ರೈಲ್ವೆ ಮೊರೆ ಹೋದ ಜನತೆ
Team Udayavani, Apr 10, 2021, 4:45 PM IST
ಗದಗ: 6ನೇ ವೇತನ ಆಯೋಗದ ಶಿಫಾರಸ್ಸು ಜಾರಿ ಮತ್ತಿತರೆ ಬೇಡಿಕೆಗಳಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಠಾವಧಿ ಮುಷ್ಕರಶುಕ್ರವಾರ ಮೂರನೇ ದಿನಕ್ಕೆ ಮುಂದುವರಿಯಿತು.
ಸಾರಿಗೆ ಬಸ್ ಸಮಸ್ಯೆಯಿಂದಾಗಿ ಅನೇಕರು ರೈಲ್ವೆ ಪ್ರಯಾಣಕ್ಕೆ ಮೊರೆಹೋದರು. ಈ ನಡುವೆ ಮಧ್ಯಾಹ್ನದಬಳಿಕ ಸಾರಿಗೆ ಸಂಸ್ಥೆಯ ನಾಲ್ಕು ಬಸ್‌ಗಳುಹುಬ್ಬಳ್ಳಿಗೆ ಕಾರ್ಯಾಚರಣೆ ಆರಂಭಿಸಿದವು. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಸಕಾಲಕ್ಕೆ ಬಸ್ ಇಲ್ಲದೇ ಪ್ರಯಾಣಿಕರಪರದಾಟ ಮುಂದುವರಿದಿದೆ. ಮುಷ್ಕರ ಆರಂಭಗೊಂಡು ಮೂರು ದಿನ ಕಳೆದರೂಬಸ್ ಸೇವೆ ಪುನಾರಂಭಗೊಳ್ಳದ್ದರಿಂದ ಕೆಲವರು ರೈಲ್ವೆ ಪ್ರಯಾಣಕ್ಕೆ ಮೊರೆ ಹೋದರು. ಹುಬ್ಬಳ್ಳಿ, ಧಾರವಾಡ,ಬೆಳಗಾವಿಗೆ ತೆರಳುವವರು ಹಾಗೂಹುಬ್ಬಳ್ಳಿಯಿಂದ ಬೇರೆ ರೈಲುಗಳ ಸಂಪರ್ಕ ದೊರೆಯುವ ವಿಶ್ವಾಸದಿಂದ ಅನೇಕರು ರೈಲ್ವೆ ಪ್ರಯಾಣಕ್ಕೆ ಮಣೆ ಹಾಕಿದರು.
ಕೊಪ್ಪಳ, ಹೊಸಪೇಟೆ, ಗಂಗಾವತಿಮಾರ್ಗವಾಗಿ ಚಲಿಸುವ ರೈಲಿನಲ್ಲಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ರೈಲ್ವೆಪ್ರಯಾಣಕ್ಕಾಗಿ ಕೆಲವರು ಮುಂಗಡವಾಗಿಸೀಟು ಕಾಯ್ದಿರಿಸಿದರೆ, ಇನ್ನೂ ಕೆಲವರು,ರೈಲುಗಳಿಗೆ ಕೌಂಟರ್‌ನಲ್ಲೇ ಸಾಮಾನ್ಯದರ್ಜೆ ಟಿಕೆಟ್ ಪಡೆದು ಪ್ರಯಾಣಬೆಳೆಸಿದರು. ಹೀಗಾಗಿ, ಶುಕ್ರವಾರ ನಗರದ ರೈಲ್ವೆ ನಿಲ್ದಾಣದಲ್ಲಿ ಜನಜಂಗುಳಿ ಹೆಚ್ಚಿತ್ತು.
ಸಾರಿಗೆ-ಖಾಸಗಿ ಚಾಲಕರ ವಾಗ್ವಾದ: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಖಾಸಗಿ ವಾಹನಗಳು ಬಸ್ ನಿಲ್ದಾಣಗಳಿಂದ ಸಂಚಾರಆರಂಭಿಸುತ್ತಿವೆ. ಮುಷ್ಕರದ ಮಧ್ಯೆಯೂಶುಕ್ರವಾರ ಮಧ್ಯಾಹ್ನದ ಬಳಿಕ ಒಂದಾದಬಳಿಕ ಮತ್ತೂಂದರಂತೆ ನಾಲ್ಕು ಬಸ್‌ಗಳು ಪಂ|ಪುಟ್ಟರಾಜಕವಿ ಗವಾಯಿ ಬಸ್‌ನಿಲ್ದಾಣಕ್ಕೆ ಆಗಮಿಸಿದ್ದು, ಹುಬ್ಬಳ್ಳಿ ಫ್ಲಾಟ್ ಫಾರ್ಮ್ನಲ್ಲಿ ನಿಂತಿದ್ದವು. ಇದರಿಂದಬೇಸರಗೊಂಡ ಖಾಸಗಿ ವಾಹನಗಳಮಾಲಿಕರು, ಒಮ್ಮೆ ಮುಷ್ಕರ ಎನ್ನುತ್ತೀರಿಮತ್ತೆ ಬಸ್ ತಂದೀರಿ. ನಮ್ಮ ವ್ಯಾಪಾರಕ್ಕೆಒಡೆತ ಬೀಳುತ್ತದೆ. ಒಂದು ನಿಲುವುಸ್ಪಷ್ಟಪಡಿಸಬೇಕು ಎಂದು ಸಾರಿಗೆ ಬಸ್‌ಮಾಲಿಕರೊಂದಿಗೆ ವಾಗ್ವಾದ ನಡೆಸಿದರು.
ಈ ವೇಳೆ ಮಾತಿನ ಚಕಮಕಿ ತಾರಕಕ್ಕೇರಿ, ಖಾಸಗಿ ವಾಹನಗಳ ಮಾಲೀಕರು, ತಮ್ಮವಾಹನಗಳೊಂದಿಗೆ ಬಸ್ ನಿಲ್ದಾಣದಿಂದಜಾಗ ಖಾಲಿ ಮಾಡಿದರು. ಈ ಬಗ್ಗೆಸುದ್ದಿ ತಿಳಿಯುತ್ತಿದ್ದಂತೆ ಸಾರಿಗೆ ಅಧಿಕಾರಿ ಬಾಲಚಂದ್ರ ಸ್ಥಳಕ್ಕೆ ಆಗಮಿಸಿ ವಿವಾದವನ್ನು ಶಮನಗೊಳಿಸಿದರು.
ಆದರೆ, ಪುಟ್ಟರಾಜಕವಿ ಗವಾಯಿಗಳ ಬಸ್ ನಿಲ್ದಾಣ ಮತ್ತು ಕೇಂದ್ರ ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಳೆದೆರಡು ದಿನಗಳಿಂತ ಕಡಿಮೆಯಾಗಿತ್ತು.ನೆರೆದಿದ್ದ ಬೆರಳೆಣಿಕೆಷ್ಟು ಪ್ರಯಾಣಿಕರನ್ನುಅತ್ತ ಕೊರೆದೊಯ್ಯಲಾಗದೇ, ಇತ್ತ ಬಿಟ್ಟು ಹೋಗದ ಪರಿಸ್ಥಿತಿಯಿಂದ ಖಾಸಗಿ ವಾಹನಗಳ ಮಾಲಿಕರು ಪರದಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.