ಹೆದ್ದಾರಿ ಪಕ್ಕದ ಮರಗಳಿಗೆ ಮರುಜೀವ!
•ಕಲಕೇರಿಯಿಂದ ಕೊಣ್ಣೂರವರೆಗೆ 7800 ಸಸಿ ನೆಡಲು ಚಾಲನೆ • ಎರಡೂ ಬದಿಗೆ ಮರ ಬೆಳೆಸುವ ಗುರಿ
Team Udayavani, May 26, 2019, 11:18 AM IST
ನರಗುಂದ: ಪಟ್ಟಣದ ನಂ. 218ರ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗೆ ನಿರಂತರ ನೆರಳಿನಾಶ್ರಯ ನೀಡಿದ್ದ ದಶಕಗಳ ಇತಿಹಾಸದ ಬಹುದೊಡ್ಡ ಮರಗಳು ಹೆದ್ದಾರಿ ಅಗಲೀಕರಣಕ್ಕೆ ಬಲಿಯಾದ ನೋವು ಪರಿಸರ ಪ್ರೇಮಿಗಳಲ್ಲಿ ಕಾಡುತ್ತಿತ್ತು. ಇದೀಗ ಅದಕ್ಕೆ ಪರಿಹಾರವಾಗಿ ಅರಣ್ಯ ಇಲಾಖೆ ಮರಗಳಿಗೆ ಮರುಜೀವ ನೀಡಲು ಮುಂದಾಗಿದೆ. ಹೆದ್ದಾರಿ ಎರಡೂ ಬದಿಗೆ 7800 ಮರಗಳನ್ನು ಬೆಳೆಸಲು ಸಸಿ ನೆಡುವ ಕಾರ್ಯ ಭರದಿಂದ ಸಾಗಿದೆ.
ಅರಣ್ಯ ಇಲಾಖೆ ತಾಲೂಕಿನ ಕಲಕೇರಿ ಗ್ರಾಮದಿಂದ ಕೊಣ್ಣೂರ ಗ್ರಾಮದವರೆಗೆ 25 ಕಿಮೀ ವ್ಯಾಪ್ತಿಯುದ್ದಕ್ಕೂ ರಾಷ್ಟ್ರೀಯ ಹೆದ್ದಾರಿ ಎರಡೂ ಬದಿಗೆ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದೆ. ಈಗಾಗಲೇ ಪಟ್ಟಣ ಹೊರಲವಯ ಅಲ್ಲಿಭಾಯಿ ನಗರದಿಂದ ಕೊಣ್ಣೂರ ಕಡೆಗೆ ಸಸಿ ನೆಡಲಾಗುತ್ತಿದೆ.
7800 ಸಸಿಗಳು:
ಕಳೆದ ಎರಡು ವರ್ಷಗಳ ಹಿಂದೆ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬದಿಗಿದ್ದ ತಾಲೂಕಿನ ವ್ಯಾಪ್ತಿಯ 263 ಬಹುದೊಡ್ಡ ಮರಗಳನ್ನು ಕಡಿದು ಹಾಕಲಾಗಿತ್ತು. ಆ ಕೊರತೆ ನೀಗಿಸಿಕೊಳ್ಳಲು ಮುಂದಾದ ಅರಣ್ಯ ಇಲಾಖೆ ಅತ್ಯಧಿಕ 7800 ಮರಗಳನ್ನು ಬೆಳೆಸಲು ಮುಂದಾಗಿದೆ. ಹೆದ್ದಾರಿಯ ಎರಡೂ ಬದಿಗೆ 5 ಮೀಟರ್‌ಗೊಂದು ಸಸಿ ನೆಡಲಾಗುತ್ತಿದೆ. 10 ಸಸಿಗಳಿಗೆ ಒಂದು ಹೂವಿನ ಸಸಿ ನೆಡಲಾಗುತ್ತಿದೆ. ಅರಣ್ಯ ಇಲಾಖೆಯ ಕರ್ನಾಟಕ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ ಹೆದ್ದಾರಿ ಬದಿಗೆ ನೆರಳು ನೀಡಿದ್ದ ಮರಗಳನ್ನು ಕಳೆದುಕೊಂಡ ಈ ಭಾಗದ ಜನರು ಇದೀಗ ಮತ್ತೇ ಹೆದ್ದಾರಿ ಬದಿಗೆ ಮರಗಳನ್ನು ನೋಡುವ ಅವಕಾಶ ಒದಗಿ ಬಂದಂತಾಗಿದೆ.
ಯಾವ ಮರಗಳು: ಹೆದ್ದಾರಿ ಬದಿಗೆ ಬೇವು, ಆಲ, ಅರಳೆ, ಪೋಲ್ವೋ ಫ್ಲವರ್, ಆಕಾಶ ಮಲ್ಲಿಗೆ, ಮಹಾಗನಿ, ನೇರಳೆ, ಚಳ್ಳೆ, ರೇನ್‌ಟ್ರೀ, ತಾಡಸಿ, ಅತ್ತಿ, ಹೊಂಗೆ ಮುಂತಾದ ಸಸಿಗಳನ್ನು ನೆಡುವ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಕೊಣ್ಣೂರು ಕಡೆಗೆ ಅಲ್ಲಿಭಾಯಿ ನಗರದಿಂದ ಬಂಡೆಮ್ಮ ನಗರವರೆಗೆ ಸಸಿ ನೆಡಲಾಗಿದೆ. ಹೆದ್ದಾರಿ ಎರಡೂ ಬದಿಗೆ ಮರಗಳನ್ನು ಬೆಳೆಸಲಾಗುತ್ತಿದೆ. ಹೆದ್ದಾರಿ 13 ಮೀಟರ್ ಅಗಲದ ವ್ಯಾಪ್ತಿಯ ಹೊರಗಡೆಗೆ ಸಸಿ ನೆಡಬೇಕಾಗಿದೆ. ಕೆಲವೊಂದು ಕಡೆಗೆ ರೈತರ ಜಮೀನಿನ ಬದುವಿಗೆ ಸಸಿ ನೆಡಬೇಕಾಗುತ್ತಿದೆ. ಈ ಸಂದರ್ಭದಲ್ಲಿ ರೈತರು ಸಹಕರಿಸಲಿ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಆಶಯವಾಗಿದೆ.
ಒಟ್ಟಾರೆ ಕಲಕೇರಿ ಗ್ರಾಮದಿಂದ ಕೊಣ್ಣೂರವರೆಗೆ 263 ಬೃಹತ್ ಮರಗಳನ್ನು ಬಲಿ ತೆಗೆದುಕೊಂಡ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಬಳಿಕ ಮತ್ತೇ ಹೆದ್ದಾರಿ ಎರಡೂ ಬದಿಗೆ ಮರಗಳನ್ನು ಬೆಳೆಸಲು ಅರಣ್ಯ ಇಲಾಖೆ ಚಾಲನೆ ನೀಡಿದ್ದು, ನೆಟ್ಟ ಸಸಿಗಳನ್ನು ಪಾಲನೆ ಪೋಷಣೆ ಮಾಡುವಲ್ಲಿ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.