ಚಾಲೂ ಆಗದ ತ್ರಿಚಕ್ರ ವಾಹನ!
Team Udayavani, Sep 3, 2018, 4:23 PM IST
ಗದಗ: ಸ್ಥಳೀಯ ಶಾಸಕರಿಗೆ ಸಮಯ ಸಿಗದಿರುವುದು ಹಾಗೂ ಚುನಾವಣಾ ನೀತಿ ಸಂಹಿತೆಯಿಂದ ಮೂರು ತಿಂಗಳು ಕಳೆದರೂ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತಣೆಯಾಗಿಲ್ಲ. ಹೀಗಾಗಿ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ನಿಲ್ಲಿಸಿರುವ 70ಕ್ಕೂ ಹೆಚ್ಚು ವಾಹನಗಳು ಫಲಾನುಭವಿಗಳ ಕೈಸೇರುವ ಮುನ್ನವೇ ತುಕ್ಕು ಹಿಡಿಯುತ್ತಿವೆ!
ಕರ್ನಾಟಕ ಸರಕಾರದ ವಿಕಲಚೇತನ ಹಾಗೂ ಹಿರಿಯ ನಾಗಕರಿಕರ ಸಬಲೀಕರಣ ಇಲಾಖೆಯಿಂದ 2017-18ನೇ ಸಾಲಿಗೆ ಗದಗ ವಿಧಾನಸಭಾ ಕ್ಷೇತ್ರಕ್ಕೆ 78 ಯಂತ್ರಚಾಲಿತ ತ್ರಿಚಕ್ರ ವಾಹನಗಳು ಬಿಡುಗಡೆಯಾಗಿವೆ. ವಾಹನಗಳ ವಿತರಣೆಗೆ ಶಾಸಕರ ದಿನಾಂಕ ನಿಗದಿಯಾಗದೇ ಧೂಳು ತಿನ್ನುತ್ತಿವೆ.
ಗದಗ ಕ್ಷೇತ್ರದಲ್ಲೇ ಬಾಕಿ: ವಿಕಲಚೇತನ ಹಾಗೂ ಹಿರಿಯ ನಾಗಕರಿಕರ ಸಬಲೀಕರಣ ಇಲಾಖೆಯಿಂದ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ವಾರ್ಷಿಕ 18-20 ತ್ರಿಚಕ್ರ ವಾಹನ ಬಿಡುಗಡೆಯಾಗುತ್ತವೆ. ಆದರೆ, 2017-18ನೇ ಸಾಲಿನಲ್ಲಿ ಗದಗಿನ 78 ಸೇರಿದಂತೆ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಿಗೆ ಒಟ್ಟು 138 ತ್ರಿಚಕ್ರ ವಾಹನಗಳು ಮಂಜೂರಾಗಿದ್ದವು. ಮಾರಾಟ ಮಳಿಗೆಯಿಂದ ಕಳೆದ ಜೂನ್ ತಿಂಗಳಲ್ಲೇ ಪೂರೈಕೆಯಾಗಿದ್ದು, ಗದಗ ಕ್ಷೇತ್ರದಲ್ಲಿ ಮಾತ್ರ ವಿತರಣೆಯಾಗಿಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಗದುಗಿಗೆ ಹೆಚ್ಚು ವಾಹನ: ಕಳೆದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಥ್ ರಾಜ್ ಸಚಿವರೂ ಆಗಿದ್ದ ಸ್ಥಳೀಯ ಶಾಸಕ ಎಚ್. ಕೆ. ಪಾಟೀಲ, ತಮ್ಮ ಸ್ವಕ್ಷೇತ್ರದ ವಿಕಲಚೇತನರಿಗೆ ಗರಿಷ್ಠ ಸಂಖ್ಯೆಯಲ್ಲಿ ತ್ರಿಚಕ್ರ ವಾಹನ ಒದಗಿಸಲು ಉದ್ದೇಶಿಸಿದ್ದರು. ಅದರಂತೆ ವಿಕಲಚೇತನ ಹಾಗೂ ಹಿರಿಯ ನಾಗಕರಿಕರ ಸಬಲೀಕರಣ ಇಲಾಖೆಯಿಂದ ಗದುಗಿಗೆ ಹೆಚ್ಚುವರಿಯಾಗಿ 60 ಸೇರಿದಂತೆ ಒಟ್ಟು 78 ವಾಹನಗಳನ್ನು ಮಂಜೂರು ಮಾಡಿಸಿದ್ದರು.
ಕಳೆದ ಮಾರ್ಚ್‌ನಲ್ಲೇ ಬಿಡುಗಡೆ ಆಗಬೇಕಿದ್ದ ತ್ರಿಚಕ್ರ ವಾಹನಗಳು ವಿಧಾನಸಭಾ ಚುನಾವಣೆ ಘೋಷಣೆಯಿಂದಾಗಿ ಜೂನ್‌ನಲ್ಲಿ ಬಂದಿವೆ. ಈ ವೇಳೆಗೆ ನೂತನ ಸರಕಾರ ಅಧಿಕಾರಕ್ಕೆ ಬಂದಿದ್ದರೂ ಸಚಿವ ಸಂಪುಟ ರಚನೆ, ಮತ್ತಿತರೆ ಕಾರಣಗಳಿಂದಾಗಿ ತ್ರಿಚಕ್ರ ವಾಹನಗಳ ವಿತರಣೆ ನೆನೆಗುದಿಗೆ ಬಿದ್ದಿತ್ತು. ಆನಂತರ ಆ. 15ರ ಸ್ವಾತಂತ್ರ್ಯೋತ್ಸವ ದಿನದಂದು ವಿತರಣೆಗೆ ಇಲಾಖೆಯಿಂದ ಸಿದ್ಧತೆ ನಡೆದಿತ್ತಾದರೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಡ್ಡಿಯಾಗಿ ಮತ್ತಷ್ಟು ವಿಳಂಬವಾಗುತ್ತಿದೆ ಎನ್ನಲಾಗಿದೆ.
ನಿಂತಲ್ಲೇ ತುಕ್ಕು ಹಿಡಿಯುತ್ತಿವೆ
ವಿಕಲಚೇತನರಿಗೆ ಆಸರೆಯಾಗಲಿ ಎಂಬ ಉದ್ದೇಶದಿಂದ ಮಂಜೂರಾಗಿರುವ ತ್ರಿಚಕ್ರ ವಾಹನಗಳು ಫಲಾನುಭವಿಗಳ ಕೈಸೇರುವ ಮುನ್ನವೇ ಕಳೆಗುಂದುತ್ತಿವೆ. ಕಸಾಪ ಭವನದ ಆವರಣದಲ್ಲಿ ನಿಲ್ಲಿಸಿರುವ ವಾಹನಗಳಿಗೆ ನೆರಳಿಲ್ಲದೇ ಬಿಸಿಲಿಗೆ ಬಣ್ಣ ಮಾಸುತ್ತಿದೆ. ಮಳೆಯಿಂದಾಗಿ ವಾಹನಗಳ ಕಬ್ಬಿಣದ ಬಿಡಿ ಭಾಗಗಳು ತುಕ್ಕು ಹಿಡಿಯುತ್ತಿವೆ. ಅಲ್ಲದೇ ಕಿಡಿಕೇಡಿಗಳ ಕೃತ್ಯದಿಂದ ಸಣ್ಣಪುಟ್ಟ ಬಿಡಿಭಾಗಗಳು ಜಖಂಗೊಂಡಿವೆ. ಇನ್ನೂ ಕೆಲ ವಾಹನಗಳ ನಂಬರ್ ಪ್ಲೇಟ್‌ಗಳೇ ಕಣ್ಮರೆಯಾಗಿರುವುದು ವಿಪರ್ಯಾಸ.
ತ್ರಿಚಕ್ರ ವಾಹನಗಳಿಗಾಗಿ ಪ್ರತಿನಿತ್ಯ ಫಲಾನುಭವಿಗಳು ಕಚೇರಿಗೆ ಅಲೆಯುತ್ತಾರೆ. ವಾಹನಗಳು ಬಂದಾಗಿನಿಂದ ಶಾಸಕ ಎಚ್.ಕೆ. ಪಾಟೀಲ ಅವರ ದಿನಾಂಕ ನಿಗದಿಗಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಆದರೆ, ವಿತರಣಾ ಸಮಾರಂಭಕ್ಕೆ ದಿನಾಂಕ ನಿಗದಿಯಾಗುತ್ತಿಲ್ಲ. ಶಾಸಕರು ಒಪ್ಪಿದರೆ ಸೆ. 4 ಅಥವಾ 5ರಂದು ವಿತರಿಸಲು ಚಿಂತನೆ ನಡೆಸಿದ್ದೇವೆ.
ಆಶು ನದಾಫ್,
ವಿಕಲಚೇತನ ಹಾಗೂ ಹಿರಿಯ ನಾಗಕರಿಕರ
ಸಬಲೀಕರಣ ಇಲಾಖೆ ಅಧಿಕಾರಿ
ತ್ರಿಚಕ್ರ ವಾಹನಕ್ಕಾಗಿ ಕಳೆದ ಬಾರಿಯೂ ಅರ್ಜಿ ಹಾಕಿದ್ದೆ, ಬಂದಿರಲಿಲ್ಲ. ಈ ಬಾರಿ ಮಂಜೂರಾಗಿದ್ದರೂ ವಿತರಣೆಯಾಗುತ್ತಿಲ್ಲ. ಬೈಕ್ ಕೋಡ್ರಿ ಅಂತಾ ಕೇಳ್ಳೋದ್ಕ ವಾರದಲ್ಲಿ ಎರಡು ದಿನ ವಿಕಲಚೇತನರ ಕಚೇರಿಗೆ ಬರುತ್ತಾ ಇದ್ದೇನೆ. ಅದ್ಯಾವಾಗ ಕೊಡ್ತಾರೋ ಗೊತ್ತಿಲ್ಲ.
ಫಲಾನುಭವಿ
ವೀರೇಂದ್ರ ನಾಗಲದಿನ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ
Madanthyar: ಬಾಲಕಿಯರ ಹಾಸ್ಟೆಲ್ ಕಟ್ಟಡ ಅನಾಥ!
Railway: ಪ್ರತಿ ಪ್ರಯಾಣದ ಬಳಿಕ ಹೊದಿಕೆಗಳನ್ನು ತೊಳೆಯುತ್ತಾರಾ? ಸಚಿವರು ಕೊಟ್ಟ ಉತ್ತರವೇನು?
Cyber Fraud Case: ದಾಳಿ ನಡೆಸಲು ಹೋದ ಇಡಿ ಅಧಿಕಾರಿಗಳ ಮೇಲೆಯೇ ತಂಡದಿಂದ ಹಲ್ಲೆ
Rashmika Mandanna; ಪುಷ್ಟ-3 ಸುಳಿವು ನೀಡಿದ ನಟಿ ರಶ್ಮಿಕಾ ಮಂದಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.