ವಕೀಲರು ಸಂವಿಧಾನ ಕಾಯುವ ರಕ್ಷಕರು
ಸಮಾಜದ ಏಳಿಗೆಗಾಗಿ ಶ್ರಮಿಸುವವರಲ್ಲಿ ವಕೀಲರ ಪಾತ್ರ ದೊಡ್ಡದು: ಪಾಟೀಲ್
Team Udayavani, Dec 4, 2019, 6:10 PM IST
ಹರಪನಹಳ್ಳಿ; ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ಪ್ರಮಖವಾಗಿದ್ದು, ಬಹಳಷ್ಟು ಮಂದಿ ಸಾಮಾಜಿಕ ಕಳಕಳಿ ಹೊಂದಿದ್ದರು ಎಂದು ವಕೀಲ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ವಕೀಲರ ಸಂಘದಿಂದ ಏರ್ಪಡಿಸಲಾಗಿದ್ದ ವಕೀಲರ ದಿನಾಚರಣೆ ಅಂಗವಾಗಿ ಮಾತನಾಡಿದ ಅವರು, ಸಮಾಜದ ಏಳಿಗೆಗಾಗಿ ಶ್ರಮಿಸುವವರಲ್ಲಿ ವಕೀಲರ ಪಾತ್ರ ದೊಡ್ಡದಿದೆ. ಎಲ್ಲ ರೀತಿಯ ವಿಷಯಗಳನ್ನು ವಕೀಲ ವೃತ್ತಿಯಲ್ಲಿ ಮಾತ್ರ ತಿಳಿದುಕೊಳ್ಳುವದಕ್ಕೆ ಸಾಧ್ಯವಾಗುತ್ತೆ ಎಂದರು.
ಹಿರಿಯ ವಕೀಲ ಆರುಂಡಿ ನಾಗರಾಜ್ ಮಾತನಾಡಿ, ಮಾಜಿ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಅವರ ನೆನಪಿನಲ್ಲಿ ಆಚರಿಸುವ ವಕೀಲರ ದಿನಾಚರಣೆ ತನ್ನದೇಯಾದ ಮಹತ್ವ ಹೊಂದಿದೆ. ವಕೀಲರು ಸಮಾಜದ ಶಕ್ತಿಯಾಗಿದ್ದಾರೆ ಎಂದರು.
ಅಪರ ಸರ್ಕಾರಿ ವಕೀಲ ಕಣವಿಹಳ್ಳಿ ಮಂಜುನಾಥ್ ಮಾತನಾಡಿ, ವಕೀಲರುಗಳಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಉತ್ಸುಕತನ ಇರಬೇಕು. ವಕೀಲರು ಸಂವಿಧಾನವನ್ನು ಕಾಯುವ ರಕ್ಷಕರು ಎಂದು ಹೇಳಿದರು. ವಕೀಲ ಸಂಘದ ಕಾರ್ಯದರ್ಶಿ ವೇದಮೂರ್ತಿ, ವಕೀಲರಾದ ಗೋಣಿಬಸಪ್ಪ, ಟಿ.ವೆಂಕಟೇಶ್, ಚಂದ್ರಮುಳಿ, ಸಿ.ರಾಮಭಟ್, ಪ್ರಕಾಶ್, ಚಂದ್ರೇಗೌಡ, ಮƒತಂಜಯ್ಯ, ಜಾಕೀರ್, ರೇವಣಸಿದ್ದಪ್ಪ, ಪ್ರಸಾದ್ ದೊಡ್ಡಮನಿ, ಬಿ.ತಿರುಪತಿ, ಸಿದ್ದೇಶ್, ಮಂಜುನಾಥ್, ಪ್ರಸಾದನಾಯ್ಕ, ವಾಮದೇವ್, ಎಸ್.ಜಿ.ತಿಪ್ಪೇಸ್ವಾಮಿ, ಮಂಜ್ಯಾನಾಯ್ಕ, ಕೆ.ಎಂ. ರವಿಶಂಕರ್, ವೈ.ಟಿ.ಕೊಟ್ರೇಶ್, ಬಿ.ಹಾಲೇಶ್, ಸಿ.ಹಾಲೇಶ್, ಪ್ರವೀಣ್, ಸಿದ್ದೇಶ್, ಹನುಮಂತಪ್ಪ, ಗುಡದಯ್ಯ, ತಿಪ್ಪೇಶ್, ಜಿ.ಹಾಲೇಶ್, ವೈ. ಬಸವರಾಜ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.