ವಚನ ಬದುಕಿನ ಪ್ರೇರಕ ಶಕ್ತಿ: ಸುಧಾ
ಯಾವುದೇ ಧರ್ಮ ಗ್ರಂಥಕ್ಕೂ ಕಡಿಮೆಯಿಲ್ಲ ಶರಣರ ವಚನ
Team Udayavani, May 3, 2022, 9:43 AM IST
ಗದಗ: ವಚನಗಳು ನನ್ನ ಬದುಕಿನಲ್ಲಿ ಸಾಕಷ್ಟು ಬದಲಾವಣೆ ತಂದಿವೆ. ಶರಣರ ವಚನಗಳು ಯಾವುದೇ ಧರ್ಮ ಗ್ರಂಥಕ್ಕೂ ಕಡಿಮೆಯಿಲ್ಲ. ನಾನು ಯಾವುದೇ ಧರ್ಮ ಗ್ರಂಥವನ್ನು ಅಧ್ಯಯನ ಮಾಡಿಲ್ಲ. ಶರಣರ ವಚನಗಳನ್ನೇ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಈ ಹಂತಕ್ಕೆ ಬೆಳೆದಿದ್ದೇನೆ ಎಂದು ಇನ್ಫೋಸಿಸ್ ಸಂಸ್ಥೆ ಸಂಸ್ಥಾಪಕ ನಾರಾಯಣ ಮೂರ್ತಿ ಪತ್ನಿ ಡಾ| ಸುಧಾಮೂರ್ತಿ ಅಭಿಪ್ರಾಯಪಟ್ಟರು.
ಬಸವ ಜಯಂತಿ ಅಂಗವಾಗಿ ಇಲ್ಲಿನ ಜ| ತೋಂಟದಾರ್ಯ ಮಠದಲ್ಲಿ ಸೋಮವಾರ ಶಿವಾನುಭವದಲ್ಲಿ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ “ಮಾನವತಾವಾದಿ ಬಸವೇಶ್ವರ’ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಬಾಲ್ಯದಿಂದಲೂ ಬಸವಾದಿ ಶರಣರ ವಚನಗಳ ಸೆಳೆತ ನನಗಿದ್ದು, ಜೀವನದ ಪ್ರತಿಯೊಂದು ಹಂತದಲ್ಲಿ ವಚನಗಳು ಅದರಲ್ಲೂ ಅಕ್ಕಮಹಾದೇವಿಯ ವಚನಗಳು ಪ್ರೇರಕ ಶಕ್ತಿಯಾಗಿವೆ ಎಂದು ಹೇಳಿದರು.
ಇಡೀ ಮಾನವ ಕುಲಕ್ಕೆ ಮಾರ್ಗದರ್ಶಿಯಾಗಿರುವ ಶರಣರ ವಚನಗಳು ನನ್ನ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಇನ್ಫೋಸಿಸ್ ಪ್ರತಿಷ್ಠಾನದಿಂದಲೇ ಸಾಮಾಜಿಕ ಸೇವೆ ಸಾಧ್ಯವಾಗಿದ್ದು, ಅದರ ಪ್ರತಿಯೊಂದು ರೂಪಾಯಿ ಖರ್ಚು ಮಾಡುವಾಗಲೂ ನನ್ನನ್ನು ನಾನು ಪ್ರಶ್ನಿಸಿಕೊಳ್ಳುತ್ತೇನೆ. ಅದು ಸದ್ಬಳಕೆಯಾಗುತ್ತದೆ ಎಂಬುದು ಮನವರಿಕೆ ಮಾಡಿಕೊಳ್ಳಲೂ ವಚನಗಳ ಮೊರೆ ಹೋಗುತ್ತೇನೆ ಎಂದು ಅಕ್ಕಮಹಾದೇವಿಯ ವಚನಗಳನ್ನು ಉಲ್ಲೇಖೀಸಿದರು.
ನಮ್ಮ ಅಜ್ಜಿ ಗದಗನ ವಕೀಲಛಾಳ್ ನಿವಾಸಿಯಾಗಿದ್ದರು. ಉತ್ತರ ಕರ್ನಾಟಕ ನನ್ನ ತವರು. ಹೀಗಾಗಿ ಈ ಭಾಗದ ಬಗ್ಗೆ ನನಗೆ ವಿಶೇಷ ಅಭಿಮಾನ. ಮನುಷ್ಯನಿಗೆ ಆತ್ಮವಿಶ್ವಾಸವೊಂದಿದ್ದರೆ ಎಲ್ಲವನ್ನೂ ಸಾಧಿಸಲು ಸಾಧ್ಯ. ಹಾರ್ವರ್ಡ್ ಸೇರಿದಂತೆ ವಿಶ್ವದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿದ್ದರೂ ಹುಬ್ಬಳ್ಳಿಯ ಬಿವಿಬಿಗೆ ಅದು ಸಮವಲ್ಲ. ಕೆಎಲ್‌ಇ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಬಿವಿಬಿ ಕಾಲೇಜು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುತ್ತದೆ. ಇದರಿಂದ ಅಲ್ಲಿನ ವಿದ್ಯಾರ್ಥಿಗಳು ಏನು ಬೇಕಾದರೂ ಸಾಧಿಸುವಷ್ಟು ಸಶಕ್ತರಾಗಿರುತ್ತಾರೆ. ಅದಕ್ಕೆ ನನ್ನಂಥ ವಿದ್ಯಾರ್ಥಿಗಳೇ ಉತ್ತಮ ಉದಾಹರಣೆ. ಹೀಗಾಗಿ ನನ್ನ ಕಾಲೇಜು ಶ್ರೇಷ್ಠ. ಅದರಲ್ಲೂ ಕಳೆದ 40 ವರ್ಷಗಳಿಂದೀಚೆಗೆ ಡಾ| ಪ್ರಭಾಕರ ಕೋರೆ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದು, ಈ ಅವಧಿಯನ್ನು ಸುವರ್ಣಾಕ್ಷರದಲ್ಲಿ ಬರೆದಿಡುವಂತದ್ದು ಎಂದು ಹಾಡಿಹೊಗಳಿದರು.
ಡಾ| ಪ್ರಭಾಕೋರೆ ಮಾತನಾಡಿ, ಡಾ| ಸುಧಾಮೂರ್ತಿ ಅವರು ಇಂಜಿನಿಯರಿಂಗ್ ಪದವೀಧರೆಯಾಗಿದ್ದರೂ ಅಪ್ಪಟ ಕನ್ನಡ ಅಭಿಮಾನಿ. ಅವರು ನುಡಿಯುವ ಪ್ರತಿಯೊಂದು ಪದಗಳು ಹಾಗೂ ಬರಹದಲ್ಲಿ ಶುದ್ಧ ಕನ್ನಡದ ಕಂಪು ಪಸರಿಸುತ್ತವೆ. ಆಗರ್ಭ ಶ್ರೀಮಂತಿಕೆ ಹೊಂದಿದ್ದರೂ ಸರಳ ನಡೆ, ಆಹಾರ ಪದ್ಧತಿ ಅನುಸರಿಸುವ ಮೂಲಕ ಎಲ್ಲರಿಗೆ ಮಾದರಿಯಾಗಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ರೊಟ್ಟಿ ಚಟ್ನಿ ಎಂದರೆ ಎಲ್ಲಿಲ್ಲದ ಪ್ರೀತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕೆಎಲ್‌ಇ ಸಂಸ್ಥೆಯು ಬೆಳಗಾವಿಯಲ್ಲಿ ನಿರ್ಮಿಸುತ್ತಿರುವ 200 ಹಾಸಿಗೆ ಕ್ಯಾನ್ಸರ್ ಆಸ್ಪತ್ರೆಗೆ ಇನ್ಫೋಸಿಸ್ ಫೌಂಡೇಷನ್‌ನಿಂದ ಕೋಟಿ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಇದೇ ವೇಳೆ ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಮಠದ ಪೀಠಾಧಿಪತಿ ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ, ಮಾಜಿ ಸಚಿವ ಎಸ್. ಎಸ್. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ರಾಮಕೃಷ್ಣ ದೊಡ್ಡಮನಿ, ಜಿ.ಎಸ್. ಗಡ್ಡದೇವರಮಠ, ಮಹಾಂತೇಶ ಕವಟಗಿಮಠ, ಧಾರವಾಡದ ಮನೋವೈದ್ಯ ಡಾ| ಆನಂದ ಪಾಂಡುರಂಗಿ, ಕೆಎಲ್‌ಇ ನಿರ್ದೇಶಕ ಡಾ| ವಿ.ಎಸ್. ಸಾಧುನವರ, ಶಂಕ್ರಣ್ಣ ಮುನವಳ್ಳಿ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್. ಎಸ್. ಪಟ್ಟಣಶೆಟ್ಟಿ, ಲಿಂಬಯ್ಯಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ| ಸುಧಾಮೂರ್ತಿಗೆ ‘ಮಾನವತಾವಾದಿ ಬಸವೇಶ್ವರ’ ಪ್ರಶಸ್ತಿ ಪ್ರದಾನ
ಗದಗ: ಬಸವ ಜಯಂತಿ ಅಂಗವಾಗಿ ಇಲ್ಲಿನ ಜ| ತೋಂಟದಾರ್ಯ ಮಠದಲ್ಲಿ ಸೋಮವಾರ ಸಂಜೆ ನಡೆದ ಶಿವಾನುಭವದಲ್ಲಿ ಇನ್ಫೊಧೀಸಿಸ್ ಸಂಸ್ಥೆ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಹಾಗೂ ಸಮಾಜ ಸೇವಕಿ ಡಾ| ಸುಧಾಮೂರ್ತಿ ಅವರಿಗೆ ‘ಮಾನವತಾವಾದಿ ಬಸವೇಶ್ವರ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದಿಂದ ನೀಡಲಾಗುವ ಒಂದು ಲಕ್ಷ ರೂ. ನಗದು ಸಹಿತ ಪ್ರಶಸ್ತಿಯನ್ನು ರಾಜ್ಯಸಭೆ ಮಾಜಿ ಸದಸ್ಯ ಹಾಗೂ ಕೆಎಲ್‌ಇ ಸಂಸ್ಥೆ ಅಧ್ಯಕ್ಷ ಡಾ| ಪ್ರಭಾಕರ ಕೋರೆ ಪ್ರದಾನ ಮಾಡಿದರು.
ಶ್ರೀಮಠದ ಪೀಠಾಧಿಪತಿ ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಜಿ.ಎಸ್. ಗಡ್ಡದೇವರಮಠ, ಮಹಾಂತೇಶ ಕವಟಗಿಮಠ, ಧಾರವಾಡದ ಮನೋವೈದ್ಯ ಡಾ| ಆನಂದ ಪಾಂಡುರಂಗಿ, ಕೆಎಲ್‌ಇ ನಿರ್ದೇಶಕ ಡಾ| ವಿ.ಎಸ್. ಸಾಧುನವರ, ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಪ್ರಮುಖರು ಇದ್ದರು.
ಬೇಸಿಗೆಯಲ್ಲಿ ಕರೆಯಬೇಡಿ: ಸನ್ಮಾನಕ್ಕೆ ಕರೆದರೆ ನಾನು ಬರುವುದಿಲ್ಲ ಎಂಬ ಭಾವನೆ ಬೇಡ. ನಾನು ಏನೇ ಮಾಡಿದ್ದರೂ ಅದು ಇನ್ಫೋಸಿಸ್ ಫೌಂಡೇಷನ್ ಕೊಡುಗೆ ಎಂಬ ಕಾರಣಕ್ಕೆ ಬಹುತೇಕ ಸನ್ಮಾನಗಳನ್ನು ನಯವಾಗಿಯೇ ಬೇಡ ಎನ್ನುತ್ತೇನೆ. ಆದರೆ, ನನ್ನ ತವರುಮನೆಯಾದ ಉತ್ತರ ಕರ್ನಾಟಕದವರು ಆಹ್ವಾನಿಸಿದರೆ ಇಲ್ಲ ಎನ್ನಲಾರೆ. ಆದರೆ, ಸನ್ಮಾನಗಳಿಗೆ ಬೇಸಿಗೆಯಲ್ಲಿ ಕರೆಯಬೇಡಿ. ಮಳೆಗಾಲ, ಇಲ್ಲವೇ ಚಳಿಗಾಲದಲ್ಲಿ ಕರೆಯಿರಿ ಎಂದು ಸುಧಾಮೂರ್ತಿ ಅವರು ನಗೆ ಚಟಾಕಿ ಹಾರಿಸಿದರು.
ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಶಿ ಸುನಕ್ ಅವರು ಉತ್ತಮ ಆರ್ಥಿಕ ತಜ್ಞರಾಗಿದ್ದರು. ಅವರಿಂದಲೇ ಲಂಡನ್ ಸರಕಾರದಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಿದೆ. ಸದ್ಯ ಅಲ್ಲಿನ ಸಚಿವರಾಗಿರುವ ಅವರು, ಮುಂದಿನ ದಿನಗಳಲ್ಲಿ ಪ್ರಧಾನಿಯೂ ಆಗಲಿದ್ದಾರೆ. ಭಾರತ 100 ವರ್ಷ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿತ್ತು ಎಂಬುದು ಇತಿಹಾಸ. ಆದರೆ, ಭವಿಷ್ಯದಲ್ಲಿ ಲಂಡನ್ ರಿಶಿ ಸುನಕ್ ಅವರ ಆಳ್ವಿಕೆಗೆ ಒಳಪಡುತ್ತದೆ. -ಡಾ| ಪ್ರಭಾಕರ ಕೋರೆ, ಕೆಎಲ್‌ಇ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.