ನರಗುಂದ-ಗದಗ ಒಳರಸ್ತೆ ಸಂಚಾರ ಸ್ಥಗಿತ
Team Udayavani, Aug 16, 2019, 12:21 PM IST
ನರಗುಂದ: 2009ರಲ್ಲಿ ಉಕ್ಕಿ ಹರಿದ ಬೆಣ್ಣೆಹಳ್ಳದ ಪ್ರವಾಹಕ್ಕೆ ಕೊಚ್ಚಿಹೋಗಿ ಬಳಿಕ ಪುನರ್ ನಿರ್ಮಾಣಗೊಂಡಿದ್ದ ನರಗುಂದ-ಗದಗ ಒಳರಸ್ತೆಯಲ್ಲಿ ತಾಲೂಕಿನ ಕುರ್ಲಗೇರಿ-ತಡಹಾಳ ಮದ್ಯದ ಸೇತುವೆ ತಳಪಾಯ ಸಮೇತ ಕಿತ್ತು ಹೋಗಿದ್ದು, ಇದರ ಪರಿಣಾಮ ನರಗುಂದ-ಗದಗ ಒಳರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಪುನರ್ ನಿರ್ಮಾಣಗೊಂಡಿದ್ದ ಸೇತುವೆ ಈಗ ಮತ್ತೇ ಕಿತ್ತು ಹೋಗಿ ಪಾದಚಾರಿಗಳು ಕಾಲ್ನಡಿಗೆಯಲ್ಲೂ ತೆರಳಲಾಗದ ರೀತಿಯಲ್ಲಿ ಸೇತುವೆ ಪ್ರವಾಹದ ಹೊಡೆತಕ್ಕೆ ಕೊಚ್ಚಿ ಹೋಗಿದೆ. ಇದನ್ನು ಸಂಪರ್ಕಿಸುವ ಅರ್ಧ ಕಿಮೀನಷ್ಟು ರಸ್ತೆ ಸಹಿತ ಸಂಪೂರ್ಣ ತಳ ಸಹಿತವಾಗಿ ಕಿತ್ತು ಕೊಚ್ಚಿ ಹೋಗಿ ತನ್ನ ಅಸ್ತಿತ್ವ ಕಳೆದುಕೊಂಡಿದೆ.
ನರಗುಂದ-ಗದಗ ಸಂಪರ್ಕ ಮಾಡುವ ಈ ರಸ್ತೆಯನ್ನೇ ಅವಲಂಬಿಸಿದ್ದ ನಾಯಕನೂರ, ತಡಹಾಳ ಕೊಂಗವಾಡ, ಕಡದಳ್ಳಿ, ನಾಗನೂರ, ಗುಡಿಸಾಗರ, ಶಲವಡಿ ಗ್ರಾಮಗಳಿಗೆ ತೆರಳಬೇಕಾದರೆ ಸುಮಾರು 20 ಕಿಮೀ ಹೆಚ್ಚು ಅಂತರ ಕ್ರಮಿಸಬೇಕಾದ ಅನಿವಾರ್ಯತೆ ಬೆಣ್ಣೆಹಳ್ಳದ ಪ್ರವಾಹ ಸೃಷ್ಟಿಸಿದೆ.
ಬೆಣ್ಣೆಹಳ್ಳದ ನೀರು ಬಳಕೆ ಮಾಡಿ ಬನಹಟ್ಟಿ, ಕುರ್ಲಗೇರಿ, ಸುರಕೋಡ, ಯಾವಗಲ್, ಹದಲಿ, ಖಾನಾಪುರ, ಗಂಗಾಪುರ ರಡ್ಡೇರನಾಗನೂರ ಗ್ರಾಮ ವ್ಯಾಪ್ತಿಗಳಲ್ಲಿ ಬೆಳೆದಿದ್ದ ಹತ್ತಿ ಗೋವಿನಜೋಳ, ಶೇಂಗಾ, ಹೆಸರು, ಸೋಯಾಬಿನ್, ಸೂರ್ಯಕಾಂತಿ ಪೈರುಗಳು ನೆಲಕಚ್ಚಿ ಕೋಟ್ಯಂತರ ರೂ. ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ನರಗುಂದ: ಬೆಣ್ಣೆಹಳ್ಳದ ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ಕುರ್ಲಗೇರಿ- ತಡಹಾಳ ಸೇತುವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.