ಒಂದೇ ಬಾರಿ 121 ಮಳಿಗೆ ಟೆಂಡರ್‌ಗೆ ಸೂಚನೆ
Team Udayavani, Oct 26, 2021, 3:07 PM IST
ಅರಕಲಗೂಡು: ಪಪಂ ಮಾಲೀಕತ್ವದ 61 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆಗೆ ತಡೆ ನೀಡಿ 121 ವಾಣಿಜ್ಯ ಮಳಿಗೆಗಳನ್ನು ಒಂದೇ ಬಾರೀ ಹರಾಜು ಮಾಡಲು ಹೈಕೋರ್ಟ್ ಮಹತ್ವದ ತೀರ್ಪು ನೀಡಿದ ಬೆನ್ನಲ್ಲೆ ಹರಾಜು ಪ್ರಕ್ರಿಯೆ ಮುಂದೂಡಲಾಗಿದ್ದು, ಈ ಟೆಂಡರ್‌ಲ್ಲಿ ಭಾಗವಹಿಸಲು ಸಿದ್ಧರಾಗಿದ್ದ ಸಾವಿರಕ್ಕೂ ಅಧಿಕ ಮಳಿಗೆ ಆಕಾಂಕ್ಷಿಗಳಿಗೆ ನಿರಾಶೆಯಾಗಿದೆ.
ಪಪಂ ವ್ಯಾಪ್ತಿಯಲ್ಲಿ 121 ವಾಣಿಜ್ಯ ಮಳಿಗೆಗಳನ್ನ ಹೊಂದಿರುವ ಪಪಂ ಕಾಲಾವಧಿ ಮುಗಿದಿದ್ದ 61 ಮಳಿಗೆಗಳನ್ನ ಈ ಟೆಂಡರ್ ಮೂಲಕ ಅಕ್ಟೋಬರ್ 28, 29, 30 ರಂದು ಹರಾಜು ಪ್ರಕ್ರಿಯೆಗೆ ಸಿದ್ಧಪಡಿಸಿಕೊಂಡಿತ್ತು. ಆದರೆ ಮಳಿಗೆದಾರರು ಪಪಂ ಟೆಂಡರ್ ಪ್ರಕ್ರಿಯೆ ನಡೆಸುತ್ತಿ ರುವುದು ಕಾನೂನು ಬಾಹಿರವಾಗಿದೆ. ಇದನ್ನು ರದ್ದುಗೊಳಿಸುವಂತೆ ಹೈಕೋರ್ಟಗೆ ಮನವಿ ಸಲ್ಲಿಸಿದರು.
ಈ ಆಧಾರದಲ್ಲಿ 3-4 ವರ್ಷಗಳಿಂದ ನಡೆಯುತ್ತಿದ್ದ ಪಪಂ- ಮಳಿಗೆ ದಾರರ ನಡುವಿನ ಜಟಾಪಟಿಗೆ ಸೋಮವಾರ ನೀಡಿದ ತೀರ್ಪಿನಮೂಲಕ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿದೆ. ಕೋರ್ಟ್ ತೀರ್ಪಿನ ಅನ್ವಯ ಉಳಿದ 50 ಮಳಿಗೆಗಳನ್ನ ಟೆಂಡರ್ ಕರೆಯುವವರೆಗೂ ಕಾಲವಕಾಶ ಸಿಕ್ಕಿದೆ. ಆದರೆ, ಈ 60 ಮಳಿಗೆಗಳ ಕಲಾವಧಿ 2024 ರವರೆಗೆ ಇರುವುದರಿಂದ ನ್ಯಾಯಾಲಯದ ತೀರ್ಪಿನಂತೆ ಪಪಂ ಹಾಲಿ ಮಳಿಗೆ ದಾರರು ಕಾಯಬೇಕೇ ಬೇಡವೇ ನೋಡಬೇಕು. ಪಪಂನ 121 ಮಳಿಗೆಗಳಲ್ಲಿ ಬಹುತೇಕ ಮಳಿಗೆಗಳು ಪಟ್ಟಣದ ಹೃಧಯ ಭಾಗದಲ್ಲಿದ್ದು, ವಹಿವಾಟು ಜೋರಾಗಿದೆ. ಕಳೆದ ವರ್ಷ 61 ಮಳಿಗೆಗಳ ಹರಾಜಾದಾಗಲೂ ಕೋರ್ಟ್ ತಡೆದಿತ್ತು.
ಪಪಂಗೆ ಹೆಚ್ಚು ಲಾಭ: 121 ಮಳಿಗೆಗಳ ಪೈಕಿ ಬಹುತೇಕ ಮಳಿಗೆಗಳು ಮೂಲ ಬಾಡಿಗೆದಾರರಿಂದ ಒಳ ಒಪ್ಪಂದದ ಮೂಲಕ ಪರಬಾರೆ ಮಾಡಿರುವ ವಿಷಯ ಗೋಪ್ಯ ವಾಗೇನೂ ಇಲ್ಲ. ಇದರ ಬಗ್ಗೆ ಧ್ವನಿಎತ್ತದೇ ಮೌನ ವಹಿಸಿದ ಪಪಂನ ನಿಲುವನ್ನು ಬಳಸಿಕೊಂಡು, ಈಗಲೂ ಬಳ ಕರಾರು ನಡೆಯುತ್ತಿದೆ. ಬಂಡವಾಳವನ್ನು ಹಾಕಿದ ಪಪಂಗೆ ಲಾಭಕ್ಕಿಂತ ಮಳಿಗೆದಾರರಿಗೆ ದುಪ್ಪಟ್ಟು ಲಾಭ ಸಿಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ನ್ಯಾಯಾಲಯದ ತೀರ್ಪು ಹೊರಬಂದ ಕೂಡಲೇ ಕೆಇಬಿ ರಸ್ತೆ, ಪೇಟೆ ಮುಖ್ಯ ರಸ್ತೆ, ಅನಕೃ ವೃತ್ತ ಹಾಗೂ ಸಂತೆಮಾಳ ದಲ್ಲಿರುವ 61 ಮಳಿಗೆಗಳ ಮಾಲೀಕರು ಹರ್ಷ ವ್ಯಕ್ತಪಡಿಸಿ ಸಿಹಿ ಹಂಚಿದರು.
ಪಟ್ಟಣ ಪಂಚಾಯ್ತಿ ಈಗಾಗಲೇ 2 ಬಾರಿ ಟೆಂಡರ್ ಕರೆದಿದ್ದು, ಕೋರ್ಟ್ ತಡೆ ನೀಡಿದೆ. ಪಪಂನ ಅಧಿಕಾರಿಗಳು ಟೆಂಡರ್ ಕರೆಯುವ ಮೊದಲು, ಎಲ್ಲಾಪ್ರಕ್ರಿಯೆಗಳನ್ನು ಮುಗಿಸಿ ಹಾರಾಜಿಗೆ ಮುಂದಾಗಿದ್ದರೆ, ನಮಗೆ ಈ ರೀತಿಯ ಅನ್ಯಾಯವಾಗುತ್ತಿರಲಿಲ್ಲ. ಪಪಂನ ಈ ನಿಲುವಿನಿಂದ ಸುಮಾರು 10-20 ಸಾವಿರ ಹಣ ಕಳೆದುಕೊಂಡಂತಾಗಿದೆ.– ಸಂತೋಷ, ಟೆಂಡರ್‌ನಲ್ಲಿ ಭಾಗವಹಿಸಿದ್ದ ವ್ಯಕ್ತಿ
ಪಪಂನ 61 ಮಳಿಗೆಗಳನ್ನ ಕಾನೂನು ಪ್ರಕಾರವೇ ಸರ್ಕಾರದ ಆದೇಶದಂತೆ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್‌ನಿಂದ ಪಪಂಗೆ ಆದಾಯ ಅಧಿಕವಾಗಿತ್ತು. ಆದರೆ, ನ್ಯಾಯಾಲಯವು ಸೋಮವಾರ ನೀಡಿರುವ ತೀರ್ಪನ್ನು ಗೌರವಯುತವಾಗಿ ಸ್ವಾಗತಿಸುವೆ. ಮುಂದಿನ ಸಭೆಯಲ್ಲಿ ನ್ಯಾಯಾಲಯದ ತೀರ್ಪಿನ ಬಗ್ಗೆ ಚರ್ಚೆ ನಡೆಸಿ ಕ್ರಮ ಜರುಗಿಸಲಾಗುವುದು.-ಹೂವಣ್ಣ ಅಧ್ಯಕ್ಷರು ಪಪಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.