ಕೆಟ್ಟು ನಿಂತ ಬೀದಿ ದೀಪಗಳು
ದೀಪ ಅಳವಡಿಕೆಗೆ ಲಕ್ಷಾಂತರ ರೂ. ವೆಚ್ಚದುರಸ್ತಿಗೆ ಸ್ಥಳೀಯರ ಆಗ್ರಹ
Team Udayavani, May 20, 2019, 3:33 PM IST
ಗುರುಮಠಕಲ್: ಪಟ್ಟಣದ ಪ್ರವಾಸಿ ಮಂದಿರ ಎದುರಗಡೆ ಕೆಟ್ಟು ನಿಂತ ವಿದ್ಯುತ್ ದೀಪಗಳು.
ಗುರುಮಠಕಲ್: ಪಟ್ಟಣದಲ್ಲಿ ಲಕ್ಷಾಂತರ ರೂ. ವೆಚ್ಚ ಮಾಡಿ ಅಳವಡಿಸಿರುವ ಹೈಮಾಸ್ಟ್ ಹಾಗೂ ಮಕ್ರ್ಯೂರಿ ದೀಪಗಳು ಬೆಳಕು ನೀಡುತ್ತಿಲ್ಲ.
ಪುರಸಭೆ ಪಟ್ಟಣದ ಸೌಂದರ್ಯ ವಿದ್ಯುತ್ ದೀಪಗಳಿಂದ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತಿ ಮತ್ತು ಲೊಕೋಪಯೋಗಿ ಇಲಾಖೆಗಳ ಸಹಯೋಗದಲ್ಲಿ ಯಾದಗಿರಿ-ಹೈದ್ರಾಬಾದ್ ಹೆದ್ದಾರಿ ಹಾಗೂ ತಹಶೀಲ್ದಾರ್ ಕಚೇರಿಯಿಂದ ಸಾಮ್ರಾಟ್ ಲಾಡ್ಜ್ ರಸ್ತೆಯಲ್ಲಿ ಅಳವಡಿಸಿರುವ ಹೈಮಾಸ್ಟ್ ಹಾಗೂ ಮಕ್ರ್ಯೂರಿ ವಿದ್ಯುತ್ ದೀಪಗಳು ಕೆಟ್ಟವೆ. ಇದರಿಂದಾಗಿ ರಾತ್ರಿ ವೇಳೆ ಪಟಣr ದೀಪದ ಬೆಳಕಿಲ್ಲದೇ ಕಗ್ಗತ್ತಲಲ್ಲಿ ಮುಳುಗುತ್ತಿದೆ.
ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಅಳವಡಿಸಿ ಪಟ್ಟಣಕ್ಕೆ ಹೂಸ ಮೆರಗನ್ನು ನೀಡುತ್ತದೆ ಎಂದು ಜನರು ಸಹ ಖುಷಿಯಲ್ಲಿದ್ದರು. ಕೇವಲ ತೋರಿಕೆಗೆ ಎಂಬತೆ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿ ದೀಪಗಳ ಸೂಕ್ತ ನಿರ್ವಹಣೆ ಇಲ್ಲದೇ ಕೆಟ್ಟು ನಿಂತಿವೆ.
ಪಟ್ಟಣದ ಪ್ರವಾಸಿ ಮಂದಿರ ಎದುರಿನ ರಸ್ತೆ ಮಧ್ಯೆ ಕಂಬದಲ್ಲಿ ಸಪ್ಪಳ ಬರುತ್ತಿದ್ದು, ಕೆಲವು ದಿನಗಳ ಹಿಂದೆ ಕಂಬಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಕೆಲವು ಕಂಬಗಳ ದೀಪಗಳು ಬಲ್ಬ ಇಲ್ಲದೆ ಹಾಳಾಗಿವೆ. ಕೆಲವು ರಸ್ತೆ ಅಪಘಾತಗಳಿಂದ ಹಾಳಾಗಿವೆ. ಇನ್ನೂ ಕೆಲವು ಕಂಬಗಳಿಗೆ ವಿದ್ಯುತ್ ಟರ್ಮಿನಲ್ ಪೆಟ್ಟಿಗೆ ಇಲ್ಲದೆ ಹಾಳಾಗುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ.
ಪಟ್ಟಣವು ಈಗ ತಾಲೂಕು ಕೇಂದ್ರವಾಗಿ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಸೂಕ್ತ ಸೌಕರ್ಯ ಒದಗಿಸಲು ಪುರಸಭೆ ಕಾರ್ಯ ನಿರ್ವಹಿಸಬೇಕಿದೆ. ಲಕ್ಷಾಂತರ ರೂ.ಗಳ ವೆಚ್ಚದ ಈ ದೀಪಗಳು ರಾತ್ರಿ ಹೊತ್ತು ಬೆಳಕು ನೀಡುವ ಮೂಲಕ ಪಟ್ಟಣದ ಸೌಂದರ್ಯ ಹೆಚ್ಚಿಸಿ ಸಾರ್ವಜನಿಕರಿಗೆ ಉಪಯೋಗವಾಗಲಿ ಎಂಬುವುದೇ ಸ್ಥಳೀಯರ ಆಶಯವಾಗಿದೆ.
ನಾನು ನಮ್ಮ ಕುಟುಂಬ ಹೈದ್ರಾಬಾದಗೆ ಹೋಗಬೇಕು ಅಂತ ಗುರುಮಠಕಲ್ಗೆ ಬಂದಿದ್ದೇನೆ. ಬಸ್ ತಪ್ಪಿದ ತಕ್ಷಣ ಯಾದಗಿರಿ- ಹೈದ್ರಾಬಾದ್ ರಸ್ತೆಗೆ ಬಂದಿದ್ದೇನೆ. ಅಲ್ಲಿ ದೀಪಗಳು ಬೆಳಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಮಾಡಬೇಕು.
•ಮಹದೇವಪ್ಪ ಬುರುಜು, ಪ್ರಯಾಣಿಕ
ಈಗಾಗಲೇ ನಮ್ಮ ಗಮನಕ್ಕೆ ಬಂದಿದೆ. ಶೀಘ್ರದಲ್ಲಿ ವಿದ್ಯುತ್ ದೀಪಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
•ತಿಮ್ಮಣ್ಣ ಜಗಳಿ,
ಪುರಸಭೆ ಮುಖ್ಯಾಧಿಕಾರಿ ಗುರುಮಠಕಲ್
ಚನ್ನಕೇಶವುಲು ಗೌಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.