2ಎ ಮೀಸಲಿಗೆ ಸಾಂವಿಧಾನಾತ್ಮಕ ಹೋರಾಟ
ಪೂರ್ಣಕುಂಭದೊಂದಿಗೆ ಭಾಗವಹಿಸಿದ್ದ ಸಮಾಜದ ಮಹಿಳೆಯರು ಮೆರಗು ತಂದರು.
Team Udayavani, Feb 22, 2022, 6:10 PM IST
ಲಕ್ಷ್ಮೇಶ್ವರ: ವೀರರಾಣಿ ಕಿತ್ತೂರು ಚನ್ನಮ್ಮ, ಕೆಳದಿ ಚನ್ನಮ್ಮ, ಅಕ್ಕಮಹಾದೇವಿ, ಬೆಳವಡಿ ಮಲ್ಲಮ್ಮ, ಮೈಲಾರ ಮಹಾದೇವಪ್ಪ, ಕಂಬಳಿ ಸಿದ್ಧಪ್ಪರಂತಹ ಅನೇಕರು ಪಂಚಮಸಾಲಿ ಸಮಾಜದ ಹೆಮ್ಮೆಯಾಗಿದ್ದಾರೆ. ತಾಯಂದಿರು ಮಕ್ಕಳಿಗೆ ಇಂತಹ ಪುಣ್ಯ ಪುರುಷರ ಬದುಕು, ಜೀವನ ಮೌಲ್ಯಗಳನ್ನು ರೂಢಿಸಬೇಕೆಂದು ಹರಿಹರ ಪೀಠದ ವಚನಾನಂದ ಸ್ವಾಮಿಗಳು ಹೇಳಿದರು.
ಲಕ್ಷ್ಮೇಶ್ವರ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಯಲ್ಲಾಪುರ ಗ್ರಾಮ ಘಟಕ, ಮಹಿಳಾ ಘಟಕಗಳ ಉದ್ಘಾಟನೆ, ಕಿತ್ತೂರು ಚನ್ನಮ್ಮನವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದ ನಂತರ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಸಂಘಟನೆಯಲ್ಲಿ ಸರ್ವಶಕ್ತಿ ಅಡಗಿದ್ದು, ಸಮಾಜ ಸಂಘಟನೆಯಾದರೆ ನ್ಯಾಯಯುತ, ಕಾನೂನು ಬದ್ಧ ಬೇಡಿಕೆಗಳು ಈಡೇರಲು ಸಾಧ್ಯ ಎಂದರು.
ತಾಯಂದಿರು ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಕಲಿಸಬೇಕು. ಸಮಾಜದ ಸಂಘಟನೆ, ಶ್ರೇಯೋಭಿವೃದ್ಧಿಗಾಗಿ ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಪರಸ ರ ಭಿನ್ನಾಭಿಪ್ರಾಯ, ಕಾಲು ಜಗ್ಗುವ ಪ್ರವೃತ್ತಿ ಬಿಡಬೇಕು. ಸಮಾಜ ನಮಗೇನು ಮಾಡಿದೆ ಎನ್ನದೇ ಸಮಾಜಕ್ಕೆ ನನ್ನ ಕೊಡುಗೆ ಏನು? ಎಂಬ ಆತ್ಮ ವಿಮರ್ಶೆ ಎಲ್ಲರದ್ದಾಗಬೇಕು ಎಂದರು.
ಪಂಚಮಸಾಲಿ ಸಮಾಜದ ಶ್ರೇಯೋಭಿವೃದ್ಧಿ, ಕಷ್ಟ-ಸುಖದಲ್ಲಿ ಭಾಗಿಯಾಗಲು ಹರಿಹರ ಪೀಠ ಸದಾ ಸಿದ್ಧವಿದೆ. ಪೀಠದಲ್ಲಿ ಸಮಾಜದ ಬಡ, ಪ್ರತಿಭಾವಂತ ಮಕ್ಕಳಿಗೆ ತ್ರಿವಿಧ ದಾಸೋಹದ ಜತೆಗೆ ಆರೋಗ್ಯ, ಆಧ್ಯಾತ್ಮ ಸೇರಿ ಪಂಚ ದಾಸೋಹ ಸೇವೆ ನಡೆಯುತ್ತಿದ್ದು, ಸಮಾಜ ಬಾಂಧವರು ತನು ಮನಧನದ ಸಹಾಯ-ಸಹಕಾರ ನೀಡಬೇಕಿದೆ ಎಂದರು.
ಫೆ.27ರಂದು ಸರ್ಕಾರವೇ ಕೆಳದಿ ಚನ್ನಮ್ಮನ 350ನೇ ಪಟ್ಟಾಧಿಕಾರ ಸಮಾರಂಭವನ್ನು ಸಂಭ್ರಮದಿಂದ ಆಚರಿಸಲು ಮನವಿ ಮಾಡಲಾಗಿದೆ. ಬರುವ ಎಪ್ರಿಲ್ ತಿಂಗಳಲ್ಲಿ ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿದ ಹರ ಜಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಪಂಚಮಸಾಲಿ ಮತ್ತು ಇತರೇ ಸಮಾಜ ಬಾಂಧವರೂ ಹರಜಾತ್ರೆಗೆ ಆಗಮಿಸಬೇಕೆಂದು ಮನವಿ ಮಾಡಿದರು.
ರಾಜ್ಯ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಹುಲ್ಲತ್ತಿ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಮಂಜುನಾಥ ಮಾಗಡಿ, ಸಮಾಜದ ಬೆಳಕಾಗಿ ಕಾರ್ಯನಿರ್ವಹಿಸುತ್ತಿರುವ ಹರಿಹರ ಪೀಠಕ್ಕೆ ಸಮಾಜ ಬಾಂಧವರು ತನು, ಮನ, ಧನ ಸೇವೆಗೆ ಸನ್ನದ್ಧರಾಗೋಣ ಎಂದರು. ಕಾರ್ಯಕ್ರಮದಲ್ಲಿ ಸಮಾಜದ ರೈತರು, ನೌಕರರು, ನಿವೃತ್ತ ಶಿಕ್ಷಕರು, ಗಣ್ಯರು, ಮಹಿಳೆಯರು ಸೇರಿ 150ಕ್ಕೂ ಹೆಚ್ಚು ಜನರನ್ನು ಸನ್ಮಾನಿಸಲಾಯಿತು. ಬೆಳಿಗ್ಗೆ ಗ್ರಾಮದಲ್ಲಿ ಸಕಲ ವಾದ್ಯಗಳೊಂದಿಗೆ ನಡೆದ ವೀರರಾಣಿ ಕಿತ್ತೂರ ಚನ್ನಮ್ಮಾಜಿ ಭಾವಚಿತ್ರದ ಮೆರವಣಿಗೆಗೆ ಪೂರ್ಣಕುಂಭದೊಂದಿಗೆ ಭಾಗವಹಿಸಿದ್ದ ಸಮಾಜದ ಮಹಿಳೆಯರು ಮೆರಗು ತಂದರು.
ಕಾರ್ಯಕ್ರಮದಲ್ಲಿ ಶಿವನಗೌಡ ಭರಮಗೌಡ, ತಿರಕಪ್ಪ ಪ್ಯಾಟಿ. ಶಿವನಗೌಡ ನರಸಮ್ಮನವರ ಚಂದ್ರಶೇಖರ ಅಂಗಡಿ, ನಾಗಪ್ಪ ಅಕ್ಕೂರ, ಎಂ.ಎನ್.ನರಸಮ್ಮನವರ, ತಿರುಪತಿ ಅಕ್ಕೂರ, ಬಿ.ಎಂ. ಅಂಗಡಿ, ಎಸ್.ಬಿ. ಮತ್ತೂರ, ಜೆ.ಎಸ್ .ನರಸಮ್ಮನವರ, ಬಿ.ಡಿ. ಮತ್ತೂರ, ಎನ್. ಎನ್., ಸೋಮನಕಟ್ಟಿ, ಎಸ್.ಎನ್. ಭರಮಗೌಡ್ರ,ನೀಲವ್ವ ಸೋಮನಕಟ್ಟಿ, ವಿದ್ಯಾ ಅಕ್ಕೂರ, ರೇಣುಕಾ ಪಾಟೀಲ ಸೇರಿ ಸಮಾಜದ ಹಿರಿಯರು ಉಪಸ್ಥಿತರಿದ್ದರು. ಯಲ್ಲಾಪುರ ಮತ್ತು ಸುತ್ತಲಿನ ಗ್ರಾಮಗಳ ಸಮಾಜ ಬಾಂಧವರು, ಪಿ.ಬಿ. ಕಾಳಪ್ಪನವರ ಸೇರಿದಂತೆ ತಾಲೂಕು ಮತ್ತು ಗ್ರಾಮ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಯಾವ ಸಮಾಜ ತನ್ನ ಉನ್ನತಿ, ಶ್ರೇಯಸ್ಸಿಗಾಗಿ ಶ್ರಮಿಸಿರುತ್ತದೆಯೂ ಅದರ ಋಣ ತೀರಿಸುವ ನೈತಿಕ ಹೊಣೆ ಗಾರಿಕೆ ಮತ್ತು ಜವಾಬ್ದಾರಿಯನ್ನು ಅರಿತುಕೊಂಡಾಗ ಮಾತ್ರ ಸಮಾಜದ ಉನ್ನತಿ ಸಾಧ್ಯ. ಹರಿಹರ ಪೀಠ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆಯಲು ಕೇವಲ ಪ್ರತಿಭಟನೆ, ಹೋರಾಟಕ್ಕಿಳಿಯದೇ ಸಾಂವಿಧಾನಾತ್ಮಕ, ಕಾನೂನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದೆ.
ಶ್ರೀ ಜ|ವಚನಾನಂದ ಸ್ವಾಮೀಜಿ,
ಹರಿಹರ ಪೀಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.