ವನ್ಯಜೀವಿ ಸಂರಕ್ಷಣೆ ಹೊಣೆಗಾರಿಕೆಯಾಗಲಿ: ಡಾ.ಅನ್ನದಾನೀಶ್ವರ ಶ್ರೀ


Team Udayavani, Oct 10, 2024, 5:10 PM IST

ವನ್ಯಜೀವಿ ಸಂರಕ್ಷಣೆ ಹೊಣೆಗಾರಿಕೆಯಾಗಲಿ: ಡಾ.ಅನ್ನದಾನೀಶ್ವರ ಶ್ರೀ

■ ಉದಯವಾಣಿ ಸಮಾಚಾರ
ಮುಂಡರಗಿ: ಕಾಡುಗಳ ಸಂರಕ್ಷಣೆಯಂತೆ ವನ್ಯಜೀವಿಗಳ ಸಂರಕ್ಷಣೆ ಕೂಡ ನಮ್ಮ ಹೊಣೆಗಾರಿಕೆಯಾಗಬೇಕು. ಕಾಡಿನಲ್ಲೆ
ವನ್ಯಜೀವಿಗಳ ಸಂರಕ್ಷಣೆ ಮಾಡಲು ಸೂಕ್ತ ವ್ಯವಸ್ಥೆ ಮಾಡಬೇಕು. ಬಸವಾದಿ ಶರಣರು 12ನೇ ಶತಮಾನದಲ್ಲೇ ಮರಗಳು, ಪ್ರಾಣಿಗಳ ಸಂರಕ್ಷಣೆಗೆ ಮಹತ್ವ ನೀಡಿದ್ದರು ಎಂದು ಜಗದ್ಗುರು ಡಾ| ಅನ್ನದಾನೀಶ್ವರ ಮಹಾಶಿವಯೋಗಿಗಳು ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಅರಣ್ಯ ಇಲಾಖೆ ಗದಗ , ಕಪ್ಪತ್ತ ಹಿಲ್ಸ್‌ ಅರಣ್ಯ ವಲಯ ಮತ್ತು ಸಾಮಾಜಿಕ ಅರಣ್ಯ ಇಲಾಖೆಗಳು ಹಮ್ಮಿಕೊಂಡಿದ್ದ 70ನೇ ರಾಷ್ಟ್ರೀಯ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಉದ್ವಾಟಿಸಿ ಅವರು ಆರ್ಶೀವಚನ ನೀಡಿದರು.

ವನ್ಯಜೀವಿ ಪ್ರೇಮಿ ಸಿ.ಎಸ್‌. ಅರಸನಾಳ ಉಪನ್ಯಾಸ ನೀಡಿ, ಮರಗಳು, ವನ್ಯಜೀವಿಗಳು ಕಾಡಿನ ಆಭರಣಗಳು ಆಗಿವೆ. ಕಾಡುಗಳ
ಸಂರಕ್ಷಣೆಯಿಂದ ವನ್ಯಜೀವಿಗಳು ಸಂರಕ್ಷಣೆ ಕೂಡ ಆಗಲಿದೆ. ವನ್ಯಜೀವಿ ಸಂಕುಲ ಮಾನವ ಸಂಘದಿಂದ ಪ್ರತ್ಯೇಕ ಇರಬಯಸುತ್ತವೆ. ಆದ್ದರಿಂದ ಮಾನವ ಮತ್ತು ವನ್ಯಜೀವಿಗಳ ಮಧ್ಯ ಸಂಘರ್ಷ ಹೆಚ್ಚಾಗುತ್ತಿದೆ. ಮಾನವ ವನ್ಯಜೀವಿಗಳ ಜೊತೆ ಬದುಕುವುದನ್ನು ರೂಢಿಸಿಕೊಳ್ಳಬೇಕು. ಸಹ ಅಸ್ತಿತ್ವದ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಕಪ್ಪತಗುಡ್ಡ ನಮ್ಮೆಲ್ಲರಿಗೆ ಸಂಜೀವಿನಿಯಾಗಿದೆ. ಕಪ್ಪತ್ತಗುಡ್ಡದ ಪ್ರಾಣಿ-ಪಕ್ಷಿಗಳ ಸಂರಕ್ಷಣೆಯ ಜೊತೆಗೆ ಮರಗಿಡಗಳನ್ನು ಬೆಳೆಸಬೇಕು. ಗದಗ ಜಿಲ್ಲೆಯಲ್ಲಿ ಕಪ್ಪತಗುಡ್ಡ ಇರುವುದರಿಂದಲೇ ಪರಿಶುದ್ಧ ಗಾಳಿಗೆ ಏಷಿಯಾದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.

ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಕಪ್ಪತ್ತಗುಡ್ಡ ನಮ್ಮ ಜಿಲ್ಲೆಯ ಹೆಮ್ಮೆಯಾಗಿದೆ. ಕಪ್ಪತ್ತಗುಡ್ಡದ ಶುದ್ಧ ಗಾಳಿಯಿಂದ ನಮ್ಮೆಲ್ಲರ ಆರೋಗ್ಯ ಸುಧಾರಣೆಯಾಗಲಿದೆ. ನಿರಂತರವಾಗಿ ಕಪ್ಪತ್ತಗುಡ್ಡವನ್ನು ಕಾಪಾಡಿಕೊಂಡು
ಹೋಗಬೇಕಾಗಿದೆ ಎಂದರು.

ತಹಶೀಲ್ದಾರ್‌ ಎರ್ರೀಸ್ವಾಮಿ ಪಿ.ಎಸ್‌. ಮಾತನಾಡಿದರು. ವೇದಿಕೆಯಲ್ಲಿ ಉರಗ ತಜ್ಞರಾದ ಜಲಾಲಸಾಬ್‌ ಕೊಪ್ಪಳ, ಫಿರೋಜಖಾನ್‌ ಘೋರಿ ಮತ್ತು ವನ್ಯಜೀವಿ ಛಾಯಾಚಿತ್ರಗಾರ ಸುನೀಲ ಯಾಳಗಿ ಮುಂತಾದವರನ್ನು ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಪ್ರಭಾರ ಎಸಿಎಫ್‌ ವೀರೇಂದ್ರ ಮರಿಬಸಣ್ಣವರ, ಸಿಪಿಐ ಮಂಜುನಾಥ ಕುಸುಗಲ್ಲ, ಕಪ್ಪತಹಿಲ್ಸ್‌ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಸುನಿತಾ ಬಿ.ಎಸ್‌., ಸಮಾಜಕಲ್ಯಾಣ ಇಲಾಖೆ ಅರುಣಾ ಸೋರಗಾಂವಿ ಮುಂತಾದವರಿದ್ದರು.

ಕ.ರಾ. ಬೆಲ್ಲದ ಕಾಲೇಜ್‌, ಎಸ್‌.ಬಿ.ಎಸ್‌ ಆಯುರ್ವೇದಿಕ ಮೆಡಿಕಲ್‌ ಕಾಲೇಜು ಮತ್ತು ಪ್ರೀಯದರ್ಶಿನಿ ಬಿ.ಇಡಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು. ಕೊಂಚಿಗೇರಿ ಕಲಾವಿದರು ಪ್ರಾರ್ಥಿಸಿದರು. ಶಿರಹಟ್ಟಿ ಆರ್‌.ಎಫ್‌.ಒ ರಾಮಣ್ಣ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ಡಾ| ಆರ್‌.ಎಚ್‌. ಜಂಗಣವಾರಿ ನಿರೂಪಿಸಿದರು.

ಟಾಪ್ ನ್ಯೂಸ್

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

ನೀರಿನ ತೊಟ್ಟಿಗೆ ಬಿದ್ದು  3 ವರ್ಷದ ಮಗು ಸಾ*ವು

Kanakapura: ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಮಗು ಸಾ*ವು

Belthangady: ಡಿವೈಡರ್‌ ಗೆ ಬೈಕ್‌ ಢಿಕ್ಕಿ; ಸವಾರ ಸಾ*ವು

Belthangady: ಡಿವೈಡರ್‌ ಗೆ ಬೈಕ್‌ ಢಿಕ್ಕಿ; ಸವಾರ ಸಾ*ವು

Badiyadka: ವಂಚನೆ ಪ್ರಕರಣ; ಸಚಿತಾ ವಿರುದ್ಧ ಇನ್ನೊಂದು ಕೇಸು

Badiyadka: ವಂಚನೆ ಪ್ರಕರಣ; ಸಚಿತಾ ವಿರುದ್ಧ ಇನ್ನೊಂದು ಕೇಸು

Ullal: ಎಂಡಿಎಂಎ ಮಾರಾಟ ಆರೋಪಿ ಬಂಧನ

Ullal: ಎಂಡಿಎಂಎ ಮಾರಾಟ ಆರೋಪಿ ಬಂಧನ

Mangaluru: ಸಾಲು ಸಾಲು ರಜೆ; ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಜನಜಂಗುಳಿ

Mangaluru: ಸಾಲು ಸಾಲು ರಜೆ; ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಜನಜಂಗುಳಿ

Udupi: ಗೀತಾರ್ಥ ಚಿಂತನೆ-61: ಶ್ವೇತ ವರ್ಣಕ್ಕೂ, ಶುಕ್ಲ ವರ್ಣಕ್ಕೂ ಸೂಕ್ಷ್ಮ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-61: ಶ್ವೇತ ವರ್ಣಕ್ಕೂ, ಶುಕ್ಲ ವರ್ಣಕ್ಕೂ ಸೂಕ್ಷ್ಮ ವ್ಯತ್ಯಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-fffffg

Gadag;ಹಾಡ ಹಗಲೇ ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಹಣ ದೋಚಿ ಪರಾರಿ

9-gadag

Gadag: 14 ರಂದು ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ 6ನೇ ಪುಣ್ಯಸ್ಮರಣೆ

7-gadag

Gadag: ಗಣಿಗಾರಿಕೆಯ ಪ್ರಸ್ತಾವಗಳನ್ನು ತಿರಸ್ಕರಿಸಬೇಕು: ತೋಂಟದ ಶ್ರೀಗಳು

Eshwarappa

Gadag: ಆರ್‌ಸಿ ಬ್ರಿಗೇಡ್​ಗೆ ಹೆಸರಿನ ಚರ್ಚೆಯಾಗಿದೆ, ಅ.20ಕ್ಕೆ ಬೃಹತ್‌ ಸಮಾವೇಶ: ಈಶ್ವರಪ್ಪ

Gadag; ಆಡಳಿತ ಪಕ್ಷದವರೇ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

Gadag; ಆಡಳಿತ ಪಕ್ಷದವರೇ ಸಿಎಂ ಬದಲಾವಣೆಗೆ ಅವಸರ ಮಾಡುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

Rain: ಚಿತ್ತಾ ಮಳೆ ಅಬ್ಬರಕ್ಕೆ ಇಬ್ಬರ ದುರ್ಮರಣ

ನೀರಿನ ತೊಟ್ಟಿಗೆ ಬಿದ್ದು  3 ವರ್ಷದ ಮಗು ಸಾ*ವು

Kanakapura: ನೀರಿನ ತೊಟ್ಟಿಗೆ ಬಿದ್ದು 3 ವರ್ಷದ ಮಗು ಸಾ*ವು

1-ewwss

India vs Australia; ಟೆಸ್ಟ್‌  ಸರಣಿಗೆ ಗ್ರೀನ್‌ ಸಂಶಯ

1-ucchil

Uchchila Dasara: ದೇಹದಾರ್ಡ್ಯ ಸ್ಪರ್ಧೆ ಉದ್ಘಾಟನೆ

1-asdsad

Arctic Open ಬ್ಯಾಡ್ಮಿಂಟನ್‌; ಲಕ್ಷ್ಯ ಸೇನ್‌ಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.