ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ
ಚಿಲುಗೋಡು ಗ್ರಾಮದಲ್ಲಿ ನೀರವ ಮೌನ-ಅಂತಿಮ ನಮನ
Team Udayavani, Nov 25, 2019, 4:19 PM IST
ಹಗರಿಬೊಮ್ಮನಹಳ್ಳಿ: ತಾಲೂಕಿನ ಚಿಲುಗೋಡು ಗ್ರಾಮದ ಯೋಧ ಮೌನೇಶ್ ಬಡಿಗೇರ್ ನಿಧನದ ಹಿನ್ನಲೆಯಲ್ಲಿ ಪಟ್ಟಣದ ಆಸ್ಪತ್ರೆಯಿಂದ ಬಸವೇಶ್ವರ ಬಜಾರಿನಲ್ಲಿ ವಿವಿಧ ಗ್ರಾಮಗಳ ಯುವಕರು ವಿಜೃಂಭಣೆಯ ಮೆರವಣಿಗೆ ಮೂಲಕ ಯೋಧನಿಗೆ ಗೌರವ ಸಲ್ಲಿಸಿದರು.
ಮೆರವಣಿಗೆಗೂ ಮುನ್ನ ಮೌನೇಶ್ ಪಾರ್ಥಿವ ಶರೀರಕ್ಕೆ ಶ್ರೀನಗರದ ಭೂಸೇನೆಯ ಲೆಪ್ಟಿನೆಂಟ್ ಕರ್ನಲ್ ಮನೀಶ್ ರಾಷ್ಟ್ರ ಧ್ವಜ ಹೊದಿಸಿ ಅಂತಿಮ ನಮನ ಸಲ್ಲಿಸಿದರು. ಸುಬೇದಾರ ನಾಗರಾಜ, ನವೀನ್, ಕರಿಬಸವರಾಜ, ಪ್ರತಾಪ್ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. ಚಿಲುಗೋಡು ಗ್ರಾಮಸ್ಥರು ಭಜನೆ ಮೂಲಕ ಯೋಧನಿಗೆ ಗೌರವ ಸಲ್ಲಿಸಿದರು.
ಯುವಕರು ದಾರಿಯುದ್ದಕ್ಕೂ ಬೈಕ್‌ರ್ಯಾಲಿ ಮೂಲಕ ಘೋಷಣೆಗಳನ್ನು ಕೂಗಿದರು. ಮೌನೇಶ್ ಬಡಿಗೇರ್ ಸಾವಿನಿಂದಾಗಿ ಚಿಲುಗೋಡು ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಗ್ರಾಮದ ಯುವಕರು, ಮಕ್ಕಳು ದೇಶದ ಪರ ವಿವಿಧ ಘೋಷಣೆಗಳನ್ನು ಕೂಗುತ್ತ ಗೌರವ ಸಮರ್ಪಿಸಿದರು.
ಮೌನೇಶ್ ಕುಟುಂಬದವರು ಬಿಕ್ಕಿಬಿಕ್ಕಿ ಅಳುತ್ತಿರುವುದು ಮನಕಲಕುವಂತಿತ್ತು.
ಅಂತ್ಯಕ್ರಿಯೆಯಲ್ಲಿ ಚಿಲುಗೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ಚಿಲುಗೋಡು ಗ್ರಾಮಸ್ಥರು ಮಳಿಗೆಗಳ ಮೇಲೆ ಕುಳಿತು ಮೌನೇಶ್ ಶವದ ಮೆರವಣಿಯನ್ನು ಕುತೂಹಲದಿಂದ ದುಃಖತಪ್ತರಾಗಿ ವೀಕ್ಷಿಸಿದರು. ಜಿಲ್ಲಾ ಪೊಲೀಸ್ ಮೀಸಲು ಪಡೆ 3 ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ತಹಶೀಲ್ದಾರ್ ಆಶಪ್ಪ ಪೂಜಾರ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮೌನೇಶ್ ಅಗಲಿಕೆ ತುಂಬಲಾರದ ನಷ್ಟವಾಗಿದೆ. ಮೌನೇಶ್ ಕುಟುಂಬಕ್ಕೆ ದು:ಖವನ್ನು ಭರಿಸುವ ಶಕ್ತಿ ದೇವರು ನೀಡಲಿ. ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪುವಂತೆ ಕ್ರಮವಹಿಸಲಾಗುವುದು ಎಂದರು.
ಅಂತ್ಯಕ್ರಿಯೆಯಲ್ಲಿ ನಂದಿಪುರದ ಮಹೇಶ್ವರ ಸ್ವಾಮೀಜಿ, ಡಾ| ಬಂಡ್ರಿ ವಿಶ್ವನಾಥ, ನಿವೃತ್ತ ಯೋಧರಾದ ರಾಮರೆಡ್ಡಿ, ವೈ. ಕೊಟ್ರೇಶ, ಕೊಟ್ರಾಗೌಡ, ಬೋಗೇಶ್ವರಯ್ಯ, ಶಾಸಕರ ಆಪ್ತಸಹಾಯಕ ಗೆದ್ದಲಗಟ್ಟಿ ಸೋಮು, ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ, ವಕೀಲ ಕೋರಿ ಗೋಣಿಬಸಪ್ಪ, ನಂದಿಬಂಡಿ ರಾಮಣ್ಣ, ಬಡಿಗೇರ್ ಪ್ರಕಾಶ್, ಆನೇಕಲ್ ಸಂತೋಷ, ಮೈಲಾರ ಶಂಕ್ರಗೌಡ್ರು, ಮೋರಿಗೇರಿ ವೀರಣ್ಣ, ಮದುಸೂಧನ, ರಾಜು, ಉಗ್ಗಣ್ಣನವರ ಬಸವರಾಜ, ರೆಡ್ಡಿ ಮಂಜುನಾಥ ಪಾಟೀಲ್, ಸತೀಶ್, ಜೆಸ್ಕಾಂನ ಕರಿಬಸವರಾಜ, ಶರಣಪ್ಪ, ಯಮನೂರು, ಗೆಳೆಯರು ಅಂತಿಮ ನಮನ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.