ಹಸಿರೀಕರಣಕ್ಕಾಗಿ ಸೀಡ್‌ಬಾಲ್ ಅಭಿಯಾನ
ಮಕ್ಕಳಿಗೆ ಅಭ್ಯಾಸದ ಜೊತೆಗೆ ಪರಿಸರ ಕಾಳಜಿ ಪಾಠ • 5 ಸಾವಿರ ಬೀಜದ ಉಂಡೆ ತಯಾರಿ
Team Udayavani, Jun 20, 2019, 11:37 AM IST
ಹರಪನಹಳ್ಳಿ: ಸ್ವಾಮೀಜಿ ಮತ್ತು ಅರಣ್ಯ ಅಧಿಕಾರಿಗಳ ಚರ್ಚೆ.
ಎಸ್.ಎನ್.ಕುಮಾರ್ ಪುಣಬಗಟ್ಟಿ
ಹರಪನಹಳ್ಳಿ: ತಾಲೂಕಿನಲ್ಲಿ ಸತತ ಬರಗಾಲ ಆವರಿಸಿದ ಪರಿಣಾಮ ಮಳೆ ಇಲ್ಲದೇ ಜನರು ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ. ಅಂತರ್ಜಲ ಕುಸಿತ ಕಂಡಿರುವುದರಿಂದ ಜನರು ನೀರಿಗಾಗಿ ಪರಿತಪ್ಪಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ದೂರವಾಗಲು ವಿದ್ಯಾರ್ಥಿಗಳು ಗಿಡಗಳನ್ನು ಬೆಳೆಸಲು ಅಲೋಚಿಸಿ ಬೀಜದ ಉಂಡೆ ತಯಾರಿಸಿ ಮಳೆಗಾಗಿ ಕಾಯುತ್ತಿದ್ದಾರೆ.
ಸ್ಥಳೀಯ ತೆಗ್ಗಿನಮಠ ಸಂಸ್ಥಾನದ ಶಿಕ್ಷಣ ಸಂಸ್ಥೆಗಳಾದ ಪಟ್ಟಣದ ಭಂಗಿ ಬಸಪ್ಪ ವಿಜ್ಞಾನ ಪಿಯು ಕಾಲೇಜ್, ಎಸ್‌ಸಿಎಸ್ ಫಾರ್ಮಸಿ ಎನ್‌ಎಸ್‌ಎಸ್ ಘಟಕದ ವತಿಯಿಂದ ಅರಣ್ಯ ಇಲಾಖೆ ಸಹಯೋಗದಲ್ಲಿ ವಿದ್ಯಾರ್ಥಿಗಳು ಸೀಡ್‌ಬಾಲ್ ವನಮಹೋತ್ಸವಕ್ಕೆ ಸಜ್ಜಾಗಿದ್ದಾರೆ. ಇದು ಗಿಡ ಬೆಳೆಸುವ ವಿನೂತನ ಅಭಿಯಾನಯಾಗಿದ್ದು, ಮಳೆ ಸುರಿಯುವ ವೇಳೆ ಖಾಲಿ ಜಾಗ, ಅರಣ್ಯದಲ್ಲಿ ಬಿತ್ತಲಾಗುತ್ತದೆ. ಸಸಿಗಳ ಪೋಷಣೆ, ರಕ್ಷಣೆ ಮಾಡುವ ಜವಾಬ್ದಾರಿ ಅರಣ್ಯ ಇಲಾಖೆ ವಹಿಸಿಕೊಂಡಿದೆ.
ತೆಗ್ಗಿನಮಠ ಸಂಸ್ಥೆಯ 220 ವಿದ್ಯಾರ್ಥಿಗಳು ಕಾಲೇಜ್‌ನ ಅವರಣದಲ್ಲಿ 2 ದಿನದಲ್ಲಿ 5000 ಸಾವಿರ ಬೀಜ ಉಂಡೆ ತಯಾರಿಸಿದ್ದಾರೆ. ವಿವಿಧ ಮಾದರಿಯ ಬೀಜಗಳನ್ನು ಮಣ್ಣು ಮತ್ತು ಗೊಬ್ಬರದ ಮಿಶ್ರಣಕ್ಕೆ ಸೇರಿಸಿ ಅದನ್ನು ಚೆಂಡಿನ ಆಕಾರ ಮಾಡಿ ಒಣಗಿಸಿ ಇಡಲಾಗಿದೆ. ಕೆಂಪು ಮತ್ತು ಕೆರೆ ಮಣ್ಣನ್ನು ಮೂರು ಭಾಗದಷ್ಟು ಮಣ್ಣಿಗೆ ಒಂದು ಭಾಗದಷ್ಟು ಸಗಣಿ ಗೊಬ್ಬರ ಮಿಶ್ರಣ ಮಾಡಿ, ತೇವಾಂಶ ಆಧರಿಸಿ ಉಂಡೆ ತಯಾರಿಸಲು ನೀರು ಉಪಯೋಗಿಸಲಾಗಿದೆ. ಆರೋಗ್ಯಕರ ಬೀಜಗಳನ್ನು ಆಯ್ಕೆ ಮಾಡಿ ಉಂಡೆಯ ಮಧ್ಯಭಾಗದಲ್ಲಿ ಬರುವ ಹಾಗೆ ಬಿಗಿಯಾಗಿ ಚೆಂಡಿನ ಆಕಾರದಲ್ಲಿ ಉಂಡೆ ತಯಾರಿಸಲಾಗಿದೆ.
ಹೊಂಗೆ, ಬೇವು, ಹುಣಸೆ, ಸೀಮರೂಬ, ಕಾಡಿನ ಮರದ ಆರೋಗ್ಯಕರ ಬೀಜಗಳನ್ನು ಸೀಡ್‌ಬಾಲ್ನಲ್ಲಿ ತುಂಬಲಾಗಿದೆ. ಮಣ್ಣು, ಸಗಣಿ ಗೊಬ್ಬರ, ಬೀಜಗಳನ್ನು ಅರಣ್ಯ ಇಲಾಖೆ ಕೊಟ್ಟಿದ್ದಾರೆ. ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ಸಾಲುಮರದ ತಿಮ್ಮಕ್ಕ ಉದ್ಯನವನ(ಉಚ್ಚೆಂಗೆಮ್ಮದೇವಿ ಗುಡ್ಡ), ಗೋಸಾಯಿ ಗುಡ್ಡ, ಶೃಂಗಾರದೋಟ ಗ್ರಾಮದ ಸುತ್ತಮುತ್ತ ಬೀಜಗಳನ್ನು ಹಾಕಲು ನಿರ್ಧರಿಸಲಾಗಿದೆ. ಕಳೆದ 3 ದಿನಗಳಿಂದ ಬೀಜದ ಉಂಡೆಗಳನ್ನು ತಯಾರಿಸಿಕೊಂಡು ಮಳೆಗಾಗಿ ಕಾಯುತ್ತ ಕುಳಿತ್ತಿದ್ದಾರೆ.
ತೆಗ್ಗಿನಮಠ ವರಸದ್ಯೋಜಾತ ಸ್ವಾಮೀಜಿ ಅಶಯದಂತೆ ವಿದ್ಯಾರ್ಥಿಗಳು ಬೀಜದ ಉಂಡೆ ತಯಾರಿಸಿದ್ದಾರೆ. ಶ್ರೀಗಳು ಕಳೆದ ವರ್ಷವೇ ಇದನ್ನು ಮಾಡಬೇಕೆಂದು ತಿಳಿಸಿದ್ದರು. ಆದರೆ ಈ ಭಾರಿ ಗುರುಗಳ ಆಸೆಯನ್ನು ಮಕ್ಕಳನ್ನು ಈಡೇರಿಸಿದ್ದಾರೆ. ನಮ್ಮ ವಿಜ್ಞಾನ ಕಾಲೇಜ್ ಆಗಿದೆ. ವಿಜ್ಞಾನ ಎಷ್ಟೇ ಮುಂದುವರೆದರೂ ಪರಿಸರ ಎಲ್ಲವೂ ಆಗಿದೆ. ಮಕ್ಕಳಿಗೆ ಪರಿಸರದ ಅರಿವು ಬಂದಲ್ಲಿ ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ. ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ಬೀಜದ ಉಂಡೆಗಳನ್ನು ವಿದ್ಯಾರ್ಥಿಗಳು ತಯಾರಿಸುವುದರಿಂದ ಇತರರಿಗೆ ಮಾದರಿಯಾಗಿ ಇದನ್ನು ನಾಲ್ಕರು ಜನರು ಅನುರಿಸಿದರೆ ಇಂತಹ ಕಾರ್ಯ ಸಾರ್ಥಕವಾಗಲಿದೆ ಎನ್ನುತ್ತಾರೆ ಭಂಗಿ ಬಸಪ್ಪ ವಿಜ್ಞಾನ ಕಾಲೇಜು ಪ್ರಾಚಾರ್ಯ ಎ.ವಿ. ಅರುಣಕುಮಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.