ಗತಕಾಲದ ಗ್ರಂಥಾಲಯಕ್ಕೆ ಬೇಕಿದೆ ಆಧುನಿಕ ರೂಪ!
Team Udayavani, Oct 25, 2019, 2:14 PM IST
ಶಿರಹಟ್ಟಿ: ಹಿರಿಯ ಹವ್ಯಾಸಿ ಓದುಗರು ಸ್ವಪ್ರಯತ್ನದಿಂದ ಸ್ಥಾಪಿಸಿ ಮುನ್ನಡೆಸಿಕೊಂಡು ಬಂದ ಶತಮಾನೋತ್ಸವ ಸಂಭ್ರಮ ಆಚರಿಸಿದ ನಗರದ ಲೋಕಮಾನ್ಯ ಟಿಳಕ ವಾಚನಾಲಯ ಕೇಂದ್ರಕ್ಕೆ ಆಧುನಿಕ ರೂಪ ಒದಗಿಸಬೇಕಿದೆ.
ಒಂದು ಕಾಲದಲ್ಲಿ ಶಿರಹಟ್ಟಿ ಪಟ್ಟಣ ಅಧ್ಯಯನಕ್ಕೆ ಪ್ರಮುಖ ಕೇಂದ್ರವಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಸ್ಥಾನ ಪಡೆದಿತ್ತು. ಓದುವ ಹವ್ಯಾಸ ಬೆಳೆಸಲು ಸರಕಾರದ ಯಾವುದೇ ಸಹಾಯಧನ ಅಪೇಕ್ಷಿಸದೆ 1852ರಲ್ಲಿ “ಲೋಕಮಾನ್ಯ ಟಿಳಕ ವಾಚನಾಲಯ’ ಕೇಂದ್ರವನ್ನು ಓದುಗರೇ ಸೇರಿ ಸ್ಥಾಪಿಸಿದ್ದಾರೆ.
ಈ ಗ್ರಂಥಾಲಯದಲ್ಲಿ ದಿನಪತ್ರಿಕೆಗಳು, ವಾರಪತ್ರಿಕೆಗಳು ಹೊರತುಪಡಿಸಿದರೆ ಉಳಿದ ಪುಸ್ತಕಗಳನ್ನು ಅಳವಡಿಸಲು ಸ್ಥಳದ ಕೊರತೆ ಇದೆ. ಅಲ್ಲದೇ ಅವುಗಳನ್ನು ಹೊಂದಿಸಿಡುವ ರ್ಯಾಕ್‌ಗಳು ಸಹ ಗತಕಾಲದ್ದಾಗಿವೆ. ಪೂರ್ವಜರು ಆರಂಭಿಸಿದ ವಾಚನಾಲಯ ಇಂದು ಸರಕಾರದ ಅ ಧೀನದಲ್ಲಿದ್ದರೂ ಸೊರಗಿ ತನ್ನ ನೈಜ ಸ್ವರೂಪ ಕಳೆದುಕೊಳ್ಳುತ್ತಿರುವುದು ಸಾಹಿತ್ಯಾಸಕ್ತರ ಮನ ಕಲುಕಿದೆ.
ವರ್ಣ ಚಿತ್ರಗಳ ರಕ್ಷಣೆಯಿಲ್ಲ: ಮರಾಠಾ ರಾಜವಂಶಸ್ಥರಾದ ಸಾಂಗ್ಲಿ ಮಹಾರಾಜರ ಆಡಳಿತಕ್ಕೆ ಸೇರಿದ ಶಿರಹಟ್ಟಿ ಭಾಗದ ಜನರ ಮಾತೃಭಾಷೆಯಾದ ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡಲು ಹಾಗೂ ಸಾಹಿತ್ಯಾಸಕ್ತರ ಕೋರಿಕೆ ಮೇರೆಗೆ ಈಗಿರುವ ಕಟ್ಟಡವನ್ನು ರಾಜವಂಶಸ್ಥರು ಗ್ರಂಥಾಲಯಕ್ಕೆ ಬಿಟ್ಟು ಕೊಟ್ಟಿದ್ದರು. ಎರಡು ಅಂತಸ್ತು ಹೊಂದಿರುವ ಕಟ್ಟಡದ ನೆಲ ಅಂತಸ್ತಿನಲ್ಲಿ ಅಂದಿನ ಕಾಲದ ರಾಜ ಮನೆತನದವರ, ಲೋಕಮಾನ್ಯ ಟಿಳಕರ ಹಾಗೂ ಗ್ರಂಥಾಲಯ ಸ್ಥಾಪನೆಗೆ ಶಕ್ತಿಯಾಗಿ ನಿಂತ ಅನೇಕ ಮಹನೀಯರ ಆ ಕಾಲದ ಅತ್ಯಮೂಲ್ಯ ವರ್ಣ ಚಿತ್ರಗಳು ಇಂದಿಗೂ ರಾರಾಜಿಸುತಿದ್ದು, ಅವುಗಳನ್ನು ರಕ್ಷಿಸುವುದು ಅವಶ್ಯವಿದೆ.
ಕಾದಂಬರಿಗಳಿಗೇ ಸೀಮಿತ: ನೆಲ ಅಂತಸ್ತಿನಲ್ಲಿ ವಾಚನಾಲಯ, ಮೇಲಿನ ಭಾಗದಲ್ಲಿ ಗ್ರಂಥಾಲಯ ವ್ಯವಸ್ಥೆಯಿದ್ದು, ಓದುಗರಿಗೆ ಪುಸ್ತಕಗಳ ಕೊರತೆ ಎದ್ದು ಕಾಣುತ್ತಿದೆ. ಪ್ರಸಕ್ತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲಬಲ್ಲ ಸಾಹಿತ್ಯ ಕೃತಿಗಳ ಕೊರತೆ ಗ್ರಂಥಾಲಯದಲ್ಲಿದ್ದು, ಕೇವಲ ನಾಟಕ, ಕಥೆ, ಕಾದಂಬರಿಗಳ ಗೂಡಾಗಿರುವ ಗ್ರಂಥಾಲಯ ಓದುಗರನ್ನು ಸೆಳೆಯುವಲ್ಲಿ ವಿಫಲವಾಗಿದೆ.
-ಪ್ರಕಾಶ ಮೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.