ಉದ್ಯಾನ ಸ್ವಚ್ಛತೆಗೆ ಯುವಕರ ಆಸಕ್ತಿ
Team Udayavani, Dec 3, 2018, 4:11 PM IST
ಗದಗ: ಕ್ಲೀನ್ ಸಿಟಿಗಳನ್ನಾಗಿ ಪರಿವರ್ತಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಾಕಷ್ಟು ಹಣ ಖರ್ಚು ಮಾಡುತ್ತಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಸಾಕಾರಗೊಳ್ಳುತ್ತಿಲ್ಲ. ಇನ್ನು ಉದ್ಯಾನಗಳ ಸ್ವಚ್ಛತೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ನಗರಸಭೆಯತ್ತ ಬೊಟ್ಟು ಮಾಡುವವರೇ ಹೆಚ್ಚು. ಆದರೆ, ಹುಡ್ಕೋ ಕಾಲೋನಿಯ ಸಮಾನ ಮನಸ್ಕರರು ‘ಸ್ನೇಹ ಬಳಗ’ದ ಹೆಸರಲ್ಲಿ ಪ್ರತೀ ರವಿವಾರ ಒಂದೊಂದು ಉದ್ಯಾನದ ಸ್ವಚ್ಛತೆಗೆ ಧುಮುಕಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರದ ವಿವಿಧೆಡೆ ಅಭಿವೃದ್ಧಿ ವಂಚಿತ ಹಾಗೂ ಸ್ಥಳೀಯರ ಅಸಡ್ಡೆಯಿಂದಾಗಿ ತ್ಯಾಜ್ಯವಿಲೇವಾರಿ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇದರಿಂದ ಇಲ್ಲಿನ ವಾರ್ಡ್ ನಂ. 33ರ ವ್ಯಾಪ್ತಿಯಲ್ಲಿರುವ ಉದ್ಯಾನಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಈ ವಾರ್ಡ್‌ವೊಂದರಲ್ಲೇ ಸಣ್ಣದು-ದೊಡ್ಡದು ಸೇರಿ 30ಕ್ಕೂ ಹೆಚ್ಚು ಉದ್ಯಾನಗಳಿವೆ. ಕೆಲ ಉದ್ಯಾನಗಳಿಗೆ ಫೆನ್ಸಿಂಗ್, ಫ್ಲೆàವರ್ ಫುಟ್‌ಪಾತ್, ಒಂದೆರಡು ಸಿಮೆಂಟ್ ಆಸನಗಳನ್ನು ಅಳವಡಿಸಿದ್ದು ಬಿಟ್ಟರೆ ಬಹುತೇಕ ಬಯಲು ಪ್ರದೇಶ. ಮುಳ್ಳುಕಂಟಿ ಬೆಳೆದಿದ್ದು, ಜನರು ಉದ್ಯಾನಗಳತ್ತ ಸುಳಿಯದಂತಾಗಿದ್ದಾರೆ.
ಸ್ವಚ್ಛತೆಗೆ ಧುಮುಕಿದ ಸ್ನೇಹ ಬಳಗ: ಇಲ್ಲಿನ ಉದ್ಯಾನಗಳು ಮತ್ತು ದೇವಸ್ಥಾನ ಆವರಣಗಳನ್ನು ಸ್ವಚ್ಛಗೊಳಿಸುವಂತೆ ಹಲವು ಬಾರಿ ನಗರಸಭೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದರೆ, ಉದ್ಯಾನಗಳನ್ನು ಸ್ವಚ್ಛಗೊಳಿಸಿ, ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕೆಂದು ಯುವಕರು ಉದ್ದೇಶಿಸಿದ್ದರು.
‘ಬಾಬು ಎನ್ ಶಿದ್ಲಿಂಗ್ ಸ್ನೇಹ ಬಳಗ’ ಎಂಬ ಗುಂಪಿನ ಹೆಸರಲ್ಲಿ ಒಗ್ಗೂಡಿರುವ ಸರಕಾರಿ ಹಾಗೂ ಖಾಸಗಿ ನೌಕರರು, ವಿದ್ಯಾರ್ಥಿಗಳು ಸೇರಿದಂತೆ 20ರಿಂದ 30 ಜನರು ಸಲಿಕೆ, ಪಿಕಾಸಿ, ಬುಟ್ಟಿಗಳನ್ನು ಹಿಡಿದು ಸ್ವಚ್ಛತಾ ಕಾರ್ಯಕ್ಕೆ ಧುಮುಕ್ಕುತ್ತಿದ್ದಾರೆ. ಪ್ರತೀ ರವಿವಾರ ಒಂದೊಂದು ಉದ್ಯಾನ, ದೇವಸ್ಥಾನಗಳನ್ನು ಆಯ್ದುಕೊಂಡು ಬೆಳಗ್ಗೆ 7 ರಿಂದ 10ರ ವರೆಗೆ ಸುಮಾರು 3 ಗಂಟೆಗಳ ಕಾಲ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಯುವಕರೊಂದಿಗೆ ಸ್ಥಳೀಯರು ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ.
ಕಳೆದ ನ. 25ರಿಂದ ಉದ್ಯಾನ ಮತ್ತು ದೇವಸ್ಥಾನಗಳ ಸ್ವಚ್ಛತಾ ಕಾರ್ಯ ಆರಂಭಿಸಿರುವ ಸ್ನೇಹ ಬಳಗದ ಸದಸ್ಯರು, ನ. 25ರಂದು ಪಂಚಮುಖೀ ದೇವಸ್ಥಾನ, ಡಿ. 2ರಂದು ಕೇಶವ ನಗರದ ಬನ್ನಿಮಹಾಂಕಾಳಿ ದೇವಸ್ಥಾನ ಹಾಗೂ ಶಿವಾಜಿ ಉದ್ಯಾನವನ್ನು ಶುಚಿಗೊಳಿಸಿದ್ದಾರೆ. ವಾಯು ವಿಹಾರಿಗಳ ಅನುಕೂಲಕ್ಕಾಗಿ ಉದ್ಯಾನದಲ್ಲಿ ಬೆಳೆದು ನಿಂತಿರುವ ಬೇಲಿ ಗಿಡಗಳು, ಕಳೆ ಹಾಗೂ ರಾಶಿ ರಾಶಿ ಕಸ, ಕಟ್ಟಡಗಳ ತ್ಯಾಜ್ಯವನ್ನೂ ತೆರವುಗೊಳಿಸುತ್ತಿದ್ದಾರೆ. ನೀರಿನ ಲಭ್ಯತೆಯಿರುವ ಉದ್ಯಾನಗಳಲ್ಲಿ ಸಸಿ ನೆಟ್ಟು, ಅವುಗಳನ್ನು ನಿರ್ವಹಣೆ ಮಾಡುವಂತೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸುತ್ತಿರುವುದು ವಿಶೇಷ.
ಹಸಿರೀಕರಣಕ್ಕೆ ಒತ್ತು: ಸ್ನೇಹ ಬಳಗದ ಸದಸ್ಯರು ನಿಸ್ವಾರ್ಥವಾಗಿ ಕಳೆದ ಎರಡು ವರ್ಷಗಳಿಂದ ಅವಳಿ ನಗರದ ವಿವಿಧೆಡೆ ಮರಗಿಡಗಳನ್ನು ಬೆಳೆಸುತ್ತಿದ್ದಾರೆ. ಶಹಪುರ ಪೇಟೆಯ ಐತಿಹಾಸಿಕ ಬಾವಿ, ಬೆಟಗೇರಿ ಸ್ಮಶಾನದ ಕಾಂಪೌಂಡ್, ಗಾಂಧಿ ವೃತ್ತ, ಸ್ಟೇಷರ್ ರೋಡ್‌ನ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳಿಗೆ ರೇಖಾಚಿತ್ರಗಳ ಬಿಡಿಸಿ, ಜನಾಕರ್ಷಿಸುವಂತೆ ಮಾಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ಉದ್ಯಾನಗಳ ಸ್ವಚ್ಛತೆ ಕೈಗೊಂಡಿದ್ದೇವೆ ಎಂಬುದು ಸ್ನೇಹ ಬಳಗದ ಸದಸ್ಯರ ಮಾತು.
ಇನ್ನು, ಸ್ನೇಹ ಬಳಗದ ಕಾರ್ಯಕ್ಕೆ ಡಿ. 2ರಂದು ನಗರಸಭೆಯೂ ಕೈಜೋಡಿಸಿದೆ. ಸ್ನೇಹ ಬಳಗದ ಕಾರ್ಯಕ್ಕೆ ನೆರವಾಗುವಂತೆ ಜೆಸಿಬಿ, ಪೌರ ಕಾರ್ಮಿಕರನ್ನೂ ಕಳುಹಿಸಿದೆ. ಒಟ್ಟಾರೆ, ಸಾರ್ವಜನಿಕರ ಸಹಭಾಗಿತ್ವವಿದ್ದರೆ ಯಾವುದೇ ಕೆಲಸ ಕಷ್ಟಸಾಧ್ಯವಲ್ಲ ಎಂಬುದಕ್ಕೆ ಇದು ಉತ್ತಮ ಉದಾಹರಣೆ.
ವಾರ್ಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು, ವರ್ತಕರು ಸೇರಿದಂತೆ ಪ್ರತಿಷ್ಠಿತರು ವಾಸಿಸುತ್ತಿದ್ದಾರೆ. ಬಡಾವಣೆಯಲ್ಲಿ 35ಕ್ಕೂ ಹೆಚ್ಚು ಉದ್ಯಾನಗಳಿದ್ದರೂ ಅಭಿವೃದ್ಧಿ ಕಂಡಿಲ್ಲ. ಕನಿಷ್ಠಪಕ್ಷ ಸ್ವಚ್ಛಗೊಳಿಸುವುದರಿಂದ ವಾಯುವಿಹಾರಿಗಳಿಗೆ ಅನುಕೂಲವಾಗುತ್ತದೆ ಎಂದು ನಾವು ಭಾವಿಸಿದ್ದೇವೆ. ಉದ್ಯಾನಗಳಿಗೆ ನೀರಿನ ಸಂಪರ್ಕ ಒದಗಿಸಿದರೆ, ಸ್ಥಳೀಯರ ನೆರವಿನಿಂದ ಗಿಡಗಳು ಬೆಳೆಸುವುದಕ್ಕೂ ನಾವು ಸಿದ್ಧರಿದ್ದೇವೆ.
ಬಾಬು ಎನ್. ಸಿದ್ಲಿಂಗ್, ಸ್ನೇಹ ಬಳಗದ ಪ್ರಮುಖ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.