ಪುಸ್ತಕಗಳಿಲ್ಲದ ಜಗತ್ತು ಅಂಧಕಾರದಲ್ಲಿರುತ್ತಿತ್ತು: ಸ್ವಾಮೀಜಿ
ಮಹಾಭಾರತ-ರಾಮಾಯಣಗಳು, 12ನೇ ಶತಮಾನದ ವಚನ ಸಾಹಿತ್ಯ ಇಂದಿಗೂ ಸ್ಫೂರ್ತಿಯ ಸೆಲೆಯಾಗಿವೆ
Team Udayavani, Apr 29, 2022, 6:43 PM IST
ಗದಗ: ಎಷ್ಟು ಬಳಸಿದರೂ ನಶಿಸದ, ಬಳಸಿದಂತೆಲ್ಲಾ ಹೆಚ್ಚುವ ವಸ್ತು ಜ್ಞಾನ. ಅಂಥ ಜ್ಞಾನವನ್ನು ನೀಡುವ ಪುಸ್ತಕಗಳು ಇರದಿದ್ದರೆ, ಈ ಜಗತ್ತು ಇನ್ನೂ ಅಂಧಕಾರದಲ್ಲಿ ಇರುತ್ತಿತ್ತು ಎಂದು ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಗರದ ತೋಂಟದಾರ್ಯ ಮಠದಲ್ಲಿ 2586ನೇ ಶಿವಾನುಭವದಲ್ಲಿ “ವಿಶ್ವ ಪುಸ್ತಕ ದಿನ’ದ ಅಂಗವಾಗಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಅನೇಕ ಸಾಧಕರು ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸಿ ಜಗತ್ತಿಗೆ ಬೆಳಕು ನೀಡಿದ್ದಾರೆ. ಜಗತ್ತು ಕಂಡ ಶ್ರೇಷ್ಠ ವ್ಯಕ್ತಿಗಳು ಪುಸ್ತಕಗಳಿಂದ ಪ್ರೇರೇಪಿತರಾಗಿದ್ದಾರೆ.
ಸಾವಿರಾರು ವರ್ಷಗಳ ಹಿಂದೆ ರಚಿಸಲ್ಪಟ್ಟ ಮಹಾಭಾರತ-ರಾಮಾಯಣಗಳು, 12ನೇ ಶತಮಾನದ ವಚನ ಸಾಹಿತ್ಯ ಇಂದಿಗೂ ಸ್ಫೂರ್ತಿಯ ಸೆಲೆಯಾಗಿವೆ. ವ್ಯಕ್ತಿತ್ವ ಗಟ್ಟಿಗೊಳಿಸಲು, ಬದುಕು ಕಟ್ಟಿಕೊಳ್ಳಲು ಓದುವುದು ಅವಶ್ಯಕ ಎಂದರು.
ಪ್ರಾಧ್ಯಾಪಕ ಡಾ| ದತ್ತಪ್ರಸನ್ನ ಪಾಟೀಲ ಉಪನ್ಯಾಸ ನೀಡಿ, ಆಂಗ್ಲ ಭಾಷೆಯ ಖ್ಯಾತ ಲೇಖಕ ವಿಲಿಯಂ ಶೇಕ್ಸ್‌ಪಿಯರ್ ನಿಧನ ಹೊಂದಿದ ದಿನವಾದ ಏ.23ನ್ನು 1995 ರಿಂದ ವಿಶ್ವ ಪುಸ್ತಕ ದಿನವೆಂದು ಆಚರಿಸುತ್ತಾ ಬರಲಾಗಿದೆ. ಯುನಿಸೆಫ್-ಯುನೆಸ್ಕೂಗಳು ಸಹ ಈ ಆಚರಣೆಗೆ ಒತ್ತು ಕೊಟ್ಟಿವೆ. ಮಸ್ತಕದ ಜ್ಞಾನವನ್ನು ಹೆಚ್ಚಿಸುವ ಪುಸ್ತಕಗಳು ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು. ಕನ್ನಡ ವಿಶ್ವ ವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದ ಉಪನ್ಯಾಸಕ ದತ್ತಪ್ರಸನ್ನ ಪಾಟೀಲರನ್ನು ಸನ್ಮಾನಿಸಲಾಯಿತು.
ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನ ಸಂಗೀತ ನಡೆಸಿಕೊಟ್ಟರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ದಾನಯ್ಯ ಗಣಾಚಾರಿ, ಪದಾಧಿಕಾರಿಗಳಾದ ಮುರುಘೇಶ ಬಡ್ನಿ, ರತ್ನಕ್ಕ ಪಾಟೀಲ, ವೀರೇಶ ಬುಳ್ಳಾ, ಸೋಮು ಪುರಾಣಿಕ, ಮಲ್ಲಿಕಾರ್ಜುನ ಖಂಡೆಮ್ಮನವರ, ಶಿವಬಸಪ್ಪ ಯಂಡಿಗೇರಿ, ಶಿವಾನುಭವ ಸಮಿತಿ ಚೇರಮನ್ ವಿವೇಕಾನಂದಗೌಡ ಪಾಟೀಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.