ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಭದ್ರತೆ
Team Udayavani, Apr 17, 2020, 5:11 PM IST
ನರಗುಂದ: ಬಾಗಲಕೋಟಿ-ಗದಗ ಜಿಲ್ಲೆಗಳ ಗಡಿಭಾಗ ಮತ್ತು ಹುಬ್ಬಳ್ಳಿ ಕಡೆಗೆ ಗದಗ-ಧಾರವಾಡ ಗಡಿಭಾಗದ ಚೆಕ್‌ಪೋಸ್ಟ್‌ಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಅಗತ್ಯ ಸೇವೆಗಳ ವಾಹನ ಹೊರತುಪಡಿಸಿ ಉಳಿದೆಲ್ಲ ವಾಹನಗಳ ಸಂಚಾರ ಮೊಟಕುಗೊಳಿಸಲು ಸೂಚಿಸಲಾಗಿದೆ ಎಂದು ಡಿಸಿ ಎಂ.ಜಿ.ಹಿರೇಮಠ ಹೇಳಿದರು.
ಗುರುವಾರ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಲ್ಲೆ ಗಡಿಗ್ರಾಮ ಕೊಣ್ಣೂರ ಮತ್ತು ಕಲಕೇರಿ ಗ್ರಾಮದ ಹೊರವಲಯ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಕಟ್ಟುನಿಟ್ಟಿನ ಸೂಚನೆ ನೀಡಿದ ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆ.7ರಿಂದ ರಾತ್ರಿ 10ಗಂಟೆವರೆಗೂ ಚೆಕ್‌ಪೋಸ್ಟ್‌ನಲ್ಲಿ ಬಿಗಿ ಕಣ್ಗಾವಲಿಗೆ ಸೂಚಿಸಲಾಗಿದೆ ಎಂದರು.
ನೆರೆಪೀಡಿತ ಪ್ರದೇಶ ಎಂದು ಘೋಷಿಸಲಾದ ಮಲಪ್ರಭಾ ನದಿ ಭಾಗದ ಕೊಣ್ಣೂರ ಗ್ರಾಮದ ಎಪಿಎಂಸಿ ಪ್ರಾಂಗಣಕ್ಕೆ ಭೇಟಿ ನೀಡಿ ತಾತ್ಕಾಲಿಕ ಶೆಡ್‌ನಲ್ಲಿ ವಾಸಿಸುತ್ತಿರುವ ಸಂತ್ರಸ್ತರ ಮೊರೆ ಆಲಿಸಲಾಗಿದೆ. ಮನೆ ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ಈಗಾಗಲೇ ಮಂಜೂರಾತಿ ನೀಡಿದ್ದು, ಎ ಮತ್ತು ಬಿ ಕೆಟೆಗೇರಿಯಲ್ಲಿ ಒಟ್ಟು 985 ಮನೆ ನಿರ್ಮಿಸಿಕೊಳ್ಳುತ್ತಿದ್ದು, 635 ಬುನಾದಿ, 189 ಸ್ಲ್ಯಾಬ್ ಹಂತದಲ್ಲಿದ್ದು, ಒಟ್ಟು 800 ಮನೆಗಳ ನಿರ್ಮಾಣ ಒಂದೊಂದು ಹಂತದಲ್ಲಿದೆ. ಮನೆ ನಿರ್ಮಾಣ ಕಾರ್ಯವನ್ನು ಎ.20ರಿಂದ ಪುನಃ ಪ್ರಾರಂಭಿಸುವಂತೆ ಸಂತ್ರಸ್ತರಿಗೆ ಸೂಚಿಸಲಾಯಿತು. ಜಿಲ್ಲೆಯಲ್ಲಿ 281 ಶಾಲೆಗಳ ದುರಸ್ತಿಗೆ ಅನುದಾನ ಬಿಡುಗಡೆಯಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಎನ್.ಯತೀಶ್, ಡಿವೈಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಡಿ.ಬಿ. ಪಾಟೀಲ, ತಹಶೀಲ್ದಾರ್ ಎ.ಎಚ್.ಮಹೇಂದ್ರ, ತಾಪಂ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ, ಸದಸ್ಯ ಪ್ರಭುಲಿಂಗಪ್ಪ ಯಲಿಗಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಕಾರು ಚಾಲಕ ಆತ್ಮಹತ್ಯೆ
Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
MUST WATCH
ಹೊಸ ಸೇರ್ಪಡೆ
Udupi: ಎರಡೇ ದಿನದಲ್ಲಿ ಬರಲಿದೆ, ವಾರಾಹಿ ನೀರು!
Udupi: ಫೆ.7ರಿಂದ 9ರವರೆಗೆ ಮಹಿಳಾ ಉದ್ಯಮಿಗಳ ಆರ್ಥಿಕ ಬಲವರ್ಧನೆಗಾಗಿ “ಪವರ್ ಪರ್ಬ 25′
Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ
Meera Movie: ತೆರೆಗೆ ಬರಲು ಸಜ್ಜಾದ ಮಹಿಳಾ ಪ್ರಧಾನ ತುಳು ಚಿತ್ರ ʼಮೀರಾʼ
Surathkal: ಹುಷಾರು, ಅಂಗಡಿ ಮುಚ್ಚಿದರೂ ಶುಲ್ಕ ಕಟ್ಟಬೇಕು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.