ಯುವ ಮಹೋತ್ಸವ ಜ್ಞಾನದೀಪ್ತಿ ಶಿಬಿರ ಸಂಪನ್ನ; ಡಾ|ಕೆ.ಬಿ.ಗುಡಸಿ
Team Udayavani, Jan 21, 2023, 6:23 PM IST
ನರಗುಂದ: ವಿದ್ಯಾರ್ಥಿತನ ನೀವು ನಿರ್ಧರಿಸುವ ಸಮಯವಾಗಿದೆ. ಸಿಗುವ ಅವಕಾಶ ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ನಿಮಗೆ ಯಾವುದು ಖುಷಿ ಕೊಡುತ್ತದೆಯೋ ಅದನ್ನೇ ಮಾಡುವ ನಿರ್ಧಾರ ನಿಮ್ಮ ಗುರಿಯಾಗಿರಲಿ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ|ಕೆ.ಬಿ.ಗುಡಸಿ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶುಕ್ರವಾರ ಸಾಯಂಕಾಲ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜ್ಞಾನ ವೇದಿಕೆಯಲ್ಲಿ ಬಿಜೆಪಿ ನರಗುಂದ ಮತಕ್ಷೇತ್ರ ಹಾಗೂ ಲಯನ್ಸ್ ಕ್ಲಬ್ ಆಶ್ರಯದಲ್ಲಿ ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿ ಸಹಯೋಗದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ 3 ದಿನಗಳ ಕಾಲ ನಡೆದ ಯುವ ಮಹೋತ್ಸವ ಜ್ಞಾನದೀಪ್ತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು ವಿದ್ಯಾರ್ಥಿಗಳು ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ. ಆದರೆ, ಇಲ್ಲಿ ನಿಮ್ಮ ಭವಿಷ್ಯದ ದೃಷ್ಟಿಯಿಂದ ಮೂರು ದಿನಗಳ ಉಚಿತ ತರಬೇತಿ ಶಿಬಿರ ಏರ್ಪಡಿಸಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ. ನಿಮ್ಮ ಭವಿಷ್ಯದ ಬಗ್ಗೆ ನೀವು ಗಂಭೀರವಾಗಿ ಚಿಂತನೆ ಮಾಡುವ ಸಂದರ್ಭವಿದು. ಐಎಎಸ್, ಐಪಿಎಸ್, ಐಎಫ್‌ಎಸ್ ನಮಗಲ್ಲ ಎಂಬ ಕೀಳರಿಮೆ ಮನಸ್ಸಿನಿಂದ ಹೊರಹಾಕಿ, ಅದರಲ್ಲೂ ನಾವು ಯಶಸ್ಸು ಸಾ ಧಿಸುತ್ತೇವೆ ಎಂಬ ಛಲ ನಿಮ್ಮ ಗುರಿಯಾಗಿರಲಿ ಎಂದು ಡಾ|ಕೆ.ಬಿ.ಗುಡಸಿ ಅವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಮಾತನಾಡಿ, ಕಾರ್ಯಾಗಾರ ಪ್ರಾರಂಭದಲ್ಲಿ ಇಷ್ಟು ವಿದ್ಯಾರ್ಥಿಗಳು ಸೇರುತ್ತಾರೆ ಎಂಬ ನಿರೀಕ್ಷೆ ನಮಗಿರಲಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ನಿಮ್ಮ ಆಸಕ್ತಿ ಗಮನಿಸಿದಾಗ ಇಂತಹ ಇನ್ನೂ ಹಲವಾರು ತರಬೇತಿಗಳನ್ನು ನಿಮಗಾಗಿ ಆಯೋಜಿಸುವ ಉತ್ಸಾಹ ನಮಗಾಗಿದೆ. ಎಲ್ಲೋ ಒಂದು ಕಡೆಗೆ ನಮ್ಮ ಭಾಗದ ಪ್ರತಿಭೆಗಳಿಗೆ ಒಳ್ಳೆಯ ಅವಕಾಶಗಳು ಸಿಗಲಿ ಎಂಬ ಸದುದ್ದೇಶದಿಂದ ಈ ಕಾರ್ಯಾಗಾರ ಏರ್ಪಡಿಸಿದ್ದೇವೆ.
ನೀವು ಭವಿಷ್ಯ ರೂಪಿಸಿಕೊಳ್ಳಲು ನಾವು ದಾರಿದೀಪ ಮಾತ್ರ ತೋರಿಸುತ್ತೇವೆ. ಅದನ್ನು ಹೇಗೆ ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳುತ್ತೀರಿ ಎಂಬ ನಿರ್ಧಾರದ ಮೇಲೆ ಈ ಶಿಬಿರದ ಸಾರ್ಥಕತೆ ಅಡಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿರಾದಾರ ಮಾತನಾಡಿದರು.ಎರಡನೇ ದಿನವಾದ ಗುರುವಾರ ಹಾಸ್ಯ ಭಾಷಣ ಮಾಡಿದ ವಿಜಯಲಕ್ಷ್ಮೀ ಕೊಂಗವಾಡ ವಿದ್ಯಾರ್ಥಿನಿಗೆ ವಿವಿಧ ಹಾಸ್ಯ ಪುಸ್ತಕಗಳನ್ನು ನೀಡಲಾಯಿತು.
ವೇದಿಕೆಯಲ್ಲಿ ಅಜ್ಜನಗೌಡ ಪಾಟೀಲ, ಎನ್ .ವಿ.ಮೇಟಿ, ಚಂದ್ರಶೇಖರ ದಂಡಿನ, ಜಯಪ್ರಕಾಶ ಕಂಠಿ, ಬಸು ಪಾಟೀಲ, ವಿಠಲ ಹವಾಲ್ದಾರ, ನಿರಂಜನ ಮಡಿವಾಳರ, ರಿಯಾಜ ಕೊಣ್ಣೂರ, ಶರಣು ಪಿಡ್ಡನಾಯ್ಕರ, ಸಿದ್ದೇಶ ಹೂಗಾರ, ಮಲ್ಲಪ್ಪ ಮೇಟಿ, ಮಂಜುನಾಥ ಮೆಣಸಗಿ, ಪವಾಡೆಪ್ಪ ವಡ್ಡಿಗೇರಿ, ಡಾ.ಕಿರಣ ಹೊಂಬಾಳ, ಬಿ.ಎಂ.ಮೊಕಾಶಿ, ರಾಚನಗೌಡ ಪಾಟೀಲ ಮುಂತಾದವರು ಭಾಗವಹಿಸಿದ್ದರು.
ಜ್ಞಾನದೀಪ್ತಿ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ಏರ್ಪಡಿಸಿ ಅದರಲ್ಲಿ ಉತ್ತೀರ್ಣರಾದ ಮೊದಲ ಹಂತದಲ್ಲಿ 50 ವಿದ್ಯಾರ್ಥಿಗಳಿಗೆ ಮತ್ತು ಎರಡನೇ ಹಂತದಲ್ಲಿ 100 ವಿದ್ಯಾರ್ಥಿಗಳಿಗೆ ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿಯಲ್ಲಿ 3 ತಿಂಗಳ ಉಚಿತ ತರಬೇತಿ ಕೊಡಿಸಲಾಗುವುದು.ಪರೀಕ್ಷೆ ದಿನಾಂಕ ಮತ್ತು ಸಮಯ ಆಯಾ ಕಾಲೇಜುಗಳಲ್ಲಿ ಪ್ರಕಟಿಸಲಾಗುವುದು.
ಉಮೇಶಗೌಡ ಪಾಟೀಲ, ಲಯನ್ಸ್ ಕ್ಲಬ್ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.