ಆಡಳಿತದಲ್ಲಿ ಪಾರದರ್ಶಕತೆಗೆ ಗ್ರಾಮ ವಾಸ್ತವ್ಯ
Team Udayavani, Apr 17, 2022, 4:16 PM IST
ಲಕ್ಷ್ಮೇಶ್ವರ: ಸರ್ಕಾರದ ಯೋಜನೆ, ಸವಲತ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲು, ಸಮಸ್ಯೆ, ಕುಂದು-ಕೊರತೆಗಳನ್ನು ಈಡೇರಿಸಲು ಆಡಳಿತದಲ್ಲಿ ಪಾರದರ್ಶಕತೆ ತರಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅತ್ಯುಪಯುಕ್ತವಾಗಿದೆ ಎಂದು ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಹೇಳಿದರು.
ಶನಿವಾರ ತಾಲೂಕಿನ ಹಿರೇಮಲ್ಲಾಪೂರ ಗ್ರಾಮದ ಶಾಲಾ ಆವರಣದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳು ಸಾಕಾರಗೊಳ್ಳಲು ಅಧಿಕಾರಿಗಳ, ಜನಪ್ರತಿನಿಧಿಗಳ ಕಾಳಜಿ ಜತೆಗೆ ಜನರ ಸಹಕಾರ-ಸಹಯೋಗವೂ ಮುಖ್ಯವಾಗಿದೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಬಹಳಷ್ಟು ಬೇಡಿಕೆಗಳಲ್ಲಿ ರಸ್ತೆ ಅಭಿವೃದ್ಧಿ, ಕಟ್ಟಡ ನಿರ್ಮಾಣ ಸೇರಿ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ್ದೇ ಆಗಿರುತ್ತವೆ. ಇದಕ್ಕೆ ಆರ್ಥಿಕ ಸಂಪನ್ಮೂಲದ ಅಗತ್ಯವಿರುವುದರಿಂದ ಜಿಪಂ, ತಾಪಂ, ಗ್ರಾಪಂ ಪಾತ್ರ ಮುಖ್ಯವಾಗಿರುತ್ತದೆ. ಕಂದಾಯ ಇಲಾಖೆಯ ವಿಷಯಗಳಿಗೆ ಸಂಬಂಧಿಸಿದಂತೆ ಪಿಂಚಣಿ, ಆಧಾರ್ ತಿದ್ದುಪಡಿ, ಭೂ ದಾಖಲೆಗಳ ತಿದ್ದುಪಡಿ, ಪಡಿತರ ಚೀಟಿ ಹಾಗೂ ಜಮೀನು ಖರೀದಿ ಕುರಿತು ಸಮಸ್ಯೆಗಳಿದ್ದರೆ ಇತ್ಯರ್ಥಪಡಿಸಲಾಗುವುದು. ಇಂದು ಸ್ವೀಕರಿಸಲಾದ ಎಲ್ಲ ಅರ್ಜಿಗಳನ್ನು ಖುದ್ದಾಗಿ ಪರಿಶೀಲಿಸಿ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸಲಾಗಿದೆ. ಬಾಕಿ ಉಳಿದ ಕೆಲವೇ ಅರ್ಜಿಗಳನ್ನು ಶೀಘ್ರವೇ ಪರಿಹರಿಸುವುದಾಗಿ ಹೇಳಿದರು.
ಬೆಳಿಗ್ಗೆ ಗ್ರಾಮದ ಜೋಡುಮಾರುತಿ ದೇವಸ್ಥಾನದಲ್ಲಿ ಮಹಿಳೆಯರು ಆರತಿ ಬೆಳಗಿ ಕುಂಕುಮವಿಟ್ಟು ಗ್ರಾಮಕ್ಕೆ ಸ್ವಾಗತಿಸಿ, ಶಾಲಾ ಆವರಣದಲ್ಲಿ ತೋಟಗಾರಿಕೆ ಇಲಾಖೆಯಿಂದ ಸಸಿ ನೆಡುವ ಕಾರ್ಯಕ್ರಮ, ಆರೋಗ್ಯ ಇಲಾಖೆಯಿಂದ ಕೈಗೊಂಡ ಉಚಿತ ಆರೋಗ್ಯ ಶಿಬಿರ ಪರಿಶೀಲನೆ ಮಾಡಿದರು.
ಈ ವೇಳೆ ಹಿರಿಯ ಮುಖಂಡರಾದ ಸುಭಾಸ ಬಟಗುರ್ಕಿ, ಶೇಖಣ್ಣ ಕರೆಣ್ಣವರ ಅವರು ಮಾತನಾಡಿ, ಕಳೆದ 50 ವರ್ಷಗಳ ಹಿಂದೆ ಈ ಗ್ರಾಮ ಸ್ಥಳಾಂತರಗೊಂಡಿದ್ದರೂ ಇದುವರೆಗೂ ಇಲ್ಲಿ ವಾಸಿಸುವ ನಿವಾಸಿಗರ ಆಸ್ತಿಗಳಿಗೆ ಸೂಕ್ತ ದಾಖಲೆಗಳಿಲ್ಲ. ಈ ಬಗ್ಗೆ ಶಾಸಕರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನೀವಾದರೂ ಈ ಸಮಸ್ಯೆ ಸರಿಪಡಿಸಿ ಎಂದು ಮನವಿ ಮಾಡಿದರು.
ಈ ವೇಳೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ಬಹುತೇಕ ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಲಾಯಿತು. ತಾಪಂ ಇಒ ಕೃಷ್ಣಪ್ಪ ಧರ್ಮರ ಅವರು ಗ್ರಾಮ ವಾಸ್ತವ್ಯದ ಉದ್ದೇಶಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಅಶೋಕ ಮರಿಹೊಳಲಣ್ಣವರ, ವೀರೇಂದ್ರ ಪಾಟೀಲ ಮಾತನಾಡಿದರು.
ಸಭೆಯಲ್ಲಿ ಉಪತಹಶೀಲ್ದಾರ್ ಗಳಾದ ಮಂಜುನಾಥ ದಾಸಪ್ಪನವರ, ಪ್ರಶಾಂತ ಕಿಮಾಯಿ, ಕಂದಾಯ ಅಧಿಕಾರಿ ಬಿ.ಎಂ.ಕಾತ್ರಾಳ, ಪಿಡಿಒ ಸಂತೋಷ ಮೇಟಿ, ಎಚ್.ಬಿ.ಕುರುಬರ, ಸತೀಶ ಪಾಟೀಲ, ಹೊಳಲಪ್ಪ ತಳವಾರ, ಈಶ್ವರ ಮಡ್ಲೇರಿ, ಎಂ.ಜಿ.ಚೋಟಗಲ್, ಶಿವಪುತ್ರಪ್ಪ ಬಟಗುರ್ಕಿ, ಶಾಂತವ್ವ ಬಟಗುರ್ಕಿ, ದಾಕ್ಷಾಯಣಿ ಅತ್ತಿಗೇರಿ, ನೀಲವ್ವ ಸೀತಾರಳ್ಳಿ, ಮುಂತಾದವರಿದ್ದರು. ಎಸ್.ಜಿ.ಹಾಲೇವಾಡಿಮಠ, ಆರ್.ಎಂ.ಕಮ್ಮಾರ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.