![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 23, 2019, 11:17 AM IST
ಗಂಗಾವತಿ: ಮೇಲ್ಮಟ್ಟ, ಕೆಳಮಟ್ಟದ ಕಾಲುವೆಗಳಿಗೆ ಶಾಸಕ ಪರಣ್ಣ ಭೇಟಿ ನೀಡಿ ಪರಿಶೀಲಿಸಿದರು.
ಕೆ.ನಿಂಗಜ್ಜ
ಗಂಗಾವತಿ: ವಿಜಯನಗರ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯಕ್ಕೆ ರಾಜ್ಯ ಸರಕಾರ ಏಷಿಯನ್ ಬ್ಯಾಂಕ್ ನೆರವಿನೊಂದಿಗೆ 372 ಕೋಟಿ ರೂ. ಮಂಜೂರು ಮಾಡಿ ಕಾಮಗಾರಿ ಆರಂಭಿಸಿದೆ. ವಿಜಯನಗರ ಕಾಲುವೆಗಳು ಹೊಸಪೇಟೆ, ಕೊಪ್ಪಳ, ಗಂಗಾವತಿ ಮತ್ತು ಸಿರಗುಪ್ಪ ತಾಲೂಕಿನಲ್ಲಿದ್ದು ತುಂಗಭದ್ರಾ ನದಿಗೆ ನೈಸರ್ಗಿಕವಾಗಿ ಅಣೆಕಟ್ಟು ನಿರ್ಮಿಸಿ ನೆಲಮಟ್ಟದಲ್ಲಿ ಕಾಲುವೆಗಳನ್ನು ತೋಡಿ ರೈತರ ಭೂಮಿಗೆ ವಿಜಯನಗರದ ಅರಸರು ನೀರಾವರಿ ವ್ಯವಸ್ಥೆ ಮಾಡಿದ್ದರು. ಅಂದಿನ ಕಾಲದಲ್ಲಿ ಇಲ್ಲಿನ ರೈತರು ತೋಟಗಾರಿಕೆ, ಹೂವು ಮತ್ತು ಗಡ್ಡೆಗಳನ್ನು ಬೆಳೆಯುತ್ತಿದ್ದರು.
ನೀರಾವರಿ ಇಲಾಖೆ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಅಣೆಕಟ್ಟು ಮತ್ತು ಕಾಲುವೆಗಳು ಶಿಥಿಲಗೊಂಡು ನೀರಿನ ಸೋರಿಕೆ ಅಧಿಕವಾಗುತ್ತಿತ್ತು. ಇಲ್ಲಿಯ ರೈತರು ವಿಜಯನಗರ ಕಾಲುವೆಗಳನ್ನು ದುರಸ್ತಿ ಮಾಡಿಸುವಂತೆ ದಶಕಗಳಿಂದ ಮನವಿ ಮಾಡುತ್ತಿದ್ದರು.
2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಸೇರಿ ಕಾಲುವೆಗಳ ವ್ಯಾಪ್ತಿಯ ಶಾಸಕರು ವಿಜಯನಗರ ಕಾಲುವೆಗಳ ದುರಸ್ತಿಗೊಳಿಸಲು ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ವಿಜಯನಗರ ಕಾಲುವೆಗಳ ದುರಸ್ತಿ ಮಾಡಲು 500 ಕೋಟಿ ಮಂಜೂರು ಮಾಡಲು ನಿರ್ಣಯ ತೆಗೆದುಕೊಂಡಿದ್ದರು. ಈ ಕಾಲುವೆಗಳು ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಯುನೆಸ್ಕೋ ಮತ್ತು ನೀರನಾಯಿ ಸಂರಕ್ಷಿತ ಪ್ರದೇಶದಲ್ಲಿ ಬರುವುದರಿಂದ ಕಾಮಗಾರಿಗೆ ಆರ್ಥಿಕ ನೆರವು ನೀಡುವ ಏಷಿಯನ್ ಅಭಿವೃದ್ಧಿ ಬ್ಯಾಂಕ್ ಪರಿಸರ ಸಂರಕ್ಷಣೆ ಮಾಡುವ ಜತೆ ಕಾಲುವೆ ಕಾಮಗಾರಿ ಹೇಗೆ ನಿರ್ವಹಿಸಬೇಕೆಂದು ಹಲವು ಬಾರಿ ರೈತರು ಪರಿಸರ ತಜ್ಞರ ಜತೆ ಸಭೆ ನಡೆಸಿ ಸಲಹೆಗಳನ್ನು ಸ್ವೀಕರಿಸಿದ ನಂತರ ಇದೀಗ ಕಾಮಗಾರಿ ನಡೆಸಲು ಅನುಮತಿ ನೀಡಿದೆ.
ಪ್ರಸ್ತುತ ಹುಲಿಗಿ-ಶಿವಪೂರ, ಸಾಣಾಪುರ-ಆನೆಗೊಂದಿ ಮತ್ತು ಗಂಗಾವತಿ ಮೇಲ್ಮಟ್ಟ, ಕೆಳಮಟ್ಟದ ಅಣೆಕಟ್ಟು ನಿರ್ಮಾಣಕ್ಕೆ ತಾಂತ್ರಿಕ ತೊಂದರೆ ಇದ್ದು, ಸರಕಾರ ಇವುಗಳಿಗೆ ಪ್ರತೇಕ ಟೆಂಡರ್ ಕರೆಯಲಿದೆ. ಸದ್ಯ ಕಾಲುವೆಗಳ ಶಾಶ್ವತ ದುರಸ್ತಿ ಕಾರ್ಯ ನಡೆಯಲಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.