ಬಂಟಿಂಗ್ಸ್ ವಿವಾದ: ಎರಡು ಗುಂಪುಗಳ ಮಧ್ಯೆ ವಾಗ್ವಾದ

Team Udayavani, Nov 10, 2019, 11:41 AM IST

10-November-4

ಹರಿಹರ: ಈದ್‌ ಮಿಲಾದ್‌ ಅಂಗವಾಗಿ ನಗರದ ರಾಜಬೀದಿ ಎನ್ನಲಾಗುವ ದೇವಸ್ಥಾನ ರಸ್ತೆಯಲ್ಲಿ ಕೆಲವರು, ರಾತ್ರೋ ರಾತ್ರಿ ಬಂಟಿಂಗ್ಸ್‌ ಕಟ್ಟಿದ್ದು, ವಿವಾದಕ್ಕೆ ಕಾರಣವಾಗಿ ನಗರದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿತ್ತು. ಬಂಟಿಂಗ್ಸ್‌ ತೆರವು ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದು, ಜನರನ್ನು ಚದುರಿಸಿಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಕೊನೆಗೆ ಜನರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಲಾಯಿತು. ಭಾನುವಾರ ನಡೆಯುವ ಈದ್‌ ಮಿಲಾದ್‌ ಹಬ್ಬದಾಚರಣೆಗಾಗಿ ನಗರದ ದೇವಸ್ಥಾನ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ಮುಸ್ಲಿಂ ಸಮುದಾಯದ ಕೆಲ ಯುವಕರು ಬಂಟಿಂಗ್ಸ್ಗಳನ್ನು ಕಟ್ಟಿದ್ದರು. ತೇರಗಡ್ಡಿ ಸರ್ಕಲ್‌ನಿಂದ ಶಿವಮೊಗ್ಗ ವೃತ್ತದವರೆಗೆ ಬಂಟಿಂಗ್ಸ್‌ ಕಟ್ಟಲಾಗಿತ್ತು.

ಇದನ್ನು ಶನಿವಾರ ಬೆಳಗ್ಗೆ ಗಮನಿಸಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ತಕರಾರು ತೆಗೆದರು. ಪ್ರತಿ ವರ್ಷ ಈ ರಸ್ತೆಯ ಎಸ್‌ಎಸ್‌ಕೆ ವೃತ್ತದವರೆಗೆ ಮಾತ್ರ ಬಂಟಿಂಗ್ಸ್‌ ಕಟ್ಟಲಾಗುತ್ತಿತ್ತು. ಈ ವರ್ಷ ಜೈನ ಮಂದಿರ, ವಾಸವಿ ದೇವಸ್ಥಾನ, ರೇಣುಕಾ ಮಂದಿರದ ಮುಂದೆಯೂ ಬಂಟಿಂಗ್ಸ್‌ ಕಟ್ಟಿದ್ದು, ಆಕ್ರೋಶಕ್ಕೆ ಎಡೆಮಾಡಿಕೊಟ್ಟಿತು.

ಈ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಬರಲು ಆರಂಭಿಸಿದರು. ಈ ಬಂಟಿಂಗ್ಸ್‌ಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು. ವಿಷಯ ತಿಳಿದು ಮುಸ್ಲಿಂ ಸಮುದಾಯದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ವಿಷಯ ತಿಳಿದು ಶಾಸಕ ಎಸ್‌.ರಾಮಪ್ಪರು ಸ್ಥಳಕ್ಕೆ ಆಗಮಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಬಂಟಿಂಗ್ಸ್‌ ಕಟ್ಟಲಾಗಿದೆ. ಹಿಂದೂ ಸಮಾಜದ ಹಬ್ಬ, ಹರಿದಿನಗಳಿದ್ದಾಗಲೂ ಈ ರೀತಿ ಬಂಟಿಂಗ್ಸ್‌ ಕಟ್ಟುವುದು ಸಹಜ. ಬಂಟಿಂಗ್ಸ್‌ ತೆಗೆಯುವ ಅಗತ್ಯವಿಲ್ಲ ಎಂದು ಸಮಾಜಾಯಿಷಿ ನೀಡಿ ತೆರಳಿದ್ದಾರೆ.

ಇದರಿಂದ ಸಮಾಧಾನಗೊಳ್ಳದ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಸ್ಥಳದಲ್ಲಿದ್ದ ಪೊಲೀಸರಿಗೆ ಬಂಟಿಂಗ್ಸ್‌ಗಳನ್ನು ನೀವೆ ತೆಗೆಯಿಸಿರಿ, ಇಲ್ಲವಾದರೆ ನಾವು ತೆಗೆಯುತ್ತೇವೆ ಎಂದರು. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಬಿ.ಪಿ.ಹರೀಶ್‌, ದೇವಸ್ಥಾನ ಮುಂದೆ ಬಂಟಿಂಗ್ಸ್‌ ಕಟ್ಟಬಾರದೆಂದು ಶಾಂತಿ ಸಭೆಯಲ್ಲಿ ತಿಳಿ ಹೇಳಿತ್ತೀರಲ್ಲವೆ ಎಂದು ಪೊಲೀಸರಿಗೆ ಪ್ರಶ್ನಿಸಿದಾಗ ಪೊಲೀಸರು, ಹೌದು ಹೇಳಿದ್ದೆವು ಎಂದರು.

ಆಗ ಹರೀಶ್‌ ಹಾಗಾದರೆ ಕಟ್ಟಿರುವುದು ತಪ್ಪಲ್ಲವೆ, ಅದನ್ನು ತೆರವುಗೊಳಿಸಿರಿ ಎಂದು ಪೊಲೀಸರಿಗೆ ಹೇಳಿದರು. ನಂತರ ಬಿಜೆಪಿಯ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ.ವಾಗೀಶ್‌ಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಸ್‌.ಎಂವೀರೇಶ್‌ ಹಾಗೂ ಇತರೆ ಮುಖಂಡರು ಆಗಮಿಸಿ ದೇವಸ್ಥಾನ ಮುಂದಿನ ಬಂಟಿಂಗ್ಸ್‌ ತೆರವುಗೊಳಿಸಲು ಪಟ್ಟು ಹಿಡಿದಾಗ, ಮುಸ್ಲಿಂ ಸಮಾಜದ ಮುಖಂಡರ ಮನವೊಲಿಸಿ ದೇವಸ್ಥಾನ ಮುಂದಿನ ಬಂಟಿಂಗ್ಸ್‌ ತೆರವುಗೊಳಿಸುತ್ತೇವೆ ಎಂದು ಪೊಲೀಸರು ವಾತಾವರಣ ತಿಳಿಗೊಳಿಸಿ ಎರಡೂ ಕೋಮಿನ ಜನರನ್ನು ದೂರ ಕಳುಹಿಸಿದರು.

ಹಾಲಿ, ಮಾಜಿ ಜಟಾಪಟಿ: ಈ ಸಂದರ್ಭದಲ್ಲಿ ಸ್ಥಳಕ್ಕೆ ಮತ್ತೆ ಸ್ಥಳಕ್ಕೆ ಬಂದ ಎಸ್‌.ರಾಮಪ್ಪ ಹಾಗೂ ಹರೀಶ್‌ರ ಮಧ್ಯೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಲಘು ಲಾಠಿ ಪ್ರಹಾರ: ಎರಡೂ ಗುಂಪಿನವರನ್ನು ಪೊಲೀಸರು ಸಮಾಧಾನಪಡಿಸಿ ದೂರ ಕಳುಹಿಸಲು ಯತ್ನಿಸಿದರು. ಆದರೆ ಇದು ಸಫಲವಾಗದ್ದರಿಂದ ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದರು.

ಆಗ ರಸ್ತೆಯ ಕೆಲವೆಡೆಗಳಿಂದ ಕಲ್ಲುಗಳು ತೂರಿ ಬಂದ ಘಟನೆಯೂ ನಡೆಯಿತು. ಸ್ಥಳದಲ್ಲಿದ್ದ ಎಸ್ಪಿ ಹನುಮಂತರಾಯ, ಹೆಚ್ಚುವರಿ ಎಸ್ಪಿ ರಾಜೀವ್‌, ಡಿಎಸ್ಪಿ ಮಂಜುನಾಥ್‌ ಗಂಗಲ್‌, ತಹಶೀಲ್ದಾರ್‌ ಕೆ.ಬಿ.ರಾಮಚಂದ್ರಪ್ಪ, ಇನ್ಸ್‌ಪೆಕ್ಟರ್‌ಗಳಾದ ಗುರುನಾಥ್‌, ಲಕ್ಷ್ಮಣ ನಾಯ್ಕ ಹಾಗೂ ಕೆಎಸ್‌ಆರ್‌ಪಿ, ಡಿಎಆರ್‌ ಪಡೆಯ ಸಿಬ್ಬಂದಿ ಪರಿಸ್ಥಿತಿಯನ್ನು ತಹಬಂದಿಗೆ ತಂದರು. ಸಂಜೆ ಇನ್ಸ್‌ಪೆಕ್ಟರ್‌ ಕಚೇರಿಯಲ್ಲಿ ಹಾಲಿ ಮಾಜಿ ಶಾಸಕರ ಹಾಗೂ ಎರಡೂ ಕೋಮಿನ ಮುಖಂಡರನ್ನು ಸೇರಿಸಿ ಶಾಂತಿ ಸಭೆ ನಡೆಸಲಾಯಿತು. ದೇವಸ್ಥಾನಗಳ ಮುಂದೆ ಬಂಟಿಂಗ್ಸ್‌ ಕಟ್ಟಬಾರದು, ಕಟ್ಟಿದ್ದರೆ ಅದನ್ನು ಅವರೆ ತೆರವುಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಎಸ್ಪಿ, ಎಎಸ್ಪಿ, ಡಿಎಸ್ಪಿ ಇತರರಿದ್ದರು. ನಗರದಲ್ಲಿ 144 ಸೆಕ್ಷನ್‌ ಜಾರಿ ಇದೆ ಎಂದರು.

ಟಾಪ್ ನ್ಯೂಸ್

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.