ಚಿರತೆ ಸೆರೆಗೆ ಮುಂದುವರೆದ ಕಾರ್ಯಾಚರಣೆ
Team Udayavani, Jul 3, 2019, 3:24 PM IST
ಹರಿಹರ: ತಾಲೂಕಿನ ಹೊಳೆಸಿರಿಗೆರೆ ಗ್ರಾಮದಲ್ಲಿ ಭಾನುವಾರ ಮೂವರನ್ನು ಗಾಯಗೊಳಿಸಿ ಪರಾರಿಯಾಗಿದ್ದ ಚಿರತೆ ಸೋಮವಾರ ರಾತ್ರಿಯಾದರೂ ಪತ್ತೆಯಾಗಿಲ್ಲ.
ಸೋಮವಾರ ರಾತ್ರಿವರೆಗೂ ಹೊಳೆಸಿರಿಗೆರೆ ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಮಂಗಳವಾರ ಸಮೀಪದ ಧೂಳೆಹೊಳೆ ಗ್ರಾಮದ ಆಸುಪಾಸಿನಲ್ಲಿ ಹುಡುಕಾಟ ನಡೆಸಿದ್ದು, ರಾತ್ರಿಯಾದರೂ ಚಿರತೆ ಕಾಣಿಸಿಲ್ಲ.
ಮಂಗಳವಾರ ಬೆಳಗ್ಗೆ ಚಿರತೆಯ ಹೆಜ್ಜೆ ಜಾಡು ಪರಿಶೀಲಿಸಿದಾಗ ಧೂಳೆಹೊಳೆ ಗ್ರಾಮದ ಕಡೆಗೆ ಚಿರತೆ ಸಾಗಿರುವುದು ತಿಳಿಯಿತು. ಅಲ್ಲಲ್ಲಿ ಹೆಜ್ಜೆ ಗುರುತುಗಳು ಅಸ್ಪಷ್ಟವಾಗಿ, ಕಾಣದಾಗಿದ್ದು, ಮತ್ತೆಲ್ಲೋ ಕಾಣುವುದು ಅಧಿಕಾರಿ-ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಡ್ರೋಣ್‌ನಿಂದ ಹುಡುಕಾಟ: ಚಿರತೆ ಹುಡುಕಾಟಕ್ಕೆ ಡ್ರೋಣ್ ಕ್ಯಾಮೆರಾ ಬಳಸಲಾಗುತ್ತಿದೆ. ಗಿಡ-ಮರಗಳಿರುವ, ತಗ್ಗು-ದಿನ್ನೆ ಪ್ರದೇಶಗಳಲ್ಲೆಲ್ಲಾ ಡ್ರೋಣ್ ಕ್ಯಾಮೆರಾ ಹಾರಾಡಿಸಿ ಅಧಿಕಾರಿಗಳು ಚಿರತೆ ಹುಡುಕುತ್ತಿದ್ದಾರೆ. ಸಂಶಯಾಸ್ಪದ ಸ್ಥಳಗಳಲ್ಲಿ ಗಿಡ-ಮರಗಳಿಗೆ ಕ್ಯಾಮೆರಾಗಳನ್ನು ಕಟ್ಟಿ ಚಿತ್ರೀಕರಿಸುವ ಮೂಲಕವೂ ಚಿರತೆ ಚಲನವಲನ ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಇದಲ್ಲದೆ ಫ್ಲ್ಯಾಶ್ ರಹಿತ ಕ್ಯಾಮೆರಾಗಳನ್ನೂ ಸಹ ಕಾರ್ಯಾಚರಣೆಗೆ ಬಳಸಲಾಗಿದೆ.
ಬೋನು ಅಳವಡಿಕೆ: ಧೂಳೆಹೊಳೆ ಗ್ರಾಮದ ಹೊರವಲಯದಲ್ಲಿ ಜಾಲಿ ಗಿಡದ ಪೊದೆಯ ಬಳಿ ಬೋನು ಅಳವಡಿಸಿದ್ದು, ಹಸಿದ ಚಿರತೆ ಬಂದು ಬಲೆಗೆ ಬೀಳಲೆಂದು ಅದರೊಳಗೆ ಕುರಿಯನ್ನು ಹೋಲುವ ಆಕೃತಿಯನ್ನು ಇರಿಸಲಾಗಿದೆ.
ಪ್ರೌಢಶಾಲೆಗೆ ರಜೆ: ಗ್ರಾಮಕ್ಕೆ ಚಿರತೆ ಬಂದಿದೆಯೆಂಬ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಿಂಡು ಹಿಂಡಾಗಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದ ಸ್ಥಳಕ್ಕೆ ಧಾವಿಸಿದರು. ಜನರು ಗುಂಪುಗೂಡದಂತೆ, ಅಲ್ಲಿಂದ ದೂರಕ್ಕೆ ಕಳುಹಿಸಲು ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. ಗ್ರಾಮದಿಂದ 1 ಕಿ.ಮೀ. ದೂರದ ಹೊಳೆ ದಂಡೆ ಮೇಲಿರುವ ಪ್ರೌಢಶಾಲೆಗೆ ರಜೆ ಘೋಷಿಸಲಾಗಿತ್ತು.
ವಲಯ ಅರಣ್ಯಾಧಿಕಾರಿಗಳಾದ ಉಷಾರಾಣಿ ಎಚ್., ಹರ್ಷ, ಇದಾಯತ್, ಚಂದ್ರಕಾಂತ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿಗಳು ಚಿರತೆ ಹುಡುಕಾಟ ನಡೆಸಿದ್ದಾರೆ. ಗ್ರಾಮದ ಸುತ್ತಮುತ್ತ ರಾತ್ರಿ ವೇಳೆಯೂ ಗಸ್ತು ತಿರುಗುತ್ತಿದ್ದಾರೆ. ಒಟ್ಟಿನಲ್ಲಿ ಚಿರತೆ ಹಿಡಿಯಲು ಅರಣ್ಯಾಧಿಕಾರಿಗಳು ಶತಪ್ರಯತ್ನ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.