ಆಹಾರ ಕಲಬೆರಕೆ ದಂಧೆಗೆ ಕಡಿವಾಣ ಅಗತ್ಯ


Team Udayavani, Dec 21, 2017, 4:51 PM IST

21-23.jpg

ಗದಗ: ಆಹಾರ ದೇಹದ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ನಾವು ತಿನ್ನುವ ಪದಾರ್ಥ ಕಲಬೆರಕೆಯಿಂದ ಕೂಡಿದ್ದರೆ ದೇಹ, ಮನಸ್ಸು, ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ
ಕಂಟಕಪ್ರಾಯವಾಗುತ್ತದೆ. ದುಡ್ಡಿನ ಆಸೆಗಾಗಿ ಇಂಥ ಕರಾಳ ದಂಧೆಯಲ್ಲಿ ತೊಡಗಿರುವ ವ್ಯಕ್ತಿಗಳು ಸಮಾಜದ್ರೋಹಿಗಳು ಅಲ್ಲದೇ ಇಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದು ಅಗತ್ಯ ಎಂದು ಡಾ| ತೋಂಟದ ಸಿದ್ಧಲಿಂಗಸ್ವಾಮಿಗಳು ತಿಳಿಸಿದರು.

ಜ. ತೋಂಟದಾರ್ಯ ಮಠದಲ್ಲಿ ಜರುಗಿದ ಶಿವಾನುಭವ ಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಹೆಣ್ಣುಮಕ್ಕಳು ಈ ಬಗ್ಗೆ ನಿಗಾವಹಿಸಿ ದೇಹಕ್ಕೆ ಅಗತ್ಯವಾದ ಸಮತೋಲನ ಆಹಾರವನ್ನು ತಯಾರಿಸುವ ಮತ್ತು ಒದಗಿಸುವ ದಿಸೆಯಲ್ಲಿ
ಪ್ರಜ್ಞಾವಂತರಾಗಬೇಕೆಂದು ತಿಳಿಸಿದರು. ಆಹಾರ ಕಲಬೆರಕೆ ಕುರಿತು ಉಪನ್ಯಾಸ ನೀಡಿದ ವಿಜ್ಞಾನ ಪರಿಷತ್ತಿನ ಮಾಜಿ ಕಾರ್ಯದರ್ಶಿ ಪ್ರೊ| ಸಿ.ಡಿ. ಪಾಟೀಲ ಅವರು, ಇಂದಿನ ಯುವಜನತೆ ರಸ್ತೆ ಬದಿಯ ಆಹಾರ ಮತ್ತು ಜಂಕ್‌ ಫುಡ್‌ಗೆ ಜೋತು ಬಿದ್ದಿರುವುದು ವಿಪರ್ಯಾಸ ಸಂಗತಿ. ಶುಚಿತ್ವ ಮತ್ತು ಸಮತೋಲಿತವಲ್ಲದ ಆಹಾರದ ಸೇವೆನೆಯಿಂದ ಅನೇಕ ರೋಗಗಳಿಗೆ ತುತ್ತಾಗುವ
ಸಂಭವವಿದೆ. ಮನುಷ್ಯನ ದುರಾಸೆಯಿಂದ ಆಹಾರದಲ್ಲಿ ಕಲಬೆರಕೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.

ಚಹಪುಡಿ, ಕಾಫಿಪುಡಿ, ಬೇಳೆ, ಮಸಾಲೆ ಪದಾರ್ಥಗಳು, ಬೆಣ್ಣೆ ಮುಂತಾದ ಪದಾರ್ಥಗಳಲ್ಲಿ ಕಲಬೆರಕೆಯನ್ನು ಕಾಣಬಹುದು. ಅಲ್ಲದೇ
ಅನೈಸರ್ಗಿಕವಾಗಿ, ಅನೇಕ ರಾಸಾಯನಿಕಗಳನ್ನು ಬಳಸಿ ಕಾಯಿಗಳನ್ನು ಹಣ್ಣುಗಳನ್ನಾಗಿಸುವ ಕಾರ್ಯ ನಡೆದಿದೆ. ಸಾಫ್ಟ್‌ ಡಿಂಕ್ಸ್‌ ಗಳ
ನಿಯಮಿತ ಸೇವನೆಯಿಂದ ಹಲ್ಲು ಮತ್ತು ಉದರದ ಸಮಸ್ಯೆಗಳು ಉಲ್ಬಣವಾಗುತ್ತವೆ. ಈ ಕುರಿತಾಗಿ ಜನರಲ್ಲಿ ಜಾಗೃತಿ ಅಗತ್ಯವಾಗಿದೆ ಎಂದು ತಿಳಿಸಿದರು.

ಇಂಡೋ-ಸೋಷಿಯೋ ಡೆವಲಪ್‌ಮೆಂಟ್‌ ಅಸೋಶಿಯೇಶನ್‌ ನವದೆಹಲಿ ಇವರಿಂದ ಭಾರತದ ಶ್ರೇಷ್ಠ ಶಿಕ್ಷಣ ತಜ್ಞ ಪ್ರಶಸ್ತಿಗೆ ಭಾಜನರಾದ ಜ. ತೋಂಟದಾರ್ಯ ಇಂಜನೀಯರಿಂಗ್‌ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ| ಕೆ. ಕೊಟ್ರೇಶ ಅವರು ಪೂಜ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸತತ ಪರಿಶ್ರಮದಿಂದ ವ್ಯಕ್ತಿ ಮೇಲೆರಲು ಸಾಧ್ಯ. ಸಾಧನೆಗೆ ಜಾತಿ, ಧರ್ಮ, ಅಂತಸ್ತುಗಳು
ಅಡ್ಡಿ ಬರಲಾರವು. ಛಲ ಬಿಡದಂತೆ ಸಾಧಿಸಿದ ಸಾಧನೆಯನ್ನು ಕೋಟ್ರೇಶ್‌ ಅವರು ವಿವರಿಸಿದರು.

ಲಿಂಗನಗೌಡ ದೇಸಾಯಿ, ಶಾಂತಲಾ ಕಾಮತ, ನಮಿತಾ ಕಾಮತ ಹಾಗೂ ತಂಡದವರಿಂದ ವಚನ ಸಂಗೀತ ಜರುಗಿತು. ರಕ್ಷಿತಾ ಶಿವಕುಮಾರ ಜೋಳದ ಧರ್ಮಗ್ರಂಥ ಪಠಿಸಿದರು. ಅನುಪಮಾ ಜೋಳದ ವಚನ ಚಿಂತನ ನೆರವೇರಿಸಿದರು. ಸೇವಾಕರ್ತರಾದ ವಾಗೀಶಗೌಡ ಎಸ್‌. ಪಾಟೀಲ ಅರಹುಣಸಿ, ನಗರಸಭೆ ವ್ಯವಸ್ಥಾಪಕರಾದ ವಿಜಯಲಕ್ಷ್ಮೀ ಮುಟಗಾರ ವೇದಿಕೆ ಮೇಲೆ ಉಪಸ್ಥಿತರಿದ್ದರು. ರತ್ನಕ್ಕ ಪಾಟೀಲ ನಿರೂಪಿಸಿದರು. ಶಿವಾನುಭವ ಸಮಿತಿ ಚೇರಮನ್‌ ವಿವೇಕಾನಂದಗೌಡ ಪಾಟೀಲ ಸ್ವಾಗತಿಸಿದರು. 

ಸಂಘದ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳೊಳ್ಳಿ, ದಾನಯ್ಯ ಗಣಾಚಾರಿ, ಅಕ್ಕಮಹಾದೇವಿ ಚೆಟ್ಟಿ, ಚೇತನ ಅಂಗಡಿ, ಶಿವನಗೌಡ ಗೌಡರ, ನಿಂಗಪ್ಪ ಪೂಜಾರ ಮೊದಲಾದವರು ಭಾಗವಹಿಸಿದ್ದರು. 

ಟಾಪ್ ನ್ಯೂಸ್

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

Sheikh ಹಸೀನಾರನ್ನು‌ ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ

1-qwqwewq

Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

Rachel David hope on Unlock Raghava Movie

Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್‌

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.