ಸನಾತನ ಸಂಸ್ಕೃತಿಯ ಹಿಂದುತ್ವಕ್ಕೆ ಸಾವಿಲ್ಲ
ಹಿಂದೂಗಳು ಕೋಮುವಾದಿಗಳಲ್ಲ •ದೇಶದಲ್ಲಿ ಹಿಂದೂಗಳನ್ನು ಹತ್ತಿಕ್ಕುವ ಪ್ರಯತ್ನ: ಬಡಿಗೇರ್
Team Udayavani, May 8, 2019, 10:56 AM IST
ಹರಿಹರ: ಹಿಂದೂ ಜಾಗರಣ ವೇದಿಕೆಯಿಂದ ಶ್ರೀರಾಮ ನವಮಿ, ಹಿಂದೂ ವಿರಾಟ್ ಸಮಾಜೋತ್ಸವ ನಿಮಿತ್ತ ಮಂಗಳವಾರ ಬೃಹತ್ ಶೋಭಾಯಾತ್ರೆ ನಡೆಯಿತು.
ಹರಿಹರ: ಸನಾತನ ಸಂಸ್ಕೃತಿಯಾದ ಹಿಂದುತ್ವಕ್ಕೆ ಸಾವಿಲ್ಲ. ಅದೆಷ್ಟೋ ನಾಗರಿಕತೆಗಳು ಬಂದು ಹೋಗಿರಬಹುದು. ಆದರೆ ಹಿಂದುತ್ವ ಅಜರಾಮರ ಎಂದು ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತ್ಯ ಪ್ರಧಾನ ಸಂಚಾಲಕ ಶಿವಾನಂದಪ್ಪ ಬಡಿಗೇರ್ ಹೇಳಿದರು.
ಶ್ರೀರಾಮ ನವಮಿ ನಿಮಿತ್ತ ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಹಿಂದೂ ವಿರಾಟ್ ಸಮಾಜೋತ್ಸವದಲ್ಲಿ ಮಾತನಾಡಿದ ಅವರು, ಹುಟ್ಟಿದ ಮೇಲೆ ಸಾಯುವುದು ಪ್ರಕೃತಿ ನಿಯಮ. ಇಸ್ಲಾಂ, ಕ್ರೈಸ್ತ ಧರ್ಮಗಳು ನಿರ್ದಿಷ್ಟ ದಿನಾಂಕದಂದು ಹುಟ್ಟಿದ್ದು, ಅವುಗಳಿಗೆ ಎಂದಾದರೊಮ್ಮೆ ಅಂತ್ಯವಿದೆ. ಆದರೆ ಹಿಂದೂತ್ವ ಹುಟಿದ್ದಕ್ಕೆ ದಿನಾಂಕ, ಸಮಯವಿಲ್ಲ. ಹಿಂದುತ್ವ ನಿರಂತರ ಎಂದರು.
ವಿವಿಧ ಜನಾಂಗದವರು ಹಿಂದೂತ್ವ ಮುಗಿಸಲು ಕಳೆದ 2000 ವರ್ಷಗಳಿಂದಲೂ ದಾಳಿ ಮಾಡುತ್ತಿದ್ದರೂ ಯಶಸ್ವಿಯಾಗಿಲ್ಲ. ಪುನರ್‌ಜನ್ಮದ ಮೇಲೆ ನಂಬಿಕೆ ಇಟ್ಟಿರುವ ಹಿಂದೂಗಳನ್ನು ಕೊನೆಗಾಣಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಯುದ್ಧವಿಲ್ಲದೆ, ಕೇಸು-ಕೋರ್ಟ್ ಅಲೆದಾಡದೆ, ನಗುನಗುತ್ತಲೇ ಭಾರತವನ್ನು ಮುಸ್ಲಿಂ ದೇಶವಾಗಿಸುವ ಹುನ್ನಾರ ಲವ್ ಜಿಹಾದ್. ಸ್ವಾತಂತ್ರ್ಯ ಸಿಕ್ಕಾಗ ದೇಶದಲ್ಲಿ ಶೇ. 4 ರಷ್ಟಿದ್ದ ಅಲ್ಪಸಂಖ್ಯಾತರು ಇಂದು ಶೇ. 18ರಷ್ಟಾಗಿದ್ದಾರೆ. ಹಿಂದೂಗಳು ಆರ್ಥಿಕ ಶಕ್ತಿಯಿದ್ದರೂ ಕೇವಲ ಒಂದೆರಡು ಮಕ್ಕಳು ಸಾಕೆನ್ನುತ್ತಿದ್ದರೆ, ಅಲ್ಪಸಂಖ್ಯಾತರು ಹಲವು ಮಕ್ಕಳನ್ನು ಹೆತ್ತು ಬಹುಸಂಖ್ಯಾತರಾಗುತ್ತಿದ್ದಾರೆ ಎಂದರು.
ಹಿಂದೂಗಳು ಕೋಮವಾದಿಗಳಲ್ಲ. ಸಹಿಷ್ಣುತಾವಾದಿಗಳು. ಹಿಂದೂಗಳ ಉದಾತ್ತ ಮನೋಭಾವವನ್ನು ದೌರ್ಬಲ್ಯವೆಂದುಕೊಳ್ಳಬಾರದು. ಹಿಂದೂ ಮುಸ್ಲಿಂ ಭಾಯಿ ಭಾಯಿ ಎನ್ನುವುದು ಎರಡೂ ಕಡೆಯಿಂದ ಆಗಬೇಕು. ನಾವು ಕುರಾನ್ ದೇವರ ಮನೆಯಲ್ಲಿಟ್ಟು ಪೂಜಿಸಬಲ್ಲೆವು. ಮುಸ್ಲಿಮ್‌ರು ಭಗವದ್ಗೀತೆ ಇಟ್ಟುಕೊಳ್ಳುತ್ತಾರೆಯೇ? ಬಸವಣ್ಣ ಹೇಳಿದಂತೆ ದೇವನೊಬ್ಬ ನಾಮ ಹಲವು ಎಂಬುದನ್ನು ಒಪ್ಪುತ್ತಾರೆಯೇ ಎಂದರು.
ನಮ್ಮ ಪೂರ್ವಜರನ್ನು ಕೊಂದು ಹಾಕಿದ ಟಿಪ್ಪು ಸುಲ್ತಾನನ ಜಯಂತಿ ಆಚರಿಸುವವರಿಗೆ ಹಿಂದೂ ಮುಸ್ಲಿಮ್‌ರ ಸಾಮರಸ್ಯ ಸಾಧಿಸಿದ ಸಂತ ಶಿಶುನಾಳ ಶರೀಫ್, ಅಬ್ದುಲ್ ಕಲಾಂ ಜಯಂತಿ ಬೇಕಿಲ್ಲ ಎಂದರು.
ಜಾತಿ, ಕುಲಗಳೆನ್ನೆಲ್ಲ ತೊಡೆದು ಹಿಂದೂಗಳನ್ನು ಒಗ್ಗೂಡಿಸಿದ ಬಸವಣ್ಣ ಅಲ್ಲದೆ ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ, ಕನಕದಾಸ ಇವರೆಲ್ಲಾ ಇಂದು ಸಣ್ಣ-ಪುಟ್ಟ ಸಮಾಜಕ್ಕೆ ಸೀಮಿತರಾಗಿದ್ದಾರೆ. ಇದೆ ರೀತಿ ಛತ್ರಪತಿ ಶಿವಾಜಿಯನ್ನು ಮರಾಠಾ ಸಮಾಜಕ್ಕೆ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿರುವುದು ಅಪಾಯಕಾರಿ ಎಂದರು.
ಸಮಾಜೋತ್ಸವ ನಿಮಿತ್ತ ಬೈಕ್ ರ್ಯಾಲಿಗೆ ಅನುಮತಿ ನೀಡದಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಭಾರತದಲ್ಲಿ ರಾಮ ನವಮಿ ಆಚರಿಸಲೂ ಪರವಾನಿಗೆ ಪಡೆಯಬೇಕು. ಆದರೆ ಪ್ರಾರ್ಥನೆ ಮಾಡಲು ಯಾವುದೇ ಅನುಮತಿ ಬೇಕಿಲ್ಲ. ಇದು ಬಹುಸಂಖ್ಯಾತ ಹಿಂದೂಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ಆರೋಪಿಸಿದರು. ಹಿಂಜಾವೆ ತಾಲೂಕು ಅಧ್ಯಕ್ಷ ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ವೀರೇಶ್, ಜಿಲ್ಲಾ ಸಂಚಾಲಕ ಸತೀಶ್ ಪೂಜಾರಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.