ನಿಧಿ ಎಂದು ನಂಬಿ ಬೇಸ್ತು ಬಿದ್ದರು!
ಪೊಲೀಸರು-ಅಧಿಕಾರಿಗಳಿಂದ ಪರಿಶೀಲನೆ • ಪತ್ತೆಯಾಗಿದ್ದು ಹಗೇವು
Team Udayavani, Aug 18, 2019, 3:38 PM IST
ಹರಿಹರ: ನಗರದ ತೆಗ್ಗಿನಕೇರಿ ಬಡಗೇರ ಓಣಿಯ ಮನೆಯೊಂದರ ಹಿಂದೆ ಪತ್ತೆಯಾದ ಹಗೇವು.
ಹರಿಹರ: ನಿಧಿ ಇದೆಯೆಂಬ ಶಂಕೆಯಿಂದ ರಾತ್ರಿಯಿಡೀ ಪೊಲೀಸರು ಕಾವಲು ಕಾದು, ಬೆಳಿಗ್ಗೆ ಅಧಿಕಾರಿಗಳು, ನೂರಾರು ಜನರ ಸಮ್ಮುಖದಲ್ಲಿ ತೆರೆದು ನೋಡಿದರೆ ಅಲ್ಲಿ ಹಳೆಯ ಹಗೇವು ಪತ್ತೆಯಾಗಿದೆ.
ಈ ಘಟನೆ ನಡೆದಿದ್ದು, ನಗರದ ತೆಗ್ಗಿನಕೇರಿ ಸಮೀಪದ ಬಡಗೇರ ಓಣಿಯಲ್ಲಿ ಶುಕ್ರವಾರ ತಡರಾತ್ರಿ. ನಗರಸಭೆ ಮಾಜಿ ಅಧ್ಯಕ್ಷ ವಿಶ್ವನಾಥ್ ಭೂತೆ ಇವರ ಮನೆ ಹಿಂದಿನ ಖಾಲಿ ಜಾಗದಲ್ಲಿ ವಿದ್ಯುತ್ ಅರ್ಥಿಂಗ್ ಮಾಡಲು ಶುಕ್ರವಾರ ಕಾರ್ಮಿಕರು ಗುಂಡಿ ತೋಡುತ್ತಿದ್ದಾಗ, ಹಾರೆ ಹೊಡೆತಕ್ಕೆ ಟಣ್…. ಟಣ್… ಶಬ್ದ ಕೇಳಿಸಿದೆ. ಒಳಗೆನೋ ಇದೆ ಎಂದು ಅರಿತು ಅಕ್ಕಪಕ್ಕದ ಜನರೆಲ್ಲಾ ಸೇರಿದ್ದಾರೆ. ಕೊನೆಗೆ ನಿಧಿ ಇರಬಹುದು ಎಂದು ಶಂಕೆ ವ್ಯಕ್ತವಾಗಿದೆ. ನೋಡ ನೋಡುತ್ತಿದ್ದಂತೆಯೇ ಇದರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದರಿಂದ ಕುತೂಹಲಗೊಂಡು ಸ್ಥಳದಲ್ಲಿ ನೂರಾರು ಜನ ಸೇರಿದ್ದಾರೆ. ಕಾರ್ಮಿಕರು ಇದರ ಉಸಾಬರಿಯೇ ಬೇಡ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ತಾಲೂಕು, ಜಿಲ್ಲಾಮಟ್ಟದ ಅಧಿಕಾರಿಗಳಿಗೂ ಸುದ್ದಿ ಮುಟ್ಟಿ, ಕೆಲ ಗಂಟೆಗಳಲ್ಲೆ ಎಸ್ಪಿ ಸೂಚನೆ ಮೇರೆಗೆ ನಗರ ಠಾಣೆ ಪಿಎಸ್‌ಐ ಪ್ರಭು ಕೆಳಗಿನಮನಿ ಸ್ಥಳಕ್ಕೆ ಬಂದು ಪರಿಶೀಲಿಸಿ, ಇದು ಪುರಾತತ್ವ ಇಲಾಖೆಗೆ ಸಂಬಂಧಿಸಿದ ವಿಷಯವಾಗಿದ್ದು ಬಂದೋಬಸ್ತ್ ಒದಗಿಸುವುದಷ್ಟೆ ನಮ್ಮ ಕೆಲಸ ಎಂದು ಭದ್ರತೆ ಒದಗಿಸಿದ್ದಾರೆ.
ನಂತರ ರಾತ್ರಿ 11 ಗಂಟೆ ವೇಳೆಗೆ ತಹಶೀಲ್ದಾರ್ ರೆಹನ್ ಪಾಷಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಬೆಳಿಗ್ಗೆ ಉತVನನ ಮಾಡೋಣ ಎಂದು ತಿಳಿಸಿದರು. ರಾತ್ರಿ ಇಡೀ ಇಬ್ಬರು ಪೊಲೀಸರು ಕಾವಲು ಕಾದರು. ಶನಿವಾರ ಬೆಳಗ್ಗೆ 12ಕ್ಕೆ ತಹಶೀಲ್ದಾರ್ ಸೇರಿದಂತೆ ಕಂದಾಯ, ನಗರಸಭೆ ಅಧಿಕಾರಿಗಳ ಸಮ್ಮುಖದಲ್ಲಿ ನಗರಸಭೆ ಪೌರ ಕಾರ್ಮಿಕರು ಉತ್ಖನನ ನಡೆಸಲು ಮುಂದಾದರು. ಎಲ್ಲ ಅಗೆದು ನೋಡಿದರೇ ಹಳೆ ಕಾಲದ ಹಗೇವು ಪತ್ತೆಯಾಗಿದೆ. ರಾತ್ರಿಯಿಡೀ ಕಾಯ್ದ ಜನರು, ಅಧಿಕಾರಿಗಳು ಕೊನೆಗೆ ಮನೆಯತ್ತ ಹೆಜ್ಜೆ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Udupi: ಸಾಲ ಮರುಪಾವತಿಸದೆ ನಕಲಿ ದಾಖಲೆ ಸೃಷ್ಟಿಸಿ ಮರು ಸಾಲ; ಪ್ರಕರಣ ದಾಖಲು
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.