ಬೇಡಿಕೆ ಈಡೇರದಿದ್ದರೆ ಮೌಲ್ಯಮಾಪನ ಬಹಿಷ್ಕಾರ
ಉನ್ನತ ಅಧಿಕಾರಿಗಳು ಸಮಸ್ಯೆ ಬಗೆಹರಿಸದೇ ದಾರಿ ತಪ್ಪಿಸುತ್ತಿದ್ದಾರೆ: ತಿಮ್ಮಯ್ಯ ಪುರ್ಲೆ
Team Udayavani, Dec 9, 2019, 5:00 PM IST
ಹರಪನಹಳ್ಳಿ: ಮುಂದಿನ ದಿನಗಳಲ್ಲಿ ಉಪನ್ಯಾಸಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪನ ಬಹಿಷ್ಕಾರಕ್ಕೆ ಉಪನ್ಯಾಸಕರು ಸಿದ್ಧರಾಗಿರಬೇಕೆಂದು ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ತಾಲೂಕು ಘಟಕದ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್ಚಿನ ಸಂಬಳಕ್ಕಾಗಿ ಬೇಡಿಕೆಯನ್ನಿಟ್ಟರೆ ಅದನ್ನು ಈಡೇರಿಸದೆ ಮುಖ್ಯಮಂತ್ರಿಗಳು ಉಪನ್ಯಾಸಕರನ್ನು ವೈರಿಗಳಂತೆ ಕಾಣುತ್ತಿದ್ದಾರೆ. ಅಲ್ಲದೇ ಉನ್ನತ ಅಧಿ ಕಾರಿಗಳು ಸರಿಯಾದ ರೀತಿಯಲ್ಲಿ ಮಾಹಿತಿ ನೀಡದೆ ದಾರಿ ತಪ್ಪಿಸುತ್ತಿದ್ದಾರೆ. ಪರೀಕ್ಷೆಯ ಎಲ್ಲ ಕರ್ತವ್ಯ ನಿಭಾಯಿಸಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುತ್ತಿರುವ ನಮ್ಮ ಬೇಡಿಕೆಗಳು ಈಡೇರುವವರೆಗೂ ಮೌಲ್ಯ ಮಾಪನವನ್ನು ಬಹಿಸ್ಕರಿಸಬೇಕು. 24 ಬೇಡಿಕೆಗಳಲ್ಲಿ ಪ್ರಮುಖ ಬೇಡಿಕೆಗಳನ್ನಾದರೂ ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ರಾಜ್ಯದಲ್ಲಿ ಶಿಕ್ಷಣ ಇಲಾಖೆ ಅಧೋಗತಿಯಲ್ಲಿವೆ. ಮೇಲಾಧಿಕಾರಿಗಳ ಪ್ರತಿಷ್ಠೆಯಲ್ಲಿ ಮಕ್ಕಳು ಬಲಿಯಾಗುತ್ತಿದ್ದಾರೆ. ಅವರ ಧೋರಣೆ ಇದೇ ರೀತಿ ಮುಂದುವರೆ ಮಕ್ಕಳು ಶಾಪ ತಟ್ಟಲಿದೆ ಎಂದ ಅವರು ರಾಜ್ಯದಲ್ಲಿ 3900 ಉಪನ್ಯಾಸಕರ ಹುದ್ದೆಗಳು ಖಾಲಿಯಿದ್ದರೂ ಸಹ ಭರ್ತಿ ಮಾಡದೆ ಸೆಪ್ಟೆಂಬರ್ ತಿಂಗಳಿನಲ್ಲಿ ಅತಿಥಿ ಉಪನ್ಯಾಸಕರನ್ನು ತೆಗೆದುಕೊಂಡು ತರಗತಿಗಳನ್ನು ನಡೆಸಲು ಸೂಚಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಉಪನ್ಯಾಸ ನೀಡಿದ ವಿಜ್ಞಾನ ಲೇಖಕ ಎಂ.ಆರ್ .ನಾಗರಾಜ್ ಅವರು, ಇಂದು ಪೋಷಕರು 15 ಸಾವಿರರೂ. ಮೊಬೈಲ್ ಕೊಡಿಸುತ್ತಾರೆ. ಆದರೆ 50 ರೂಪಾಯಿಯ ಪುಸ್ತಕ ಕೊಡಿಸುವುದಿಲ್ಲ. ವಂಡರ್ ಫುಲ್ ಮತ್ತು ಲರ್ನ್ ಶಬ್ಧದ ಅರ್ಥ ವಿವರಣೆಯನ್ನು ಶಿಕ್ಷಣಕ್ಕೆ ಸಂಬಂಧಿಸಿದಂತೆ ಆರ್ಥವಾಗಿ ವಿವರಿಸಿದ ಅವರು ಮಗುವಿಗೆ ಅರ್ಥವಾಗದ ಪಾಠ ಕ್ಯಾನ್ಸ್‌ರ್ ಇದ್ದಂತೆ, ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬಬೇಕು ಎಂದರು.
ಬಳ್ಳಾರಿ ಪ.ಪೂ. ಕಾಲೇಜು ಉಪನಿರ್ದೇಶಕ ಬಿ.ಆರ್.ನಾಗರಾಜಪ್ಪ ಮಾತನಾಡಿ, ಪಾಠಗಳಲ್ಲಿ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ಉಪನ್ಯಾಸಕರಿಗೆ ತಿಳಿಸಿದ ಅವರು ಹರಪನಹಳ್ಳಿ ಫಲಿತಾಂಶ ಉತ್ತಮವಾಗಿದೆ ಎಂದರು. ನಿವೃತ್ತ ಉಪ ನಿರ್ದೇಶಕ ಶೇಖರಪ್ಪ ಮಾತನಾಡಿ, ಕಷ್ಟಪಟ್ಟು ಕೆಲಸ ಮಾಡಿ ನಾವು ಶಿಸ್ತುಬದ್ಧ ವ್ಯಕ್ತಿಗಳಾಗಬೇಕು ಎಂದರು.
ಬಳ್ಳಾರಿ ಜಿಲ್ಲಾಧ್ಯಕ್ಷ ಡಾ| ರಾಜಣ್ಣ ಎಂ.ಡಾ. ಭೀಮಪ್ಪ ಮಾತನಾಡಿದರು. ತಾಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್. ಮಲ್ಲಿಕಾರ್ಜುನಪ್ಪ ಅಧ್ಯಕ್ಷತೆವಹಿಸಿದ್ದರು. ನಿವೃತ್ತ ಉಪನ್ಯಾಸಕರಾದ ಆರ್. ಚನ್ನಬಸವನಗೌಡ, ರವೀಂದ್ರಯ್ಯ, ಯಶೋಧಬಾಯಿ ಜೆ. ಗಂಗಾಧರ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ತಾಲೂಕಿನಲ್ಲಿ ಮತ್ತು ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಪ್ರಾಚಾರ್ಯರಾದ ಎಲ್.ಕೃಷ್ಣಾಸಿಂಗ್, ಟಿ. ಹಾಲೇಶ್, ಶ್ರೀಕಂಠಮೂರ್ತಿ, ಕೆ.ನೀಲಮ್ಮ, ಎ.ಆರ್.ಛಾಯಾಕುಮಾರಿ, ಆರ್.ಶಿವಾನಂದ, ಕುಡುಪಲಿ, ಆರ್.ಎಚ್. ಕಲ್ಯಾಣದವರ್, ಚೌಡಪ್ಪ. ಕೆ.ಚನ್ನಬಸಪ್ಪ.ಜಿ, ಎಚ್.ಸಿದ್ದೇಶ್ವರ, ಎ.ವಿ. ಅರುಣಕುಮಾರ್, ಎ.ಆರ್. ಮಂಜಪ್ಪ, ಎಂ.ಆರ್.ಪ್ರಸನ್ನಕುಮಾರ್, ದೇಸ್ಕರ್, ಬಿ. ಕೃಷ್ಣಾಮೂರ್ತಿ, ಎಚ್.ಮಲ್ಲಿಕಾರ್ಜುನ, ಎಚ್. ಎಂ. ಶಿವಪ್ರಕಾಶ್, ಎಂ.ವಿ.ವೀರಯ್ಯ, ಬಿ.ಚನ್ನಬಸಪ್ಪ, ಡಿ.ಮಂಜಪ್ಪ, ಸಾಗರ್, ಬಸವರಾಜ, ಶೇಖರಪ್ಪ, ವೆಂಕಟೇಶ್ ಎಂ.ಪ್ರಸನ್ನ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್ ಡೇಂಜರ್ ಸ್ಪಾಟ್
Brijesh Chowta: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ
Udupi: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ: 3.25 ಲಕ್ಷ ಮೌಲ್ಯದ MDMA, ಚರಸ್ ವಶ
Bellary; ಪ್ರಿಯಾಂಕ್ ಖರ್ಗೆ ರಾಜೀನಾಮೆ ಖಂಡಿಸಿ ಬಿಜೆಪಿ ಪ್ರತಿಭಟನೆ
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ
Thane; ಕ್ರಿಮಿನಲ್ ಕೇಸ್ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ
Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್ ಡೇಂಜರ್ ಸ್ಪಾಟ್
Brijesh Chowta: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್ ಚೌಟ
Royal Movie; ಜ.24ರಿಂದ ʼರಾಯಲ್ʼ; ಟ್ರೇಲರ್ ರಿಲೀಸ್‌ಗೆ ತಂಡ ರೆಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.