ಉದ್ಯಾನ ಜಾಗದಲ್ಲಿ ಅಕ್ರಮ ಕಟ್ಟಡ
ಲಕ್ಷ್ಮೀ ನಗರ ಬಡಾವಣೆಯ ಸಾರ್ವಜನಿಕ ನಿವೇಶನಗಳ ನಕಲಿ ದಾಖಲೆ ಸೃಷ್ಟಿಸಿ ಮಾರಾಟ
Team Udayavani, Nov 14, 2019, 12:19 PM IST
ಚೆನ್ನಕೇಶವುಲು ಗೌಡ
ಗುರುಮಠಕಲ್: ಬಡಾವಣೆಗಳ ನಿರ್ಮಾಣ, ಪರವಾನಗಿಗೆ ಸಂಬಂಧಿಸಿದಂತೆ ಪ್ರತಿ ಬಡಾವಣೆಯಲ್ಲಿಯೂ ಸಾರ್ವಜನಿಕ ಬಳಕೆಗೆ ಇಂತಿಷ್ಟು ವಿಸ್ತೀರ್ಣದ ನಿವೇಶನ ಮೀಸಲಾಗಿ ಕಾಯ್ದಿರಿಸಬೇಕು ಎಂಬ ನಿಯಮವಿದೆ. ನಿಯಮ ಪಾಲನೆ ಕಾರ್ಯಗತಗೊಳಿಸಬೇಕಿದ್ದವರೇ ಅದನ್ನು ಗಾಳಿಗೆ ತೂರಿ ಸಾರ್ವಜನಿಕ ಬಳಕೆ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದರೆ ಸಾರ್ವಜನಿಕರು ಯಾರನ್ನು ಕೇಳಬೇಕು?
ಇದು ತಾಲೂಕು ಕೇಂದ್ರ ಗುರುಮಠಕಲ್ ಪಟ್ಟಣದ ಲಕ್ಷ್ಮೀ ನಗರ ಬಡಾವಣೆ ನಿವಾಸಿಗಳ ವ್ಯಥೆ. ಸ.ನಂ. 90ರ ಲಕ್ಷ್ಮೀ ನಗರ ಬಡಾವಣೆ ವ್ಯಾಪ್ತಿಯ ಸಾರ್ವಜನಿಕ ಉದ್ಯಾನಕ್ಕೆ ಮೀಸಲಿಟ್ಟಿದ್ದ ನಿವೇಶನವನ್ನು ಕೆಲವು ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳು ಶಾಮೀಲಾಗಿ ದಾಖಲೆ ಸೃಷ್ಟಿಸಿಕೊಂಡು ಅಕ್ರಮ ಮಾರಾಟಕ್ಕೆ ಮುಂದಾಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸುತ್ತಿದೆ. ಪುರಸಭೆ ಮಾಜಿ ಸದಸ್ಯರು, ಪುರಸಭೆ ಕೆಲವು ಅಧಿಕಾರಿಗಳು ಒಂದಾಗಿ ನಮ್ಮ ಕಾಲೊನಿಯಲ್ಲಿನ ಗಾರ್ಡನ್ ಜಾಗ ಮನೆ ಕಟ್ಟಿಕೊಳ್ಳಲು ಮಾರಾಟ ಮಾಡಿದ್ದಾರೆ.
ಇದನ್ನು ಪ್ರಶ್ನಿಸಿದ್ದಕ್ಕೆ ಮನೆ ಮೇಲೆ ಗೂಂಡಾಗಳಂತೆ ನುಗ್ಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ನಿಮ್ಮ ಮನೆ ಮಾರುತ್ತಿಲ್ಲ. ಸರ್ಕಾರಿ ಭೂಮಿ ಮಾರಿದರೆ ನಿಮಗ್ಯಾಕೆ ನೋವು ಎಂದು ಅವಾಚ್ಯವಾಗಿ ಬಯ್ಯುತ್ತಾರೆ ಎನ್ನುವುದು ಲಕ್ಷ್ಮೀ ನಗರ ಬಡಾವಣೆ ನಿವಾಸಿಗಳಾದ ರವಿ, ತಿಮ್ಮಪ್ಪ ಆರೋಪ.
2015ರಲ್ಲಿಯೂ ಇಂತಹ ಪ್ರಕರಣವೊಂದು ನಡೆದಿತ್ತು. ಇಡೀ ಜಿಲ್ಲೆಯಲ್ಲಿಯೇ ಇದರ ಚರ್ಚೆ ತೀವ್ರವಾಗಿತ್ತು. ನಂತರ ಅಕ್ರಮ ನಿವೇಶನಗಳು, ಬೈ ನಂಬರ್ ನಿವೇಶನಗಳಲ್ಲಿ ಪುರಸಭೆ ಆಸ್ತಿ ಎನ್ನುವ ಫಲಕ ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು. ಇದೀಗ ಮತ್ತೆ ಅಕ್ರಮ ಕಟ್ಟಡಗಳ ಕಾರ್ಯ ಮುಂದುವರಿಯುತ್ತಿದೆ ಎನ್ನುವುದು ಬಡಾವಣೆ ಜನರನ್ನು ಚಿಂತೆಗೀಡು ಮಾಡಿದೆ.
ಉದ್ಯಾನ ಸ್ಥಳ ಅಕ್ರಮ ಮಾರಾಟವಾಗಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಈ ಮೊದಲು ಪುರಸಭೆ ಮುಖ್ಯಾಧಿಕಾರಿಯಾಗಿದ್ದವರು ತಮ್ಮ ಅವಧಿಯಲ್ಲಿ ಸ.ನಂ.90ರಲ್ಲಿ ಒಂದೇ ಒಂದು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರಲಿಲ್ಲ. ಆದರೆ ಈಗ ಕಟ್ಟಡ ನಿರ್ಮಾಣದ ಕೆಲಸ ವೇಗ ಪಡೆಯುತ್ತಿದೆ.
ಪುರಸಭೆಗೆ ಹೋದಾಗ ಅಲ್ಲಿನ ಸಿಬ್ಬಂದಿ ಬಂದು ಕೆಲಸ ನಿಲ್ಲಿಸುತ್ತಾರೆ. ಆದರೆ, ಸಿಬ್ಬಂದಿ ಅತ್ತ ಹೋದ ಕೂಡಲೇ ಇತ್ತ ಕೆಲಸಗಳು ಆರಂಭಗೊಳ್ಳುತ್ತವೆ ಎಂದು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಾರೆ ಇಲ್ಲಿನ ಹಣಮಂತು ಅಂಜಪ್ಪ ಹಾಗೂ ಕೃಷ್ಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.