ಮಠಪತಿ ಹಳ್ಳದ ನೀರಿನಿಂದ ಸಂಚಾರಕ್ಕೆ ಸಂಚಕಾರ
Team Udayavani, Jan 25, 2020, 12:43 PM IST
ಲಕ್ಷ್ಮೇಶ್ವರ: ಬಾಲೇಹೊಸೂರ-ಇಚ್ಚಂಗಿ ರಸ್ತೆ ಮಧ್ಯ ಹರಿದಿರುವ ಮಠಪತಿ ಹಳ್ಳದ ನೀರು ಕಳೆದ ನಾಲ್ಕೈದು ತಿಂಗಳಿಂದ ನಿಂತು ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.
ಬಾಲೇಹೊಸೂರಿನಿಂದ ಇಚ್ಚಂಗಿ ಮಾರ್ಗವಾಗಿ ಹಾವೇರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತಿಯ ಈ ರಸ್ತೆಯಮೇಲೆ ಕಳೆದ ನಾಲ್ಕೈದು ತಿಂಗಳಿಂದಲೂ ನೀರು ನಿಂತು ಈ ಭಾಗದ ಜನರು, ರೈತರು, ವಾಹನ ಸವಾರರು, ಜಾನುವಾರುಗಳು ಪರದಾಡುತ್ತಿದ್ದಾರೆ. ಇದಕ್ಕೆ ಕಾರಣ ಪ್ರಸಕ್ತ ವರ್ಷ ಮುಂಗಾರಿನಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ರಸ್ತೆ ಮೇಲೆ ಹರಿದಿರುವ ಹಳ್ಳ ಜವುಳು ಬಿದ್ದಿದೆ. ಅಲ್ಲದೇ ಇದೇ ಹಳ್ಳಕ್ಕೆ ರಸ್ತೆ ಸಮೀಪದ ಹಳ್ಳಕ್ಕೆ ಬಾಂದಾರ ನಿರ್ಮಿಸಲಾಗಿದೆ.
ಹಳ್ಳದ ಮೇಲ್ಮಟ್ಟದಿಂದ ಹರಿದು ಬರುವ ನೀರನ್ನು ಬಾಂದಾರ ತಡೆ ಹಿಡಿಯುವುದರಿಂದ ರಸ್ತೆ ಮೇಲೆಯೇ ನೀರು ನಿಲ್ಲುತ್ತಿದೆ. ಬಾಂದಾರ ಹಳೆಯದಾಗಿದ್ದರೂ ಕಳೆದ ಎಳೆಂಟು ವರ್ಷಗಳಿಂದ ಮಳೆಯ ಪ್ರಮಾಣ ಅಷ್ಟಕ್ಕಷ್ಟೇ ಇದ್ದುದರಿಂದ ಈ ಸಮಸ್ಯೆ ಇರಲಿಲ್ಲ. ಈಗ ಈ ರಸ್ತೆಯ ಮೇಲೆ ಬಾಂದಾರದ ಹಿನ್ನೀರು ಮತ್ತು ಹಳ್ಳದ ನೀರು ನಿಲ್ಲುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ. ಅಲ್ಲದೇ ರಸ್ತೆ ಮೇಲೆ ನೀರು ನಿಂತು ತಗ್ಗು ಗುಂಡಿಗಳು ನಿರ್ಮಾಣವಾಗಿತ್ತು. ನಿತ್ಯ ಈ ಭಾಗದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
ಬಾಲೆಹೊಸೂರ- ಇಚ್ಚಂಗಿ ರಸ್ತೆ ಮೇಲೆ ನಿಲ್ಲುವ ಹಳ್ಳದ ನೀರಿನಿಂದಾಗುವ ಸಮಸ್ಯೆ ಪರಿಹಾರ ಕಂಡು ಕೊಳ್ಳಲು ಪ್ರಯತ್ನಿಸಲಾಗುವುದು ಮತ್ತು ಶಾಸ್ವತ ಪರಿಹಾರಕ್ಕಾಗಿ ಕಿರು ಸೇತುವೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು. ಅಲ್ಲದೇ ಶಾಸಕರು, ಜಿಪಂ ಸದಸ್ಯರು ಮತ್ತು ತಾಪಂ ಸದಸ್ಯರ ಗಮನಕ್ಕೆ ತಂದು ಅವರ ಅನುದಾನಕ್ಕೆ ಕೋರಲಾಗುದು. –ನಾಗರತ್ನಾ ಟಿ.ಎಂ., ಜಿಪಂ ಎಇಇ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.