ಗವಿಸಿದ್ದೇಶ್ವರ ಮುತ್ಯಾ-ಮಹಾಲಕ್ಷ್ಮೀ ದೇವಿ ಜಾತ್ರೆ
Team Udayavani, Apr 8, 2019, 4:31 PM IST
ತಾಂಬಾ: ಗವಿಸಿದ್ದೇಶ್ವರ ಮಹಾಲಕ್ಷ್ಮೀ ದೇವಿ ಜಾತ್ರೆ ಹಾಗೂ ನಂದರಾಯ ಮುತ್ಯಾನ ಜಾತ್ರೆಯಲ್ಲಿ ಮುತ್ಯಾನ ಪಲ್ಲಕ್ಕಿ ಹೊತ್ತವರು ಭಕ್ತರು ಹೆಜ್ಜೆ ಹಾಕಿದರು.
ತಾಂಬಾ: ಮುತ್ಯಾನ ಪಲ್ಲಕ್ಕಿ ಬಂತು, ಬಂತು ಎಂದದ್ದೇ ತಡೆ ನೂರಾರು ಮಹಿಳೆಯರು ಬಾಲಕರು ವೃದ್ಧರು ಸಹಿತ ದೇವರ ಪಲ್ಲಕ್ಕಿ ಬರುವ ಮಾರ್ಗದಲ್ಲಿ ಅಡ್ಡ ಬಿದ್ದರು ನೋಡ ನೋಡುತ್ತಿದ್ದಂತೆಯೇ ಗವಿಸಿದ್ದ ಮುತ್ಯಾನ ಹಾಗೂ ಮಹಾಲಕ್ಷ್ಮೀ ದೇವಿಯ ಪಲ್ಲಕ್ಕಿ ಹೊತ್ತಿದ್ದವರು ನಿಧನವಾಗಿ ಒಂದೊಂದೇ ಹೆಜ್ಜೆಗಳನ್ನು ಸದ್ಬಕ್ತರ ಮೇಲೆ ಇಡುತ್ತ ನಡೆಯುವ ಅಪರೂಪದ
ದೃಶ್ಯ ಕಂಡು ಬಂತು.
ಇದು ಗ್ರಾಮದಲ್ಲಿ ಶನಿವಾರ ನಡೆದ ಗವಿಸಿದ್ದೇಶ್ವರ ಮುತ್ಯಾನ ಹಾಗೂ ಮಹಾಲಕ್ಷ್ಮೀ ದೇವಿಯ ಜಾತ್ರೆ ವೇಳೆ ಕಂಡು ಬಂತು. ಮಹಾಲಕ್ಷ್ಮೀ ದೇವಿಯ ದೇವಾಲಯದ ಸಮೀಪದಲ್ಲಿ ಪಲ್ಲಕ್ಕಿಗಳು ಬರುತ್ತಿವೆ ಎನ್ನುವಷ್ಟರಲ್ಲಿಯೇ ಭಕ್ತರು ಡೊಳ್ಳು ವಾದ್ಯವೃಂದ
ಸಮೇತ ಸ್ವಾಗತಿಸುವ ಕಾರ್ಯ ನಡೆಯಿತು.
ಗ್ರಾಮದ ರಸ್ತೆಯಾದ್ದಕ್ಕೂ ನಿಂತಿದ್ದ ನೂರಾರು ಮಹಿಳೆಯರು ಅದೇ ಮಾರ್ಗದಲ್ಲಿ ತಾವು ಅಡ್ಡ ಬಿದ್ದು ಆಶೀರ್ವಾದ ಪಡೆದರು.
ಇದಕ್ಕೂ ಮೊದಲು ಮಹಾಲಕ್ಷ್ಮೀ ದೇವಿಯ ಸಿಡಿ ಬಂಡಿಯ ಭವ್ಯ ಮೆರವಣಿಗೆ ಶ್ರೀದೇವಿಯ ಮೂಲಸ್ಥಳದಿಂದ ಪ್ರಮುಖ ಬೀದಿಗಳಲೂ ಡೊಳ್ಳು ಕುಣಿತದೊಂದಿಗೆ ನಡೂರ ಹಣಮಂತ ದೇವರ ಸುತ್ತುಹಾಕಿ ಈರಸಿದ್ದಪ್ಪನ ಮಠಕ್ಕೆ ತಲುಪಿ ಅಲ್ಲಿ
ಪೂಜೆಗೊಂಡು ಮರವಣಿಗೆ ಸಮೇತ ಮೂಲಸ್ಥಳಕ್ಕೆ ಬಂದು ತಲುಪಿತು. ನಂತರ ಭಕ್ತರಿಂದ ಪೂಜೆಗೊಂಡು ಪಲ್ಲಕ್ಕಿಗಳು ಗವಿಸಿದ್ದೇಶ್ವರ ಮುಕ್ತಿ ಮಂದಿರದಲ್ಲಿ ಹೂವಿನ ಹೆಚ್ಚಡ ಸ್ವೀಕರಿಸಿದ ನಂತರ ಭಕ್ತರು ಪ್ರಸಾದ ಸ್ವೀಕರಿಸಿದರು.
ನಂತರ ಮಹಾಲಕ್ಷ್ಮೀ ದೇವಿ ಆವರಣದಲ್ಲಿ ಪಟ್ಟದ ಮಾರಾಯ ಬೂಸಪ್ಪ ಪೂಜೇರಿ ದೇವರ ಹೇಳಿಕೆಯಲ್ಲಿ ತೊಗರಿ ನೆಟೆ ಹಿಡಿತು, ಕಡಲಿ ಜೋಳ ಹಸರುನಿಸೆನೆ ಹಚ್ಚಿ ಹತ್ತಿ ಭಂಗಾರ ಖಡೆ ಹಾಕಿ ರೈತಗ ಬಗಲಾಗ ಹಿಡಿತಿನಿ ಎಂದು ಹೇಳಿದಾಗ ಜಾತ್ರೆ
ಕೊನೆಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.