ಕರ್ನಾಟಕ ಏಕೀಕರಣದಲ್ಲಿದೆ ಮಹನೀಯರ ಶ್ರಮ
ನುಡಿಯ ಬಗೆಗೆ ಸಕಾರಾತ್ಮಕ ಚಿಂತನೆ ಮೂಡಬೇಕಾದರೆ ಕೇವಲ ಸಲಹೆ ಸಾಲದು.
Team Udayavani, Jul 13, 2022, 5:56 PM IST
ಹೊಳೆಆಲೂರ: ಪ್ರಪಂಚದ ಕೆಲವೇ ಕೆಲವು ಸಮೃದ್ಧ ಸಂಸ್ಕಾರಯುತ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ. ನಾಡು, ನುಡಿ, ನೆಲ, ಜಲ, ಸಂಸ್ಕೃತಿಯಲ್ಲಿ ನಾವು ಯಾವತ್ತೂ ರಾಜೀ ಮಾಡಿಕೊಳ್ಳಬಾರದು. ಕರ್ನಾಟಕ ಏಕೀಕರಣದಲ್ಲಿ ಆಲೂರ ವೆಂಕಟರಾಯರಂತಹ ಸಾವಿರಾರು ಮಹನೀಯರ ಬೆವರಿನ ಶ್ರಮವಿದೆ ಎಂಬುದನ್ನು ಯಾರೂ ಮರೆಯಬಾರದು ಎಂದು ಉಪನ್ಯಾಸಕಿ ವಿಜಯಕುಮಾರಿ ಶಿಂಧೆ ಹೇಳಿದರು.
ಕನ್ನಡ ಕುಲ ಪುರೋಹಿತ ಆಲೂರ ವೆಂಕಟರಾಯರ ಜನ್ಮ ದಿನಾಚರಣೆ ಅಂಗವಾಗಿ ಕಸಾಪ ಹೋಬಳಿ ಘಟಕ, ಗ್ರಾಪಂ ಹಾಗೂ ಕನ್ನಡ ರಕ್ಷಣಾ ವೇದಿಕೆ ಸಹಯೋಗದಲ್ಲಿ ಮಂಗಳವಾರ ನಡೆದ ಆಲೂರ ವೆಂಕಟರಾವ್ ಜನ್ಮದಿನಾಚರಣೆ ನಂತರ ರೇಣುಕಾದೇವಿ ಪ್ರೌಢಶಾಲೆಯಲ್ಲಿ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾತೃಭಾಷೆಯನ್ನು ಆಡಳಿತದಲ್ಲಿ ಅನುಷ್ಠಾನಗೊಳಿಸಲು ಹತ್ತಾರು ಆದೇಶ, ಸುತ್ತೋಲೆಗಳು ಜಾರಿಯಾಗಿದ್ದರೂ ನಿರೀಕ್ಷತ ಪ್ರಗತಿಯಾಗಿಲ್ಲ. ಹೊಟ್ಟೆಪಾಡು ಮತ್ತು ವ್ಯವಹಾರಿಕವಾಗಿ ನೂರು ಭಾಷೆ ಕಲಿಯಿರಿ. ಆದರೆ, ದಿನಬಳಕೆಯಲ್ಲಿ ಮನಃಪೂರ್ವಕವಾಗಿ ಹೆಮ್ಮೆಯಿಂದ ಕನ್ನಡ ಮಾತನಾಡುವುದರ ಜೊತೆಗೆ ಇತರ ರಾಜ್ಯಗಳಿಂದ ಉದ್ಯೋಗ ಅರಿಸಿ ಆಗಮಿಸಿದವರಿಗೂ ಸವಿಗನ್ನಡ ಭಾಷೆ ಉಣಬಡಿಸಬೇಕೆಂದು ಹೇಳಿದರು.
ಅತಿಥಿಯಾಗಿದ್ದ ಗ್ರಾಪಂ ಪಿಡಿಒ ಎಸ್.ಜಿ.ಮೆಣಸಗಿ ಮಾತನಾಡಿ, ಸಮಾಜದಲ್ಲಿ ನಮ್ಮ ಮಕ್ಕಳಿಗೆ ನಾಡು, ನುಡಿಯ ಬಗೆಗೆ ಸಕಾರಾತ್ಮಕ ಚಿಂತನೆ ಮೂಡಬೇಕಾದರೆ ಕೇವಲ ಸಲಹೆ ಸಾಲದು. ಕನ್ನಡ ಪರ ಕಾರ್ಯ ಚಟುವಟಿಕೆಗಳು, ನಮ್ಮ ಭಾಷೆ, ಇತಿಹಾಸ ಪರಂಪರೆಯ ಸಾಕ್ಷಾತ್ ದರ್ಶನವಾಗಬೇಕು. ಕಸಾಪ ಬಳಗ ಹಾಗೂ ಕನ್ನಡಪರ ಮನಸ್ಸುಗಳು ಒಂದುಗೂಡಿ ಮಕ್ಕಳಿಗೆ ಸುಸಜ್ಜಿತ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗದರ್ಶನ ತರಬೇತಿ ಹಮ್ಮಿಕೊಂಡರೆ ಗ್ರಾಪಂ ಸಂಪೂರ್ಣ ಸಹಾಯ, ಸಹಕಾರ ನೀಡಲಿದೆ ಎಂದರು.
ಸಾಹಿತಿ ವಿಶ್ವನಾಥ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ವ್ಯಕ್ತಿತ್ವ ವಿಕಸನ ಮಾರ್ಗದರ್ಶನ ಮಾಡಿದರು. ಕಸಾಪ ಹೋಬಳಿ ಘಟಕದ ಅಧ್ಯಕ್ಷ ವೀರಯ್ಯ ವಸ್ತ್ರದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಸಂಗಪ್ಪ ದುಗಲದ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಒಕ್ಕೂಟದ ಅಧ್ಯಕ್ಷೆ ಶಾಂತಾ ಕಾತರಕಿ, ಕಸಾಪ ಗೌರವ ಕಾರ್ಯದರ್ಶಿ ವಾಸುದೇವ ಪವಾರ, ಕೋಶಾಧ್ಯಕ್ಷ ಪಾಂಡುರಂಗ ಪತ್ತಾರ, ಅಭಿಷೇಕ ಇನಾಮದಾರ, ಗ್ರಾಪಂ ಸದಸ್ಯೆ ಸುಮಂಗಲಾ ಕಲ್ಲಾಪೂರ, ರಕ್ಷಣಾ ವೇದಿಕೆ ಅಧ್ಯಕ್ಷ ಮೈನುದ್ದೀನ್ ನದಾಫ್, ಗ್ರಾಪಂ ಉಪಾಧ್ಯಕ್ಷೆ ರೇಣುಕ ತೆಗ್ಗಿ, ಸದಸ್ಯೆ ಸುಧಾ ಎಲಿಗಾರ, ಶೋಭಾ ಚಲವಾದಿ, ಬಸವರಾಜ ಗುಡದೂರ, ವಿಶ್ವನಾಥ ಮಾಸ್ತರ, ಜಗದೀಶ ಅಳ್ಳೂಳ್ಳಿ, ಬಸವರಾಜ ಜಾಲಿಹಾಳ, ಬಿ.ಪಿ.ಮಾದರ, ಹೇಮರಡ್ಡಿ ಅರಹುಣಸಿ, ನಿರ್ಮಲಾ ಬಾರಕೇರ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.