ಉಚ್ಚೆಂಗೆಮ್ಮದೇವಿ ಹುಂಡಿಯಲ್ಲಿ 21 ಲಕ್ಷ ರೂ. ಸಂಗ್ರಹ
ಹರಪನಹಳ್ಳಿಯ ಎಸ್‌ಬಿಎಂ ಬ್ಯಾಂಕ್ ಶಾಖೆಯ ದೇವಸ್ಥಾನ ಖಾತೆಗೆ ಹಣ ಜಮಾವಣೆ
Team Udayavani, May 31, 2019, 11:57 AM IST
ಹರಪನಹಳ್ಳಿ: ಉಚ್ಚೆಂಗೆಮ್ಮದೇವಿ ದೇವಸ್ಥಾನದಲ್ಲಿ ಹುಂಡಿಯ ಎಣಿಕೆ ಕಾರ್ಯ ನಡೆಯಿತು.
ಹರಪನಹಳ್ಳಿ: ಮಧ್ಯ ಕರ್ನಾಟಕದ ಅಸಂಖ್ಯಾತ ಭಕ್ತರಿಂದ ಅರಾಧಿಸಲ್ಪಡುವ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಉಚ್ಚೆಂಗೆಮ್ಮದೇವಿ ದೇವಸ್ಥಾನದಲ್ಲಿ ಗುರುವಾರ ಹುಂಡಿ ಎಣಿಕೆ ಮಾಡಲಾಗಿದ್ದು, 21,49,110 ಲಕ್ಷ ರೂ. ಕಾಣಿಕೆ ಹಣ ಸಂಗ್ರಹವಾಗಿದೆ.
ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಉಚ್ಚೆಂಗೆಮ್ಮದೇವಿ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ಕೇವಲ 68 ದಿನಗಳಲ್ಲಿ 21,49,110 ರೂ. ಸಂಗ್ರಹವಾಗಿದೆ. ಈ ಹಣವನ್ನು ಹರಪನಹಳ್ಳಿಯ ಎಸ್‌ಬಿಎಂ ಬ್ಯಾಂಕ್‌ನ ದೇವಸ್ಥಾನದ ಖಾತೆಗೆ ಜಮಾ ಮಾಡಲಾಯಿತು. ಕಳೆದ 25 ಮಾರ್ಚ್ 2019ರಂದು ಹುಂಡಿ ಎಣಿಕೆ ಮಾಡಲಾಗಿದ್ದ ಸಮಯದಲ್ಲಿ 15,70,509 ಲಕ್ಷ ರೂ. ಸಂಗ್ರಹವಾಗಿತ್ತು ಎಂದು ಉತ್ಸವಾಂಭ ದೇವಸ್ಥಾನ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎಂ. ಶಿವಕುಮಾರಸ್ವಾಮಿ ತಿಳಿಸಿದ್ದಾರೆ.
ಹುಂಡಿ ಎಣಿಕೆ ಕಾರ್ಯವನ್ನು ಉಪವಿಭಾಗಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಪರಿಶೀಲಿಸಿ ನಂತರ ದೇವಿಯ ದರ್ಶನ ಪಡೆದರು. ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎಂ. ಶಿವಕುಮಾರಸ್ವಾಮಿ, ರಾಜಸ್ವನಿರೀಕ್ಷಕ ಶ್ರೀಧರ್, ಮುಜರಾಯಿ ಇಲಾಖೆ ಸಿಬ್ಬಂದಿ ಶಾಂತಮ್ಮ, ಉಪ ತಹಶೀಲ್ದಾರ್ ಪಾತಿಮಾ, ಎಸ್‌ಬಿಎಂ ಬ್ಯಾಂಕ್ ಮ್ಯಾನೇಜರ್ ಹರೀಶ್, ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಕೆ.ಕೆಂಚಪ್ಪ, ಗುಮಾಸ್ತ ರಮೇಶ್, ಸಮಿತಿ ಸದಸ್ಯರಾದ ಕೆ.ಸಿದ್ದೇಶ್ವರಗೌಡ, ಅರ್ಚಕರು ಹಾಗೂ ಸೇವಾದಳ ಮಾಸ್ತರ್ ಚೆನ್ನವೀರಸ್ವಾಮಿ ಇತರರು ಇದ್ದರು.
ಹರಕೆ ಪತ್ರಗಳು ಪತ್ತೆ
ಕಾಣಿಕೆ ಹುಂಡಿಯಲ್ಲಿ ದೇವಿಗೆ ವಿವಿಧ ಭಕ್ತರು ಪತ್ರ ಬರೆದು ಸಮಸ್ಯೆ ನಿವಾರಿಸುವಂತೆ ಬೇಡಿಕೊಂಡಿದ್ದಾರೆ. ಹುಂಡಿ ಎಣಿಕೆ ಸಮಯದಲ್ಲಿ ಪತ್ರಗಳು ಲಭ್ಯವಾಗಿವೆ. ಅಕ್ಕನ ಗಂಡನಿಗೆ ಜ್ವರ ಬಂದಿದ್ದು, ಬೇಗ ಗುಣಮುಖ ಮಾಡಿ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡುವಂತೆ ಮತ್ತು ತಾಯಿಗೆ ಬೇಗ ಹುಷಾರು ಮಾಡುವಂತೆ ಒಂದು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ. ಮತ್ತೂಂದು ಪತ್ರದಲ್ಲಿ ಮನೆ ಬಿಟ್ಟು ಕೊಡುವಂತೆ, ಸಾಲಗಾರರು ಗಂಡನಿಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಡದಂತೆ ಕಾಪಾಡಬೇಕೆಂದು ಬೇಡಿಕೊಂಡಿದ್ದಾರೆ. ನನ್ನ ಮತ್ತು ನನ್ನ ಅಣ್ಣನನ್ನು ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಪಾಸ್ ಮಾಡಬೇಕು, ಓದುವುದಕ್ಕೆ, ಬರಿಯಲಿಕ್ಕೆ ತೊಂದರೆಯಬಾರದು, ಮನೆಯಲ್ಲಿರುವ ಜಗಳ, ತೊಂದರೆ ದೂರವಾಗಲಿ, ಮನೆಯಲ್ಲಿರುವವ ಎಲ್ಲರೂ ಕ್ಷೇಮವಾಗಿರಲಿ, ನನಗೆ ಪೊಲೀಸ್ ಕೆಲಸ ಸಿಗಲಿ. ಎಲ್ಲರನ್ನು ಚೆನ್ನಾಗಿರಲಿ ಎಂದು ಮತ್ತೂಬ್ಬ ಭಕ್ತ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.