ಪ್ರಜ್ವಲ್ ರೇವಣ್ಣಗೆ ಭಾರೀ ಅಂತರದ ವಿಜಯ
Team Udayavani, May 24, 2019, 12:52 PM IST
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರತಿನಿಧಿಸುತ್ತಿದ್ದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅವರ ಮೊಮ್ಮಗ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರ ವಿರುದ್ಧ 1,41,324 ಮತಗಳ ಅಂತರದ ಜಯ ಸಾಧಿಸಿದ್ದಾರೆ.
ಮತ ಎಣಿಕೆ ಆರಂಭದಿಂದ ಮುನ್ನಡೆ:
ಪ್ರಜ್ವಲ್ ರೇವಣ್ಣ ಅವರು 6,76,606 ಮತಗಳನ್ನು ಪಡೆದು ವಿಜಯಿಯಾದರೆ, ಅವರ ಸಮೀಪದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎ. ಮಂಜು ಅವರು 5,35,282 ಮತಗಳನ್ನು ಪಡೆದು ಪರಾಭವಗೊಂಡರು. ಮತ ಎಣಿಕೆ ಆರಂಭವಾದ ಮೊದಲ ಸುತ್ತಿನಿಂದಲೇ ಮುನ್ನಡೇ ಕಾಯ್ದುಕೊಂಡ ಪ್ರಜ್ವಲ್ ರೇವಣ್ಣ ಅವರು ಎಲ್ಲಾ 23 ಸುತ್ತುಗಳಲ್ಲೂ ಮುನ್ನಡೆ ಸಾಧಿಸುತ್ತಲೇ ಸಾಗಿದ ರೇವಣ್ಣ ಅವರು ಭಾರೀ ಅಂತರದ ಜಯ ದಾಖಲಿಸಿ ಮೊದಲ ಪ್ರಯತ್ನದಲ್ಲೇ ಸಂಸತ್ ಪ್ರವೇಶ ಮಾಡುತ್ತಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಗೆಲುವಿನೊಂದಿಗೆ ಹಾಸನ ಲೋಕಸಭಾ ಕ್ಷೇತ್ರ ಅತ್ಯಂತ ಕಿರಿಯ ಪ್ರತಿನಿಧಿಯನ್ನು ಹೊಂದಿದ ದಾಖಲೆ ಮಾಡಿದೆ. 28ರ ಹರೆಯದ, ಅವಿವಾಹಿತರಾದ ಪ್ರಜ್ವಲ್ ರೇವಣ್ಣ ಅವರೇ ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿ. ಈ ಹಿಂದೆ ವೈ.ಎನ್ ರುದ್ರೇಶಗೌಡ (1996 ರ ಚುನಾವಣೆ) ಅವರನ್ನು ಬಿಟ್ಟರೆ ಹಾಸನ ಲೋಕಸಭಾ ಕ್ಷೇತ್ರವನ್ನು ಎಚ್.ಎನ್.ನಂಜೇಗೌಡ, ಎಚ್.ಸಿ.ಶ್ರೀಕಂಠಯ್ಯ, ಜಿ.ಪುಟ್ಟಸ್ವಾಮಿಗೌಡ ಅವರಂಥ ಹಿರಿಯ ರಾಜಕಾರಣಿಗಳು, ದೇವೇಗೌಡರಂತಹ ಮುತ್ಸದ್ದಿ ನಾಯಕರು ಪ್ರತಿನಿಧಿಸಿದ್ದರು.
ಮತಗಳಿಕೆ ವಿವರ: ಮತಯಂತ್ರಗಳಲ್ಲಿ ಚಲಾವಣೆಗೊಂಡ ಒಟ್ಟು 12,74,438 ಮತಗಳ ಪೈಕಿ ಪ್ರಜ್ವಲ್ ರೇವಣ್ಣ 6,75,512 ಮತಗಳನ್ನು ಪಡೆದರೆ ಎ. ಮಂಜು ಅವರು 5,33,389 ಮತಗಳನ್ನು ಗಳಿಸಿದ್ದಾರೆ. ಬಹುಜನ ಸಮಾಜ ಪಕ್ಷದ ವಿನೋದ್‌ರಾಜ್ 3,8682 ಮತ ಪಡೆದರೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಎಚ್.ಎಂ. ಚಂದ್ರೇಗೌಡ ಅವರು 7,007 ಮತಗಳಿಸಿದ್ದು, ಪಕ್ಷೇತರ ಅಭ್ಯರ್ಥಿಗಳಾದ ಎಂ. ಮಹೇಶ್ ಅವರು 3,706 ಹಾಗೂ ಆರ್.ಜಿ. ಸತೀಶ್ ಅವರು 4,501 ಮತಗಳನ್ನು ಪಡೆದಿದ್ದಾರೆ. 11,641 ನೋಟಾ ಮತಗಳು ದಾಖಲಾಗಿವೆ. ಇದಲ್ಲದೆ 4,215 ಅಂಚೆ ಮತಗಳು ಸ್ವೀಕೃತಗೊಂಡಿದ್ದು ಅದರಲ್ಲಿ 1,101 ಮತಗಳು ತಿರಸೃತಗೊಂಡಿವೆ, ಪುರಸ್ಕೃತ ಗೊಂಡಿರುವ ಮತಗಳಲ್ಲಿ ಪ್ರಜ್ವಲ್ ರೇವಣ್ಣ ಅವರು 1,094, ಎ. ಮಂಜು 1,893, ಬಿಎಸ್‌ಪಿ ಅಭ್ಯರ್ಥಿ ವಿನೋದ್ ರಾಜ್ 79, ಪ್ರಜಾಕೀಯ ಪಕ್ಷದ ಎಚ್.ಎಂ ಚಂದ್ರೇಗೌಡ 16, ಪಕ್ಷೇತರರಾದ ಎಂ. ಮಹೇಶ್ 04 ಮತ್ತು ಆರ್.ಜಿ. ಸತೀಶ್ 07 ಅಂಚೆ ಮತಗಳನ್ನು ಪಡೆದಿದ್ದಾರೆ.
ರೇವಣ್ಣ ಅವರ ಕೈ ಬಿಡದ ಮತದಾರರು: ಪ್ರಜ್ವಲ್ ರೇವಣ್ಣ ಅವರ ಗೆಲುವಿನ ಹಿಂದೆ ಎಚ್.ಡಿ.ರೇವಣ್ಣ ಅವರ ಹೋರಾಟ ಬಹುದೊಡ್ಡ ಫಲ ನೀಡಿದೆ. ಜಿಲ್ಲೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕಾರ್ಯಗಳ ಅನುಷ್ಠಾನ ಮಾಡುತ್ತಿರುವ ರೇವಣ್ಣ ಅವರು, ಚುನಾವಣೆ ಘೋಷಣೆ ಆದ ನಂತರ ಮೈತ್ರಿ ಪಕ್ಷದ ಕಾಂಗ್ರೆಸ್ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರದಲ್ಲಿ ಸಂಘಟಿತ ಪ್ರಚಾರ ನಡೆಸಿದರು. ಪಕ್ಷದ ಸಂಘಟನೆ, ರೇವಣ್ಣ ಅವರ ವರ್ಚಸ್ಸು ಪ್ರಜ್ವಲ್ ಗೆಲುವಿಗೆ ಬಹುದೊಡ್ಡ ಕೊಡುಗೆ ನೀಡಿದೆ. ಹಾಸನ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿ ಬಹುಮತ ಸಾಧಿಸಿರುವುದೇ ಇದಕ್ಕೆ ಸಾಕ್ಷಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ
Padubidri: ಮೊಬೈಲ್ ಕೊಡಿಸದ ತಾಯಿ; ಸಾಯಲು ಹೆದ್ದಾರಿಗೋಡಿದ ಮಗ; ಲಾರಿ ಡಿಕ್ಕಿ
Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್’ ತೆರೆಯದಂತೆ ಪೊಲೀಸರ ಸೂಚನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Rajasthan: ಕಾಂಗ್ರೆಸ್ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು
Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ
Yamuna ನದಿಯಲ್ಲಿ ಡಾ| ಮನಮೋಹನ್ ಸಿಂಗ್ ಚಿತಾಭಸ್ಮ ವಿಸರ್ಜನೆ
Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ
ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ ನಾಮ ನಿರ್ದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.