ಭಾವೈಕ್ಯತೆ ಹರಿಕಾರ ವರವಿ ಮೌನೇಶ್ವರ ಜಾತ್ರೆ ನಾಳೆ
ಬೆಳ್ಳಿ ಪಲ್ಲಕ್ಕಿ ಉತ್ಸವದೊಂದಿಗೆ ಮಹಾರಥೋತ್ಸವ- ನಾಡಿದ್ದು ಕಡುಬಿನ ಕಾಳಗ
Team Udayavani, Aug 21, 2022, 1:01 PM IST
ಶಿರಹಟ್ಟಿ: ಪವಿತ್ರ ಶ್ರಾವಣ ಮಾಸದ ಕೊನೆ ಸೋಮವಾರ ಆ.22 ರಂದು ತಾಲೂಕಿನ ಸುಕ್ಷೇತ್ರ ವರವಿಯಲ್ಲಿ ಮೌನೇಶ್ವರ ದೇವಸ್ಥಾನದಲ್ಲಿ ಬೆ.9 ರಿಂದ 11 ರವರೆಗೆ ಮಹಾಯಜ್ಞ, 11 ಗಂಟೆಗೆ ಮೌನೇಶ್ವರ ಲೀಲಾ ಪ್ರವಚನ, ಸಂಜೆ 5 ಗಂಟೆಗೆ ಬೆಳ್ಳಿ ಪಲ್ಲಕ್ಕಿ ಉತ್ಸವ ದೊಂದಿಗೆ ಮಹಾರಥೋತ್ಸವ ಜರುಗಲಿದೆ. ಆ.23 ರಂದು ಮಂಗಳವಾರ ಕಡುಬಿನ ಕಾಳಗ ನಡೆಯಲಿದೆ.
ಕ್ಷೇತ್ರದ ಮಹತ್ವ: ಚರಿತ್ರೆಯಲ್ಲಿ ತಿಳಿಸಿರುವಂತೆ ಹಿಂದೊಮ್ಮೆ ಮೌನೇಶ್ವರ ಸ್ವಾಮಿಗಳೊಂದಿಗೆ ಇಡೀ ಶಿಷ್ಯ ಸಮೂಹ “ಓಂ ಏಕಲಾಕ ಐಂಸೀ ಹಜಾರ ಮುಸಾ ಪೈಗಂಬರ, ಪಾಂಚೋ ಪೀಠ ಜಗದ್ಗುರು ಮೌನೇಶ್ವರಕಾ ಸೀಪತಿ ಗಂಗಾಧರ ಹರಹರ ಮಹಾದೇವ’ ಎಂಬ ಜಯಘೋಷಗಳೊಂದಿಗೆ ಹೊರಟಿದ್ದರು. ಒಂದು ದಿನ ಆ ಹಳ್ಳಿಯ ಹೊರವಲಯದಲ್ಲಿದ್ದ ಗೂಟ ಗಲ್ಲಿಗೆ ಬಲಗಾಲು ತಾಕಿ ಮೌನೇಶರರು ಅಲ್ಲಿಯೇ ಸ್ವಲ್ಪ ಕಾಲ ವಿಶ್ರಮಿಸಲು ಮುಂದಾದರು. ಸರ್ವಾಂತರ್ಯಾಮಿಯಾದ ನೀನೇ ಹೀಗೆ ಕಲ್ಲೆಡವಬೇಕೇ? ಇದರ ಹಿನ್ನೆಲೆ ಏನು ಎಂದು ಶಿಷ್ಯ ಗಣ ವಿಚಾರಿಸಿದಾಗ, ಮುಂದೊಂದು ದಿನ ಈ ಗ್ರಾಮ ಸರ್ವಶ್ರೇಷ್ಠ ಕ್ಷೇತ್ರವೆಂಬ ಕೀರ್ತಿ ಪಡೆಯಲಿದೆ. ನಾನೀಗ ಎಡವಿದ ಕಲ್ಲು ಸ್ವಯಂ ಉದ್ಭವವಾದ ಶಿವಲಿಂಗ. ನನ್ನ ಸರ್ವ ಶಕ್ತಿಯನ್ನೆಲ್ಲ ಈ ಶಿವಲಿಂಗದಲ್ಲಿ ಸಮಾವೇಶಗೊಳಿಸಿದ್ದೇನೆ. ಈ ಗ್ರಾಮದ ಪ್ರತಿಯೊಂದು ಕಲ್ಲು ಪರಮಪವಿತ್ರ ಶಿವಲಿಂಗವಾಗುವುದು. ಹರಿಯುವ ನೀರು ಪುಣ್ಯಪ್ರದ ತೀರ್ಥಕ್ಕೆ ಸಮಾನ ಎಂದು ಮೌನೇಶ್ವರರು ಹೇಳಿದ ಗ್ರಾಮವೇ ವರವಿ ಎಂಬ ಪ್ರತೀತಿ ಇದೆ.
ಎಡವಿದ ಕಲ್ಲೇ ಇಂದು ಪವಿತ್ರ ಕ್ಷೇತ್ರ ವರವಿ ಮೌನೇಶ್ವರ ಕ್ಷೇತ್ರವಾಗಿ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿದೆ. ವರವಿ ಭಕ್ತರಲ್ಲದೇ ಸುತ್ತಮುತ್ತಲಿನ ಆಸ್ತಿಕರೆಲ್ಲ ಆ ಶಿವಲಿಂಗವನ್ನು ಕಟ್ಟಡವಿಲ್ಲದೇ ಬರೀ ಬಯಲಲ್ಲೇ ಪೂಜಿಸಲಾರಂಭಿಸಿದರು. ಶಿವಲಿಂಗದ ಪವಾಡ ನೂರಾರು, ಸಾವಿರಾರು ಜನರ ವಾಡಿಕೆಯಲ್ಲಿ ಬೆಳೆಯತೊಡಗಿತು. ಆಗ ಆ ಶಿವಲಿಂಗಕ್ಕೊಂದು ಮಂದಿರವಾಗಬೇಕೆಂದು ಮನದಲ್ಲಿ ಯೋಚಿಸಿಕೊಂಡರು. ವಿಜಯಪುರದ ಬಾದಶಹಾನ ಸ್ವಪ್ನದಲ್ಲಿ ಮೌನೇಶ್ವರ ಪ್ರಕಟನಾಗಿ ಶಿವನ ವಿಗ್ರಹ ಬಯಲಲ್ಲಿ ನಿಂತಿದೆ. ಅದಕ್ಕೊಂದು ದಿವ್ಯ, ಭವ್ಯ ಕಟ್ಟಡ ನಿರ್ಮಿಸಬೇಕೆಂದು ಆಜ್ಞಾಪಿಸುತ್ತಾನೆ. ಆಗ ಬಾದಶಹಾನ ವರವಿಗೆ ಬಂದು ಭವ್ಯವಾದ ಆಕರ್ಷಕ ಮಂದಿರ ನಿರ್ಮಿಸುತ್ತಾರೆ. ಅದೇ ಇಂದಿನ ವರವಿಯಲ್ಲಿರುವ ಮೌನೇಶ್ವರ ಮಠ.
ಮೌನೇಶ್ವರರು ವಿಜಯಪುರದಲ್ಲಿ ಆಳ್ವಿಕೆ ಮಾಡುತ್ತಿದ್ದ ಆದಿಲ್‌ಶಾಹಿ ಆಸ್ಥಾನಕ್ಕೆ ಬಂದು ಪವಾಡಗಳನ್ನು ಮೆರೆಯುವ ಮೂಲಕ ರಾಜಾಧಿರಾಜ ಆಸ್ಥಾನಿಕರಿಂದ ಫಕೀರನಾಗಿ ಪೂಜೆಗೊಳ್ಳುತ್ತಾರೆ. ಇಂದಿಗೂ ಅವರ ಉಭಯ ಜನಾಂಗಕ್ಕೆ ಫಕ್ಕೀರನಾಗಿ,ಪರಮಾತ್ಮನಾಗಿ ಪೂಜೆಗೊಳ್ಳುತ್ತಾರೆ. ಅಂದಿನ ನೆನಪಿನ ಅಂಗವಾಗಿ ಶ್ರಾವಣ ಮಾಸದ ಕೊನೆಯ ಸೋಮವಾರ ಮಹಾರಥೋತ್ಸವ, ಮಂಗಳವಾರ ವಿಜೃಂಭಣೆಯಿಂದ ಕಡುಬಿನ ಕಾಳಗದೊಂದಿಗೆ ಜಾತ್ರೆ ನಡೆಯುತ್ತದೆ.
-ಪ್ರಕಾಶ ಶಿ.ಮೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.