ಲಖಮಾಪುರ ಗ್ರಾಮ ಸ್ಥಳಾಂತರಕ್ಕೆ ಚಿಂತನೆ
ನಿಶ್ಚಿತವಾಗಿ ಪ್ರವೇಶಿಸಲಿರುವ ಕೊರೊನಾ ಮೂರನೇ ಅಲೆ ಭೀಕರವಾಗಿದೆ
Team Udayavani, Jan 6, 2022, 12:22 PM IST
ನರಗುಂದ: ಸಣ್ಣ ಗ್ರಾಮ ಲಖಮಾಪುರ ಸ್ಥಳಾಂತರಕ್ಕೆ ಇನ್ನೂ ಕಾಲ ಕೂಡಿ ಬಂದಂತಿಲ್ಲ. ಕಂದಾಯ ವ್ಯಾಪ್ತಿಯ ತೊಡಕಿನಿಂದಾಗಿ ಈ ಗ್ರಾಮ ಬೇರೆ ಜಿಲ್ಲೆಗೆ ಹೋಗದಂತೆ ಸ್ಥಳಾಂತರ ಮಾಡುವ ಬಗ್ಗೆ ಸಾಕಷ್ಟು ಚಿಂತನೆ ನಡೆಸಲಾಗಿದೆ ಎಂದು ಲೋಕೋಪಯೋಗಿ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ತಾಲೂಕಿನ ಗಡಿ ಗ್ರಾಮ ಲಖಮಾಪುರ ಗ್ರಾಮದ 2 ಕಿಮೀ ಮುಖ್ಯರಸ್ತೆಯನ್ನು ಲೋಕೋಪಯೋಗಿ ಇಲಾಖೆ 3054 ಅತಿವೃಷ್ಟಿ ಅನುದಾನದಡಿ 1.5 ಕೋಟಿ ರೂ. ವೆಚ್ಚದಲ್ಲಿ ಸಿಡಿಗಳನ್ನು ಒಳಗೊಂಡ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ನಂತರ ನಡೆದ ಸಮಾರಂಭದಲ್ಲಿ ಸಚಿವರು ಮಾತನಾಡಿದರು.
ಸದ್ಯಕ್ಕೆ ಈ ಗ್ರಾಮದ ಜನರು ಪ್ರವಾಹ ಸಂದರ್ಭದಲ್ಲಿ ಸುರಕ್ಷಿತವಾಗಿ ಹೊರಗೆ ಬರುವಂತೆ ಅಗತ್ಯ ರಸ್ತೆ ಸುಧಾರಣೆಗೆ ಚಾಲನೆ ನೀಡಿದ್ದು, ಪ್ರವಾಹ ಸಂದರ್ಭದಲ್ಲಿ ಹಿನ್ನೀರು ಸರಾಗವಾಗಿ ಸಾಗುವಂತೆ ಎತ್ತರದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಒಂದೂವರೆ ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಗ್ರಾಮದ ಒಳಗಿನ ಸಿಸಿ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು.
ವೇಗವಾಗಿ ಹರಡುತ್ತಿದೆ 3ನೇ ಅಲೆ: ನಿಶ್ಚಿತವಾಗಿ ಪ್ರವೇಶಿಸಲಿರುವ ಕೊರೊನಾ ಮೂರನೇ ಅಲೆ ಭೀಕರವಾಗಿದೆ. ಈಗಾಗಲೇ ತಜ್ಞರ ಮಾಹಿತಿಯಂತೆ ಅದರ ಹರಡುವಿಕೆ ವೇಗವಾಗಿದೆ. ಸರ್ಕಾರ ಯಾವುದೇ ಕ್ಷಣ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ ಆಗುತ್ತದೆ. ಇದರಿಂದ ದುಡಿಯುವ ಜನರಿಗೆ ಬಹಳಷ್ಟು ತೊಂದರೆ ಜೊತೆಗೆ ಸರ್ಕಾರಕ್ಕೂ ಆರ್ಥಿಕ ಹೊರೆಯಾಗಲಿದೆ. ಫೆಬ್ರವರಿ ಅಂತ್ಯಕ್ಕೆ ಇದು ತಾರಕಕ್ಕೇರಲಿದೆ. ಆದ್ದರಿಂದ 2, 3 ತಿಂಗಳು ಮುಂಜಾಗ್ರತೆ ವಹಿಸಬೇಕಿದೆ. ಎಲ್ಲರೂ ಕಡ್ಡಾಯವಾಗಿ ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡು ಕೊರೊನಾ ವಿರುದ್ಧದ ಸರ್ಕಾರದ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಸಚಿವ ಸಿ.ಸಿ.ಪಾಟೀಲ ಮನವಿ ಮಾಡಿದರು.
ಗೋಪಾಲಜ್ಜ ಪೂಜಾರ, ವಾಸನ ಗ್ರಾಪಂ ಅಧ್ಯಕ್ಷೆ ಕಾಶವ್ವ ನೀಲರಡ್ಡಿ, ಉಪಾಧ್ಯಕ್ಷೆ ರುಕುಮವ್ವ ತಳವಾರ, ಸದಸ್ಯೆ ಯಲ್ಲಮ್ಮ ಮಾದರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ಎಸ್ .ಪಾಟೀಲ, ಶಂಕರಗೌಡ ನಡಮನಿ, ಗುರಪ್ಪ ಆದೆಪ್ಪನವರ, ತಿಪ್ಪಣ್ಣ ಹಿರ್ಲವರ, ಬಾಬು ಹಿರೇಹೊಳಿ, ವಿ.ಬಿ.ಕರಬಸಣ್ಣವರ, ಚಂದ್ರು ದಂಡಿನ, ಬಿ.ಬಿ.ಐನಾಪೂರ, ಮಲ್ಲಪ್ಪ ಮೇಟಿ, ನಿಂಗಪ್ಪ ಸೋಮಾಪೂರ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.