ತುಂಗಭದ್ರಾ ನೀರು ಸರಬರಾಜಿಗೆ ಬರ
Team Udayavani, Apr 21, 2019, 3:21 PM IST
ಲಕ್ಷ್ಮೇಶ್ವರ: ಪಟ್ಟಣಕ್ಕೆ ಸರಬರಾಜಾಗುವ ತುಂಗಭದ್ರಾ ನದಿ ನೀರು ಕಳೆದ ಕೆಲ ದಿನಗಳಿಂದಲೂ ಮರೀಚಿಕೆಯಾಗಿದ್ದು, ಜನರು ಟ್ಯಾಂಕರ್ ನೀರು, ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಮೊರೆ ಹೋಗಿದ್ದಾರೆ.
ಮೇವುಂಡಿಯ ಜಾಕ್‌ವೆಲ್ನಿಂದ ತುಂಗಭದ್ರಾ ನದಿಯ ನೀರು ನೇರವಾಗಿ ಸೂರಣಗಿಯ ಶುದ್ಧೀಕರಣ ಘಟಕದಲ್ಲಿ ಸಂಸ್ಕರಣಗೊಂಡು ಅಲ್ಲಿಂದ ಪಟ್ಟಣಕ್ಕೆ ತಲುಪುತ್ತದೆ. ಆದರೆ ಶುದ್ಧೀಕರಣ ಘಟಕದಲ್ಲಿರುವ 250 ಅಶ್ವಶಕ್ತಿಯ 2 ನೀರೆತ್ತುವ ಪಂಪ್‌ಗ್ಳು ದುರಸ್ತಿಗೊಳಗಾಗಿದ್ದರಿಂದ ನದಿಯಲ್ಲಿ ನೀರಿದ್ದರೂ ಜನತೆಗೆ ಸವಳು ನೀರೆ ಗತಿಯಾಗಿದೆ.
ಚುನಾವಣೆಯ ಭರದಲ್ಲಿರುವ ಅಧಿಕಾರಿಗಳು ನೀರಿಗಾಗಿ ಪರಿತಪಿಸುತ್ತಿರುವ ಜನತೆಯ ಗೋಳನ್ನೂ ಕೇಳಲೂ ಸಮಯವಿಲ್ಲದಂತೆ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ನಿತ್ಯದ ಕುಡಿಯುವ ನೀರಿನ ಭವಣೆಗೆ ತುತ್ತಾಗಿದ್ದಾರೆ. ಅಧಿಕಾರಿಗಳು ಪಂಪ್‌ಗ್ಳ ದುರಸ್ತಿ ಕುರಿತಂತೆ ನಾಳೆ ನಾಳೆ ಎಂದು ಸಬೂಬು ಹೇಳುತ್ತಿದ್ದು ಆಗಲೇ 15 ದಿನ ಗತಿಸಿವೆ.
ಈಮಧ್ಯೆ ಆಯ್ಕೆಯಾಗಿರುವ ಸ್ಥಳೀಯ ಪುರಸಭೆ ಸದಸ್ಯರು ಇನ್ನೂ ಅಧಿಕಾರ ಸ್ವೀಕರಿಸದಿದ್ದರೂ ಲೋಕಸಭೆಯ ಚುನಾವಣೆಯ ದೃಷ್ಟಿಯಿಂದ ತಮ್ಮ ತಮ್ಮ ವಾರ್ಡ್‌ಗಳಲ್ಲಿ ಸದ್ದಿಲ್ಲದೇ ಸ್ವಂತ ಖರ್ಚಿನಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಇದು ಅಪರೋಕ್ಷವಾಗಿ ಅಧಿಕಾರಿಗಳಿಗೆ ಹೆಚ್ಚು ತಲೆನೋವಾಗುವುದನ್ನು ತಪ್ಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.