ಪಟ್ಟಣ ಪಂಚಾಯಿತಿ ತುರ್ತು ಸಾಮಾನ್ಯ ಸಭೆ
Team Udayavani, Mar 7, 2021, 7:01 PM IST
ಶಿರಹಟ್ಟಿ: ಪಪಂ ತುರ್ತು ಸಾಮಾನ್ಯ ಸಭೆಗೆ ಮನೋಟಿಸ್ ನೀಡಿದ ಮುಖ್ಯಾಧಿ ಕಾರಿಗಳೇ ತಾಂತ್ರಿಕ ಕಾರಣದಿಂದ ಗೈರು ಹಾಜರಾದ ಪ್ರಸಂಗ ಪಪಂನಲ್ಲಿ ಶನಿವಾರ ನಡೆಯಿತು.
ಈ ಹಿನ್ನೆಲೆಯಲ್ಲಿ ಆಹಾರ ನಿರೀಕ್ಷಕರು ನೀಡಿದ ಅಪೂರ್ಣ ಮಾಹಿತಿ ನೀಡಿದರು. ಅಲ್ಲದೇ, ಆಸ್ತಿ ತೆರಿಗೆ ಹೆಚ್ಚಿಸುವ ಕುರಿತು ಮತ್ತು ಪಪಂ ವ್ಯಾಪ್ತಿಯಲ್ಲಿ ಬರುವ ಖಾಲಿ ನಿವೇಶನ, ವಾಸದ ಮನೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ತೆರಿಗೆ ನಿಗದಿಪಡಿಸಿದ ಘಟನೆ ಜರುಗಿತು. ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಪಪಂ ಆದಾಯದ ಮೂಲ ಹೆಚ್ಚಿಸಲು ಹಾಗೂ ಕಟ್ಟಡ ಪರವಾನಗಿ, ಉತಾರ, ಉದ್ಯಮ ಶುಲ್ಕ, ಇತರ ತೆರಿಗೆಗಳ ನವೀಕರಣ ಅವಶ್ಯಕ. ಹೀಗಾಗಿ, ಸಾಮಾನ್ಯ ತುರ್ತು ಸಭೆ ಕರೆಯಲಾಗಿದೆ ಎಂದು ಹೇಳಿ ಪಪಂ ಅಧ್ಯಕ್ಷ ಪರಮೇಶ ಪರಬ ಸಭೆಗೆ ಚಾಲನೆ ನೀಡಿದರು.
ಆಹಾರ ನಿರೀಕ್ಷಕ ಎನ್.ಎಂ.ಹಾದಿಮನಿ ಅವರು ಸಭೆ ಮುಂದುವರೆಸಿ, ಸರ್ಕಾರದ ಸೂತ್ತೋಲೆ ಪ್ರಕಾರ ಪ್ರಸ್ತುತ 2020-21ನೇ ಸಾಲಿನಲ್ಲಿ ಖಾಲಿ ನಿವೇಶನಕ್ಕೆ 0.3 ರಷ್ಟು, ವಸತಿ ಮನೆಗೆ 0.6 ರಷ್ಟು, ವಾಣಿಜ್ಯ ತೆರಿಗೆ 0.6ರಷ್ಟು ನವೀಕರಿಸಿದ ತೆರಿಗೆಯನ್ನು ಸರ್ವ ಸದಸ್ಯರ ಒಪ್ಪಿಗೆ ಪಡೆದು ಠರಾವು ಪಾಸ್ ಮಾಡಲಾಯಿತು.
ನಂತರ ಸದಸ್ಯರು ಕಳೆದ ವರ್ಷ ಪಪಂಗೆ ಎಷ್ಟು ತೆರಿಗೆ ಸಂಗ್ರಹವಾಗಿತ್ತು, ಎಷ್ಟು ಗುರಿ ಸಾಧನೆಯ ಮೇಲೆ ತೆರಿಗೆ ನಿಗದಿಪಡಿಸಲಾಗಿದೆ ಎಂದು ಪ್ರಶ್ನಿಸಿದರು. ಆಗ ಆಹಾರ ನಿರೀಕ್ಷಕರು ಈ ಬಗ್ಗೆ ಮಾಹಿತಿ ತರಿಸಿ ಕೊಡುವುದಾಗಿ ಹೇಳಿದರು. ಬೀದಿ ದೀಪ ಸರಿಪಡಿಸಿ ಎಂದು ಹೇಳಿ ಹೇಳಿ ನಾಚಿಕೆಯಾಗಿದೆ ಎಂದು ಸದಸ್ಯ ರಟ್ಟಿಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಜನರಿಗೆ ಸಮರ್ಪಕವಾಗಿ ಉತಾರ ನೀಡಲು, ಬೀದಿ ದೀಪ ಅಳವಡಿಕೆ, ಹೈಮಾಸ್ಟ್ ರಿಪೇರಿ ಕುರಿತು ಸಾಕಷ್ಟು ಬಾರಿ ಹೇಳಿ ಹೇಳಿ ಸಾಕಾಯಿತು. ಆದರೆ, ಅಧಿ ಕಾರಿಗಳು ದುರಸ್ತಿ ಬಗ್ಗೆ ಕ್ರಮ ಕೈಕೊಳ್ಳದೇ ಜನರನ್ನು ಕಗ್ಗತ್ತಲಲ್ಲಿ ಓಡಾಡುವಂತೆ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಸದಸ್ಯ ಫಕ್ಕೀರೇಶ ರಟ್ಟಹಳ್ಳಿ ಅಸಮಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಪರಮೇಶ ಪರಬ, ಉಪಾಧ್ಯಕ್ಷ ಇಸಾಕ ಆದ್ರಳ್ಳಿ, ನೀಲವ್ವ ಹುಬ್ಬಳಿ, ಮಂಜುನಾಥ ಘಂಟಿ, ಸಂದೀಪ ಕಪ್ಪತ್ತನವರ, ರಾಜಣ್ಣ ಕಪ್ಪತ್ತನವರ, ಮಹದೇವ ಗಾಣಿಗೇರ, ಆಶ್ರತ್ ಡಾಲಾಯತ, ಹೊನ್ನಪ್ಪ ಶಿರಹಟ್ಟಿ, ಅನಿತಾ ಬಾರಬಾರ, ದೇವಪ್ಪ ಆಡೂರ, ಸರ್ವ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.