ಭಾವೈಕ್ಯತೆ ಸಂಕೇತ ಶಿರಹಟ್ಟಿ ಫಕ್ಕೀರೇಶ್ವರ
•ಹಿಂದೂ-ಮುಸ್ಲಿಂ ಧರ್ಮಗಳ ಸಂಪ್ರದಾಯ ಸಂಗಮ •ಇಂದು ಫಕ್ಕೀರೇಶ್ವರ ಮಹಾರಥೋತ್ಸವ
Team Udayavani, May 18, 2019, 1:23 PM IST
ಶಿರಹಟ್ಟಿ: ಜ| ಫಕ್ಕೀರೇಶ್ವರ ಗದ್ದುಗೆ ಮೇಲೆ ನೂತನವಾಗಿ ಸಿದ್ಧವಾಗಿರುವ ಮಠದ ಚಿತ್ರ.
ಶಿರಹಟ್ಟಿ: ಜಾತ್ಯತೀತ ಜ್ಯೋತಿ ಶಿರಪುರದ ಸಿರಿಂ ಫಕ್ಕೀರೇಶ್ವರನ ಜಾತ್ರೆ ಪ್ರತಿವರ್ಷ ಹುಣ್ಣಿಮೆಯಂದು ಅತೀ ವೈಭವದಿಂದ ಜರಗುತ್ತದೆ. ಸಹಸ್ರಾರು ಹಿಂದೂ-ಮುಸ್ಲಿಂ ಬಾಂಧವರು ಪರಸ್ಪರ ಸಹಕಾರ ಮನೋಭಾವದಿಂದ ಆಚರಿಸುತ್ತಾರೆ. ಇಲ್ಲಿ ಹಿಂದೂ -ಮುಸ್ಲಿಂ ಧರ್ಮಗಳ ಸಂಪ್ರದಾಯ ಸಂಗಮವಾಗುತ್ತದೆ.
ಕ್ರಿಶ 16ನೇ ಶತಮಾನದಲ್ಲಿ ಶ್ರೀ ಫಕ್ಕೀರೇಶ್ವರರು ವಿಜಯಪುರ ಜಿಲ್ಲೆಯ ಶಿವಯ್ಯ ಮತ್ತು ಗುರಮ್ಮ ದಂಪತಿಗೆ ಜನಿಸಿದರು. ಈ ಜನನಕ್ಕೆ ಖ್ವಾಜಾ ಅಮೀನರ ಆಶೀರ್ವಾದ ಕಾರಣವಾಯಿತು ಎಂಬ ಪ್ರತೀತಿಯಿದೆ. ಫಕ್ಕೀರೇಶ್ವರರಿಗೆ ಖ್ವಾಜಾ ಅಮೀನರ ಜ್ಞಾನೋಪದೇಶ ಮಾಡಿದರು. ಬಾಲ್ಯಾವಸ್ಥೆಯಲ್ಲಿಯೇ ನೀರಿನ ಮೇಲೆ ನಿಂತು ನಮಾಜು ಮಾಡಿದರು. ಇಂತಹ ಹಲವಾರು ಪವಾಡಗೈದು ಲೋಕ ಸಂಚಾರ ಮಾಡುತ್ತಾ ಚಿತ್ರದುರ್ಗದ ಬ್ರಹ್ನಮಠದಲ್ಲಿ ಗೋಪಾಲನಾಗಿ ಸೇವೆಗೈದು, ನಂತರ ಶಿರಹಟ್ಟಿಯತ್ತ ಸಾಗಿದರು. ದಿಲ್ಲಿಯಲ್ಲಿ ಆಳುತ್ತಿದ್ದ ಮೊಘಲ ಬಾದಶಾಹರಿಗೆ ನಿಧಿಯನ್ನು ತೋರಿಸಿ ಅಕಬರನಿಂದ ವೀರ ರಣಬಿಲ್ಲೆಯನ್ನು ಕಾಣಿಕೆಯಾಗಿ ಪಡೆದರು. ಸವಣೂರಿನ ನವಾಬನ ಮೌಂಸದ ಅಂಗಡಿಯನ್ನು ಹೂವಿನ ಅಂಗಡಿಯನ್ನಾಗಿ ಮಾಡಿ ನವಾಬ ಫಕ್ಕೀರೇಶ್ವರರ ಪಾದಪೂಜೆ ಮಾಡಿ ಶಿರಹಟ್ಟಿಯಲ್ಲಿ ನಗಾರಿ ಖಾನೆಯನ್ನು ನಿರ್ಮಿಸಿದರು. ಹೀಗೆ ಫಕ್ಕೀರೇಶ್ವರರು ಹಲವಾರು ಪವಾಡ ಮಾಡಿ ಸರ್ಪ ರೂಪದಲ್ಲಿ ಹುತ್ತ ಸೇರಿದ್ದು ಒಂದು ಪವಾಡ. ಇಂದು ಶಿರಪುರದಲ್ಲಿ (ಶಿರಹಟ್ಟಿ) ಹುತ್ತದ ಮೇಲೆ ಗದ್ದುಗೆಯನ್ನು ನಿರ್ಮಿಸಲಾಗಿದೆ.
ಶಿರಹಟ್ಟಿ ಜ| ಫಕ್ಕೀರೇಶ್ವರರ ಅನುಯಾಯಿಯಾಗಿ ರೂಪ ಗೊಳ್ಳುವ ಪಟ್ಟಾಧಿಕಾರಿಯನ್ನು ಫಕ್ಕೀರ ಚನ್ನವೀರೇಶ್ವರ, ಫಕ್ಕೀರ ಶಿವಯೋಗೇಶ್ವರ, ಫಕ್ಕೀರ ಸಿದ್ಧರಾಮೇಶ್ವರ ಎಂಬ ಮೂರ ನಾಮಧ್ಯೇಯಗಳಿಂದ ಉಚ್ಚರಿಸಲಾಗುತ್ತದೆ. ಇಂದಿಗೂ ಈ ಉತ್ತಾಧಿಕಾರಿ ಪರಂಪರೆಯನ್ನು ಮುಂದುವರೆಸಿದ್ದು, ಸದ್ಯ ಹದಿಮೂರನೇ ಪಟ್ಟಾಧ್ಯಕ್ಷ ಶ್ರೀ ಜ|ಸಿದ್ಧರಾಮೇಶ್ವರರು ಶ್ರೀ ಮಠದ ಪುನರುಜ್ಜೀವ ಕಾರ್ಯ ಕೈಗೊಂಡು ಭಾರೀ ಜನಪ್ರಿಯತೆ ಗಳಿಸಿದ್ದಾರೆ. ಮಠದಲ್ಲಿ ಹತ್ತಾರು ಕೋಟಿ ರೂ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮಠಕ್ಕೆ ಆಧುನಿಕ ರೂಪ ಕೊಟ್ಟು ಜನರಲ್ಲಿ ಪ್ರೀತಿ ಮೂಡಿಸಿದ್ದಾರೆ. ಮಠವನ್ನು ಪ್ರವಾಸಿ ತಾಣವನ್ನಾಗಿ ನಿರ್ಮಿಸಿದ್ದು, ಪ್ರವಾಸಗರಿಗೆ ವಸತಿ ಗೃಹ, ದಾಸೋಹಕ್ಕಾಗಿ ಭೋಜನಾಗೃಹ ನಿರ್ಮಿಸಿದ್ದಾರೆ. ಸಾರ್ವಜನಿಕರ ಉಪಯೋಗಕ್ಕಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ನೆರವೇರಿಸಿದ್ದಾರೆ. ಕರ್ತೃ ಗದ್ದುಗೆಯ ಮೇಲೆ ಕಳಸಾರೋಹಣ ನಿರ್ಮಿಸಬೇಕಾಗಿದೆ. ಅದಕ್ಕಾಗಿ ಸಾಕಷ್ಟು ಸಿದ್ಧತೆ ಕೂಡಾ ಮಾಡಲಾಗಿದೆ. ಮಠದ ಅಭಿವೃದ್ಧಿ ನೋಡಿದರೆ ಕೃರ್ತ ಸ್ವರೂಪವೇ ಕಾರ್ಯದಲ್ಲಿದೆ. ಇದೂ ಕೂಡಾ ಫಕ್ಕೀರ ಸಿದ್ರಾಮರ ಪವಾಡವೆಂದರೆ ಅತೀಶಯೋಕ್ತಿಯಾಗಲಾರದು.
ಸಂಶೀ ಫಕ್ಕೀರೇಶ ಶಿವಯೋಗಿಗಳು ನಗಾರಿ ಖಾನೆ ಕಟ್ಟಸಿ ಪವಾಡವೆಸಗಿದರೆ, ಇಂದಿನ ಪಟ್ಟಾಧ್ಯಕ್ಷರು ಶ್ರೀ ಮಠದ ನವನಿರ್ಮಾಣದ ಕಾರ್ಯ ನಿರ್ವಹಿಸಿ ಹದಿಮೂರನೇ ಪಟ್ಟವೇ ಲಟ್ಟಪಟ್ಟ ಅವರೇ ಫಕ್ಕೀರ ಸಿದ್ಧರಾಮ ಸ್ವಾಮಿಗಳು ಎಂಬ ಪವಾಡವೆಂಬತೆ ಕಾರ್ಯ ಎಸಗಿ ತೋರಿಸಿ ಭಕ್ತಿಭಾವ ಶ್ರೀ ಮಠದಲ್ಲಿ ತುಂಬಿಸಿದ್ದಾರೆ. ಪ್ರತಿ ಅಮಾವಾಸ್ಯೆಗೆ ಶಿವಾನುಭವ ಕಾರ್ಯಕ್ರಮ ಜರಗುತ್ತದೆ.
•ಪ್ರಕಾಶ ಶಿ. ಮೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.