ ಮರಗಳಿಗೆ ಹಗ್ಗದಿಂದ ಜೋಕಾಲಿ ಕಟ್ಟಿದ್ದು ಅಲ್ಲಲ್ಲಿ ಕಂಡು ಬಂದಿತು. ಮಕ್ಕಳು, ಮಹಿಳೆಯರು, ವಯಸ್ಕರರು ಸರದಿಯಂತೆ ಜೋಕಾಲಿ ಜೀಕಿ ಸಂಭ್ರಮಿಸಿದರು. ಒಬ್ಬರು, ಇಬ್ಬರು ಜೋಕಾಲಿಯಲ್ಲಿ ಜೀಕಿದರೆ, ಇನ್ನುಳಿದವರು ಬದುಕಿನ ಸಾರ ಹೇಳುವ ಜಾನಪದ ಹಾಡುಗಳನ್ನು ಹಾಡಿದರು.
ನಗರದ ರಾಜೀವಗಾಂಧಿ ನಗರ, ಈಶ್ವರ ಬಡಾವಣೆ, ಡಿ.ಸಿ.ಮಿಲ್ ಕಾಂಪೌಂಡ್, ಒಕ್ಕಲಗೇರಿ ಓಣಿ ಸೇರಿದಂತೆ ಬೆಟಗೇರಿ ವಿವಿಧ ಭಾಗಗಳಲ್ಲಿ ದೊಡ್ಡ ದೊಡ್ಡ ಮರಗಳಲ್ಲಿ ಹಗ್ಗದ ಜೋಕಾಲಿಗಳು ತೂಗುತ್ತಿರುವ ದೃಶ್ಯ ನೋಡುಗರಿಗೆ ಮುದ ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.