ಸಂತ್ರಸ್ತರಿಗೆ 1.40 ಲಕ್ಷ ರೊಟ್ಟಿ ರವಾನೆ
•20 ಟನ್ ಅಕ್ಕಿ, ವೈಯಕ್ತಿಕವಾಗಿ 1 ಸಾವಿರ ಸೀರೆ, ದಿನಬಳಕೆ ಸಾಮಗ್ರಿ ದಾನ: ರೆಡ್ಡಿ
Team Udayavani, Aug 17, 2019, 11:19 AM IST
ಹರಪನಹಳ್ಳಿ: ನೆರೆ ಸಂತ್ರಸ್ತರಿಗೆ ನೆರವಾಗಲು ಶಾಸಕ ಜಿ.ಕರುಣಾಕರರೆಡ್ಡಿ ನೇತೃತ್ವದಲ್ಲಿ ಅಕ್ಕಿ, ರೊಟ್ಟಿ ಸೇರಿದಂತೆ ಅಗತ್ಯ ವಸ್ತುಗಳನ್ನು ರವಾನಿಸಲಾಯಿತು.
ಹರಪನಹಳ್ಳಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ರಾಜ್ಯದಲ್ಲಿ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ಸಾಗುತ್ತಿದೆ. ಬಿಜೆಪಿ ಕಾರ್ಯಕರ್ತರು ಮತ್ತು ನಾನು ಕೂಡ ನನ್ನ ಕೈಲಾದಷ್ಟು ನೆರೆ ಸಂತ್ರಸ್ತರಿಗೆ ನೆರವಾಗಲು ಕೇವಲ ನಾಲ್ಕೈದು ದಿನಗಳಲ್ಲಿ ಜೋಳದ ರೊಟ್ಟಿ, ಅಕ್ಕಿ ಇತರೆ ಪದಾರ್ಥಗಳನ್ನು ಕ್ರೋಢೀಕರಿಸಿ ನೆರೆ ಸಂತ್ರಸ್ತರ ನೆರೆವಿಗೆ ಕೈ ಜೋಡಿಸಲಾಗಿದೆ ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ರಾಜ್ಯದ ಪ್ರವಾಹ ಪರಿಸ್ಥಿತಿಯಲ್ಲಿರುವ ಜಿಲ್ಲೆಗಳಿಗೆ ವಾಹನಗಳಲ್ಲಿ ನೆರೆ ಸಂತ್ರಸ್ತರ ಸಹಾಯ ಮಾಡಲು ಆಹಾರ ಪದಾರ್ಥಗಳು ಹಾಗೂ ಇತರ ಸಾಮಗ್ರಿಗಳನ್ನು ರವಾನಿಸುತ್ತಿರುವ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದ ಕೊಡಗು ಮತ್ತು ಬಾಗಲಕೋಟೆ ಜಿಲ್ಲೆಯ ಪ್ರವಾಹದಲ್ಲಿ ಸಿಲುಕಿಕೊಂಡು ನರಳುತ್ತಿರುವ ಸಂತ್ರಸ್ತರಿಗೆ ತಾಲೂಕಿನಿಂದ 20 ಟನ್ ಅಕ್ಕಿ, 1.40 ಲಕ್ಷ ಜೋಳದ ರೊಟ್ಟಿ ಮತ್ತು ವೈಯಕ್ತಿಕವಾಗಿ 1 ಸಾವಿರ ಸೀರೆ, ಚಾಪೆ, ಕೊಬ್ಬರಿ ಎಣ್ಣೆ, ಬಟ್ಟೆ ಸೇರಿದಂತೆ ದಿನ ಬಳಕೆ ಸಾಮಗ್ರಿಗಳನ್ನು ನೆರೆ ಸಂತ್ರಸ್ತರಿಗೆ ರವಾನಿಸುತ್ತಿದ್ದೇವೆ ಎಂದು ತಿಳಿಸಿದರು.
ತಾಲೂಕಿನ ಬಹುತೇಕ ಹಳ್ಳಿಗಳಿಂದ ಜನರು ರೊಟ್ಟಿ ತಂದು ಕೊಟ್ಟಿದ್ದಾರೆ. ದೂರದಲ್ಲಿ ಜನರು ನೆರೆ ಹಾವಳಿಗೆ ಸಿಲುಕಿರುವುದಕ್ಕೆ ತಾಲೂಕಿನ ಜನರ ಮನಮಿಡಿದಿರುವುದು ನಿಜಕ್ಕೂ ಮಾನವೀಯತೆ ಇದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ಪ್ರತಿಯೊಬ್ಬರೂ ದುಡಿಮೆ ಮಾಡುತ್ತಾರೆ, ಆದರೆ ದುಡಿಮೆಯ ಒಂದು ಭಾಗವನ್ನು ದಾನ ಮಾಡಬೇಕು. ಆ ಮೂಲಕ ನೊಂದವರಿಗೆ ನೆರವಾಗಬೇಕು. ಕೊಡುವ ಕೈಎಂದಿಗೂ ಆಕಾಶ ನೋಡಲಾರದು. ಪ್ರತಿಯೊಬ್ಬರೂ ದಾನ ಮಾಡುವ ಗುಣ ಬೆಳಸಿಕೊಳ್ಳಬೇಕು ಎಂದರು.
ರಾಜ್ಯದಲ್ಲಿ ಸಚಿವ ಸಂಪುಟ ಇಲ್ಲದಿದ್ದರೂ ನೆರೆ ಹಾವಳಿಗೆ ತುತ್ತಾದ ಜನರ ಸಮಸ್ಯೆ ಆಲಿಸಿ ಪರಿಹಾರ ದೊರಕಿಸಿ ಕೊಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ. ನಾನು ಸೇರಿದಂತೆ ಬಿಜೆಪಿ ಶಾಸಕರು ತಂಡೋಪ ತಂಡವಾಗಿ ನೆರೆ ಹಾವಳಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿಯ ಜನರಿಗೆ ತಕ್ಷಣಕ್ಕೆ ಬೇಕಾಗುವಂಥ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡಿದ್ದೇವೆ. ಪ್ರಕೃತಿ ಅಸಮತೋಲನದಿಂದ ಇಂಥ ಅವಾಂತರಗಳು ಸೃಷ್ಟಿಯಾಗುತ್ತಿದ್ದು, ಪ್ರಕೃತಿಯನ್ನು ಉಳಿಸಿ ಬೆಳಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಘಟಕ ಅಧ್ಯಕ್ಷ ಸತ್ತೂರು ಹಾಲೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಪಿ. ನಾಯ್ಕ, ಎಸ್ಟಿ ಘಟಕದ ಅಧ್ಯಕ್ಷ ಆರ್. ಲೋಕೇಶ್, ಉಪಾಧ್ಯಕ್ಷ ಸಣ್ಣ ಹಾಲಪ್ಪ, ತಾಪಂ ಉಪಾಧ್ಯಕ್ಷ ಎಲ್.ಮಂಜ್ಯಾನಾಯ್ಕ, ಬಾಗಳಿ ಕೋಟ್ರಪ್ಪ, ರಾಘವೇಂದ್ರಶೆಟ್ಟಿ, ಕರೇಗೌಡ, ಪಂಪನಾಯ್ಕ, ಸಿ.ಸಿ.ರಾಮಚಂದ್ರನಾಯ್ಕ, ಅಂಜಿನಪ್ಪ, ಪೂಜಾರ್ ಮಹೇಶ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು
Ullala: ದೇರಳಕಟ್ಟೆ: ರಸ್ತೆಯನ್ನು ಅತಿಕ್ರಮಿಸಿದ್ದ ಕಟ್ಟಡಗಳ ತೆರವು
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
MUST WATCH
ಹೊಸ ಸೇರ್ಪಡೆ
Kasragodu: ನರ್ಸಿಂಗ್ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್ ತನಿಖೆ
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
ನಮ್ಮಲ್ಲಿಗೆ ಬಂದರೆ ಇಸ್ರೇಲ್ ಪ್ರಧಾನಿ ಬಂಧನ: ಬ್ರಿಟನ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.