ಗುರುಮಠಕಲ್ ಠಾಣೆಯಲ್ಲಿ ಪಿಎಸ್‌ಐ ಹುದ್ದೆ ಖಾಲಿ
ವಾಹನಗಳ ವೇಗಕ್ಕೆ ಕಡಿವಾಣ ಯಾವಾಗ?
Team Udayavani, Jun 2, 2019, 11:04 AM IST
ಚೆನ್ನಕೇಶವುಲು ಗೌಡ
ಗುರುಮಠಕಲ್: ಪಟ್ಟಣದಲ್ಲಿನ ಪೊಲೀಸ್ ಠಾಣೆಯಲ್ಲಿ ಬಹುತೇಕ ಹುದ್ದೆಗಳು ಖಾಲಿ ಇದ್ದು, ಅದರಲ್ಲೂ ಪಿಎಸ್‌ಐ ಹುದ್ದೆ ಖಾಲಿ ಇರುವುರಿಂದ ಎರಡು ತಿಂಗಳಿಂದ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಪಾಲನೆ ಮತ್ತು ಸುವ್ಯವಸ್ಥೆಯಲ್ಲಿ ತೊಡುಕಾಗುತ್ತಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದ ಆರಕ್ಷಕ ಠಾಣೆಯಲ್ಲಿ ಕೆಲವು ತಿಂಗಳಿಂದ ಆರಕ್ಷಕ ಉಪ ನಿರೀಕ್ಷರು ಖಾಲಿ ಇರುವುದರಿಂದ ಸಿಬ್ಬಂದಿ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಬೇಕಿದೆ. ಪಟ್ಟಣ ತಾಲೂಕು ಕೇಂದ್ರವಾಗಿರುವುದರ ಜತೆಗೆ ತೆಲಂಗಾಣ ಗಡಿ ಭಾಗಕ್ಕೆ ಹೊಂದಿದ ಪ್ರದೇಶವಾಗಿದೆ. ಅಂತಾರಾಜ್ಯ ರಸ್ತೆ ಪಟ್ಟಣದ ಮೂಲಕ ಹಾದು ಹೋಗುತ್ತಿದ್ದು, ಯಾವುದೇ ಅಪಘಾತಗಳು ಸಂಭವಿಸಿದರೆ ತಕ್ಷಣ ಸ್ಪಂದಿಸಲು ಪೊಲೀಸ್ ಅಧಿಕಾರಿಗಳು ಇಲ್ಲದಂತಾಗಿದೆ. ಪಟ್ಟಣದ ಮುಖ್ಯ ರಸ್ತೆಗಳು ಕಿರಿದಾಗಿದ್ದು, ವಾಹನ ದಟ್ಟಣೆ ಮತ್ತು ಟ್ರಾಫಿಕ್ ಸಮಸ್ಯೆ ಉಂಟಾಗಲಿದೆ. ರಸ್ತೆ ಸಂಚಾರ ನಿಯಮಗಳ ಪಾಲನೆಗೆ ಜಾಗೃತಿ ಮೂಡಿಸಲು ಉಪ ಆರಕ್ಷಕ ನಿರೀಕ್ಷಕರ ಅವಶ್ಯಕತೆಯಿದ್ದು, ಪೊಲೀಸ್ ಇಲಾಖೆ ಶೀಘ್ರವೇ ಪಿಎಸ್‌ಐ ನೇಮಿಸಬೇಕು ಎಂಬುದು ಜನರ ಆಗ್ರಹವಾಗಿದೆ. ಮೂರು ತಿಂಗಳಿಂದ ಪಿಎಸ್‌ಐ ಇಲ್ಲದ್ದರಿಂದ ಯಾರು ಲೈಸನ್ಸ್ ಕೇಳುವುದಿಲ್ಲ ಎಂಬ ಭಾವನೆ ಬಂದಿದೆ. ಇನ್ನೊಂದು ಕಡೆ ಹೈವೆ ಪೆಟ್ರೊಲಿಂಗ್ ವಾಹನ ಮತ್ತು ಇಂಟರ್ ಸೆಪ್ಟರ್ ವಾಹನ ಪಟ್ಟಣದ ಹೊರ ವಲಯದಲ್ಲಿ ತಪಾಸಣೆ ಮಾಡುತ್ತಿರುವ ಸಮಯದಲ್ಲಿ ಮಾತ್ರ ವಾಹನ ದಟ್ಟಣೆ ಕಡಿಮೆ ಇರುತ್ತದೆ. ನಂತರ ಗಾಡಿಗಳ ವೇಗಕ್ಕೆ ಕಡಿವಾಣ ಹಾಕುವವರು ಯಾರೂ ಇಲ್ಲ ಎನ್ನುವಂತಾಗಿದೆ. ಕೆಲ ದಿನಗಳಿಂದ ಅಪಘಾತದಲ್ಲಿ ಗಾಯಗೊಂಡವರು, ಮೃತಪಟ್ಟವರು ಸಣ್ಣ ವಯಸ್ಸಿನವರೇ ಎಂಬುದು ಅಘಾತಕಾರಿ ಅಂಶ.ಪಟ್ಟಣದಲ್ಲಿ ರಸ್ತೆ ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕಾಗಿದೆ. ಈ ನಿಟ್ಟನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಖಾಲಿ ಹುದ್ದೆಗಳನ್ನು ತುಂಬಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಕರ್ತವ್ಯ ನಿರ್ವಹಣೆಗೆ ಆಡಚಣೆ
ಗುರುಮಠಕಲ್ ಪೊಲೀಸ್ ಠಾಣೆಗೆ ಒಬ್ಬ ಪಿಎಸ್‌ಐ, 4 ಎಎಸ್‌ಐ, 12 ಹೆಡ್ ಕಾನ್ಸೆಟೇಬಲ್, 24 ಪಿಸಿ ಹಾಗೂ 3 ಮಹಿಳಾ ಪಿಸಿ ಸೇರಿ ಒಟ್ಟು 40 ಪೊಲೀಸರು ಕರ್ತವ್ಯ ನಿರ್ವಹಿಸಬೇಕು. ಇದರಲ್ಲಿ ಪಿಎಸ್‌ಐ ಇಲ್ಲ. ಠಾಣೆಯಲ್ಲಿ 1 ಪಿಎಸ್‌ಐ, 4 ಎಎಸ್‌ಐ, 5 ಹೆಡ್ ಕಾನ್ಸೆಟೇಬಲ್ ಮತ್ತು 5 ಪುರುಷ ಪೇದೆ ಸೇರಿ ಒಟ್ಟು 13 ಸಿಬ್ಬಂದಿ ಕೊರತೆಯಿದೆ. ಇದರಿಂದ ಸರಿಯಾದ ಕರ್ತವ್ಯ ನಿರ್ವಹಣೆಗೆ ಆಡಚಣೆಯಾಗುತ್ತಿದೆ ಎಂಬುದು ಇಲ್ಲಿನ ಕೆಲ ಸಿಬ್ಬಂದಿ ಅಳಲು.
ಗುರುಮಠಕಲ್ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಏನಾದರೂ ಮಟ್ಕಾ ಜೂಜು, ಸಾರಾಯಿ ಮಾರಾಟ, ಅಕ್ರಮ ಮರಳು ಸಾಗಾಟ ಇತ್ಯಾದಿ ಚಟುವಟಿಕೆಗಳು ನಡೆದರೆ ಕಡಿವಾಣ ಹಾಕುವವರು ಯಾರು? ಏನಾದರೂ ವ್ಯಾಜ್ಯಗಳು, ತಂಟೆ ತಕರಾರು ನಡೆದರೆ ಕ್ರಮ ಕೈಗೊಳ್ಳುವವರು ಯಾರು ಎಂಬುದು ನಾಗರಿಕರ ಪ್ರಶ್ನೆಯಾದರೆ, ಏನಾದರೂ ಅಪರಾಧ ಕೃತ್ಯಗಳು ನಡೆದರೆ ಠಾಣಾಧಿಕಾರಿಯಿಲ್ಲದೇ ತಕ್ಷಣ ಕ್ರಮಕೈಗೊಳ್ಳುವುದು ಕಷ್ಟವಾಗುತ್ತದೆ. ಶೀಘ್ರ ಖಾಲಿ ಹುದ್ದೆ ಭರ್ತಿ ಮಾಡಬೇಕು.
•ಚಂದುಲಾಲ್ ಚೌಧರಿ,
ಮುಂಖಂಡರು ಗುರುಮಠಕಲ್
ಗುರುಮಠಕಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕೆಲವು ಹುದ್ದೆಗಳು ಖಾಲಿ ಇರುವುದು ಇಲಾಖೆ ಗಮನಕ್ಕಿದೆ. ಎಲ್ಲ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲಾಗುವುದು. ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗುವುದು.
•ಋಷಿಕೇಶ್ ಭಗವನ್ ಸೋನಾವಣೆ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾದಗಿರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.