ಎಲ್ಲ ಧರ್ಮಗಳ ಸಾರ ಒಂದೇ: ತರಳಬಾಳು ಸ್ವಾಮೀಜಿ

ದೇವಾಲಯ ಕಟ್ಟುವುದು ಮುಖ್ಯವಲ್ಲ, ಅಲ್ಲಿ ನಿತ್ಯ ಪೂಜೆ ನಡೆಯಬೇಕು: ಸಿದ್ದೇಶ್ವರ

Team Udayavani, May 6, 2019, 5:45 PM IST

6–May-34

ಹರಪನಹಳ್ಳಿ; ಕ್ಯಾರಕಟ್ಟೆ ಗ್ರಾಮದಲ್ಲಿ ನಡೆದ ಸರ್ವ ಶರಣ ಸಮ್ಮೇಳನ ಸಮಾರಂಭವನ್ನು ಸಿರಿಗೆರೆ ತರಳಬಾಳು ಬೃಹನ್ಮಠದ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.

ಹರಪನಹಳ್ಳಿ: ಇಂದು ಜಗತ್ತಿನಲ್ಲಿ ದೇವರು, ಮಂದಿರ, ಮಸೀದಿ, ಚರ್ಚ್‌ಗಳು ಸಂಘರ್ಷಕ್ಕೆ ಕಾರಣವಾಗುತ್ತಿರುವುದು ದುರಾದೃಷ್ಟಕರ ಸಂಗತಿ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು.

ತಾಲೂಕಿನ ಕ್ಯಾರಕಟ್ಟೆ ಗ್ರಾಮದಲ್ಲಿ ಬಸವೇಶ್ವರ ದೇವರ ನೂತನ ರಥದ ಕಳಸಾರೋಹಣ ಹಾಗೂ ಸರ್ವ ಶರಣ ಸಮ್ಮೇಳನ ಉದ್ಘಾಟಿಸಿ ಅವರು ಅಶೀರ್ವಚನ ನೀಡಿ ಮಾತನಾಡಿದರು.

ನ್ಯೂಜಿಲ್ಯಾಂಡ್‌ನ‌ಲ್ಲಿ ಮಸೀದಿ ದಾಳಿಯಿಂದ ಶ್ರೀಲಂಕಾದಲ್ಲಿ ಚರ್ಚೆಗಳ ಮೇಲೆ ದಾಳಿ ನಡೆಯುತ್ತಿದೆ. ಜನರ ಆತ್ಮತೃಪ್ತಿ, ಕಲ್ಯಾಣಕ್ಕೆ ನೆರವಾಗಬೇಕಾದವುಗಳು ಬಡಿದಾಡುವಂತೆ ಆಗಿವೆ. ಮಸೀದಿ, ಮಂದಿರ, ಚರ್ಚ್‌ಗಳು ಇಂದು ಶೌಚಾಲಯಕ್ಕಿಂತಲೂ ಕಡೆಯಾಗಿದೆ. ಏಕೆಂದರೆ ಒಂದು ಶೌಚಾಲಯ ಕಟ್ಟಿದ್ದರೆ ಎಲ್ಲರೂ ಹೋಗುತ್ತಾರೆ. ಆದರೆ ಮಂದಿರ ಕಟ್ಟಿದರೆ ಆಯಾ ಧರ್ಮದವರು ಬರುತ್ತಾರೆ. ಎಲ್ಲಾ ಧರ್ಮದ ದೇವರು ಒಬ್ಬನೇ ಎಂಬ ಸರಿಯಾದ ನಂಬಿಕೆ ಇದ್ದಿದ್ದರೆ ಇಂತಹ ಸಂಘರ್ಷಗಳು ಜರುಗುತ್ತಿರಲಿಲ್ಲ ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಅಧುನಿಕ ಯುಗದಲ್ಲಿಯೂ ಭಕ್ತಿಗೆ ಬರವಿಲ್ಲ ಎಂಬುವುದು ಇತ್ತೀಚಿನ ದಿನಗಳಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯಗಳೇ ಸಾಕ್ಷಿಯಾಗಿವೆ. ದೇವಾಲಯಗಳನ್ನು ಕಟ್ಟುವುದಷ್ಟೇ ಮುಖ್ಯವಲ್ಲ, ಅಲ್ಲಿ ನಿತ್ಯ ಪೂಜೆ, ಪುನಸ್ಕಾರ ನಡೆಯುವಂತಾಗಬೇಕು ಎಂದರು.

ಶಾಸಕ ಎಸ್‌.ವಿ.ರಾಮಚಂದ್ರಪ್ಪ ಮಾತನಾಡಿ, ಸಿರಿಗೆರೆ ಶ್ರೀಗಳ ನೇತೃತ್ವದಲ್ಲಿ ಅರಸೀಕೆರೆ ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಕೈ ಹಾಕಿದ್ದೇವೆ. ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ, ಶ್ರೀಗಳ ನೇತೃತ್ವದಲ್ಲಿ ಇನ್ನೂ ಎರಡು ವರ್ಷದೊಳಗೆ ಕೆರೆಗೆ ನೀರು ತುಂಬಿಸುತ್ತೇವೆ. ಜಗಳೂರು ವಿಧಾನಸಭಾ ಕ್ಷೇತ್ರದ ಬರುಡು ನೆಲದಲ್ಲಿ ಶ್ರೀಗಳು ಭಗೀರಥ ಪ್ರಯತ್ನದ ಫಲವಾಗಿ ಗಂಗೆ ಹರಿಯಲಿದ್ದಾಳೆ. ನಾನು ಕೆಲಸ ಮಾಡದೇ ಓಡಿ ಹೋಗುವವನಲ್ಲ, ಕೆಲಸ ಮಾಡಿ ತೋರಿಸುತ್ತೇನೆ ಎಂದರು.

ದೇಗುಲಗಳ ಅಂತರಂಗ ವಿಷಯ ಕುರಿತು ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಎಸ್‌.ಟಿ. ಶಾಂತಗಂಗಾಧರ ಮಾತನಾಡಿ, ದೇವಾಲಯಗಳು ಜನರ ಆಸ್ತಿಕತೆಯ ಪ್ರತೀಕವಾಗಿವೆ. ದೇವರು ಇದ್ದಾನೋ, ಇಲ್ಲವೋ ಯಾರು ನೋಡಿಲ್ಲ, ಆದರೆ ಭಕ್ತರ ನಂಬಿಕೆ ಪ್ರಶ್ನಿಸಲು ಸಾಧ್ಯವಿಲ್ಲ. ದೇವಾಲಯಗಳು ಜನರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿದ್ದು, ಸಾಹಿತ್ಯದ ಪ್ರಕಾರಗಳು ದೇವಾಲಯಗಳಿಂದಲೇ ಹುಟ್ಟಿಕೊಂಡಿವೆ. ದೇವಸ್ಥಾನಗಳಿಗೆ ಹೋಗುವುದರಿಂದ ಉತ್ಸಾಹ, ಉತ್ತಮ ಗುಣ ಬೆಳಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಮಹಾಂತ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಸಾಧು ವೀರಶೈವ ಸಮಾಜದ ಅಧ್ಯಕ್ಷ ಬಂದೋಳ್‌ ಮಂಜುನಾಥ, ಮುಖಂಡರಾದ ಜಿ.ನಂಜನಗೌಡ, ಪಿ.ಮಹಾಬಲೇಶ್ವರಗೌಡ, ಬೆಣ್ಣೆಹಳ್ಳಿ ರೇವಣ್ಣ, ಡಿ.ಸಿದ್ದಪ್ಪ, ಕೆ.ಶಿವಯೋಗಿ, ಬಾಲೇನಹಳ್ಳಿ ಕೆಂಚನಗೌಡ, ಚಟ್ನಿಹಳ್ಳಿ ರಾಜಪ್ಪ, ಒಂಕಾರಗೌಡ, ಕೆ.ಜಿ.ಶರಣಪ್ಪ, ಎನ್‌.ಜಿ. ಮನೋಹರ ಮತ್ತಿತರರು ಇದ್ದರು.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.