ಅವ್ಯವಸ್ಥೆ ಆಗರ ಮಹಿಳಾ ಗ್ರಂಥಾಲಯ
Team Udayavani, Dec 4, 2019, 5:11 PM IST
ಗಜೇಂದ್ರಗಡ: ಮಹಿಳೆಯರ ಜ್ಞಾನದೀವಿಗೆಯಾಗಬೇಕಿದ್ದ ಮಹಿಳಾ ಗ್ರಂಥಾಲಯ ಅವ್ಯವಸ್ಥೆಯ ಆಗರವಾಗಿದೆ. ಗ್ರಂಥಾಲಯ ಕಟ್ಟಡಕ್ಕೆ ಬೀಗ ಹಾಕಿದ್ದು, ದಶಕಗಳಿಂದ ಹಿಡಿದ ಗ್ರಹಣ ಇನ್ನೂ ಬಿಡದಂತಾಗಿದೆ.
2001ರಲ್ಲಿ ಪುರಸಭೆಯ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆ ಅಡಿಯಲ್ಲಿ 1.40 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಅಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ಪುರಸಭೆ ಬಳಿ ಈ ಕಟ್ಟಡ ನಿರ್ಮಿಸಲಾಗಿತ್ತು. ಇದೀಗ ಪುಸ್ತಕಗಳ ಗೋದಾಮು ಆಗಿ ಪರಿವರ್ತನೆಗೊಂಡಿದೆ. ಆರಂಭದ ಕೆಲ ದಿನಗಳನ್ನು ಹೊರತು ಪಡಿಸಿದರೆ, ಈವರೆಗೂ ಇದ್ದೂ ಇಲ್ಲದಂತಾಗಿದೆ.
2001ರಲ್ಲಿ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಉದ್ಘಾಟನೆಗೊಂಡ ಈ ಮಹಿಳಾ ಗ್ರಂಥಾಲಯ ಸ್ಥಿತಿ ಶೋಚನೀಯವಾಗಿದೆ. ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ಹಂತ ತಲುಪಿದೆ. ಮಳೆ ಬಂದರೆ ಸಾಕುಪುಸ್ತಕಗಳೆಲ್ಲ ನೀರಿನಲ್ಲೇ ತೇಲಾಡುತ್ತವೆ. ಕಟ್ಟಡದ ಮುಂಭಾಗ ಅಪಾಯದ ಅಂಚಿನಲ್ಲಿದೆ. ದುರಸ್ತಿ ಕೈಗೊಳ್ಳಿ ಎಂದು ಹಲವು ಬಾರಿ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪ.
ನಿರ್ಲಕ್ಷಿತ ಗ್ರಂಥಾಲಯ: ದಿನದಿಂದ ದಿನಕ್ಕೆಬೆಳೆಯುತ್ತಿರುವ ಪಟ್ಟಣಕ್ಕೆ ಗ್ರಂಥಾಲಯ ಅವಶ್ಯವಿದೆ. ಹೆಚ್ಚುವರಿ ಕಟ್ಟಡದ ಕೊರತೆ ಮಾತ್ರ ತೀವ್ರ ಕಾಡುತ್ತಿದೆ. ಈ ಗ್ರಂಥಾಲಯಸರಕಾರದ ಅ ಧಿನಕ್ಕೆ ಒಳಪಟ್ಟ ಮೇಲೆ 122×66 ವಿಸ್ತೀರ್ಣದ ಜಾಗವಿದ್ದರೂ ಕೇವಲ 21×15 ಜಾಗೆಯಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಸದ್ಯ ಇರುವ ಕಟ್ಟಡ ಮುಂಭಾಗದಲ್ಲಿಯೇ ಗ್ರಂಥಾಲಯಕ್ಕೆ ಸಂಬಂಧಿಸಿದ ಜಾಗೆ ಇದ್ದರೂ ಸಹ ಕಟ್ಟಡ ನಿರ್ಮಿಸುವ ಬಗ್ಗೆ ಪುರಸಭೆ ಇಚ್ಚಾಶಕ್ತಿ ಪ್ರದರ್ಶಿಸದಿರುವುದರಿಂದ ಮಹಿಳೆಯರಿಗೆ ಗ್ರಂಥಾಲಯದ ಭಾಗ್ಯದೊರೆಯದಂತಾಗಿದೆ ಎಂದು ಓದುಗರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಹೆಸರಿಗಷ್ಟೇ ಗ್ರಂಥಾಲಯ: ಇಲ್ಲಿ ಹೆಸರಿಗಷ್ಟೇ ಮಹಿಳಾ ಗ್ರಂಥಾಲಯ ನಿರ್ಮಿಸಿದ್ದು, ಸೇವೆಗೆ ಮಾತ್ರ ಅಣಿಗೊಳಿಸಿಲ್ಲ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡ, ವಿದ್ಯುತ್ ಸೌಲಭ್ಯವಿಲ್ಲ. ಸಮರ್ಪಕ ಆಸವ ವ್ಯವಸ್ಥೆ ಇಲ್ಲದ ಪರಿಣಾಮ ದಶಕಗಳಿಂದ ಈ ಭಾಗದ ಮಹಿಳೆಯರು ಗ್ರಂಥಾಲಯದಿಂದ ವಂಚಿತರಾಗಿದ್ದಾರೆ.
ಗ್ರಂಥಗಳ ಭಂಡಾರ: ಗ್ರಂಥಾಲಯ ಹೊರ ನೋಟಕ್ಕಷ್ಟೇ ಓಬೇರಾಯನ ಕಾಲದಂತೆ ಕಂಡರೂ ಒಳ ಸುಳಿವು ಮಾತ್ರ ಬಹುದೊಡ್ಡದಾಗಿ ಹಬ್ಬಿದೆ. 35 ಸಾವಿರಕ್ಕೂ ಅಧಿಕ ವಿವಿಧ ಭಾಷೆಯಪುಸ್ತಕಗಳಿವೆ. ಆದರೆ ಬಹು ಮೌಲ್ಯದ ಪುಸ್ತಕ, ಮೇಜು–ಕುರ್ಚಿಗಳನ್ನು ಹೊಂದಿರುವ ಈ ಮಹಿಳಾಗ್ರಂಥಾಲಯ ಸಾರ್ವಜನಿಕರಿಗೆ ಸೇವೆ ನೀಡದೇ ಇದ್ದುದರಿಂದ ಪುಸ್ತಕಗಳು ಧೂಳು ಹಿಡಿದಿವೆ. ವಾಚನಾಲಯ ಉದ್ಘಾಟನೆಗೊಂಡಾಗ ಸಂತಸಗೊಂಡಿದ್ದ ಮುಖಗಳು ಈಗ ಬಾಡಿ ಹೋಗಿವೆ. ಮಹಿಳೆಯರು ಅಕ್ಷರವಂತರಾಗಿಶೈಕ್ಷಣಿಕ ಪ್ರಗತಿ ಸಾ ಧಿಸಿದರೆ, ಮಾತ್ರ ಸಮ ಸಮಾಜ ನಿರ್ಮಿಸಲು ಸಾಧ್ಯವೆಂದು ಗಂಟೆಗಟ್ಟಲೇ ಭಾಷಣ ಬಿಗಿಯುವವರಿಗೆ ಪಟ್ಟಣದಲ್ಲಿರುವ ಮಹಿಳಾ ಗ್ರಂಥಾಲಯ ಬಗ್ಗೆ ಯಾಕಿಷ್ಟು ಉದಾಸೀನ ಎಂಬುದು ತಿಳಿಯದಾಗಿದೆ.
ಬೇಕಿದೆ ಇಚ್ಛಾಶಕ್ತಿ: ಮಹಿಳೆಯೊಬ್ಬಳು ಕಲಿತರೆ ಇಡೀ ಸಮುದಾಯ ಕಲಿತಂತೆ, ಬೇಟಿ ಬಚಾವೋ,ಬೇಟಿ ಪಡಾವೋ ಎಂಬ ಮಾತನ್ನು ಸರ್ಕಾರಗಳು ಮರೆತಂತಿದೆ.
-ಡಿ.ಜಿ. ಮೋಮಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.