ರೈಲಿನಲ್ಲಿ ಹೊರ ರಾಜ್ಯಗಳ 1,440 ಕಾರ್ಮಿಕರ ಪಯಣ
Team Udayavani, May 18, 2020, 6:36 AM IST
ಹಾಸನ: ಜಿಲ್ಲೆಯಲ್ಲಿದ್ದ ಹೊರ ರಾಜ್ಯಗಳ 1,440 ಕಾರ್ಮಿಕರನ್ನು ಭಾನುವಾರ ಪೊಲೀಸ್ ಬಿಗಿ ಭದ್ರತೆಯಲ್ಲಿ ರೈಲಿನಲ್ಲಿ ಕಳುಹಿಸಲಾಯಿತು. ಲಾಕ್‌ಡೌನ್ ಜಾರಿಯಾದ ನಂತರ ಕೆಲಸವಿಲ್ಲದೇ ವಲಸೆ ಕಾರ್ಮಿಕರ ಶಿಬಿರ ದಲ್ಲಿದ್ದವರೂ ಸೇರಿ ಒಟ್ಟು 1,440ಜನರನ್ನು ಹಾಸನ ರೈಲು ನಿಲ್ದಾಣದಿಂದ ವಿವಿಧ ರಾಜ್ಯಗಳಿಗೆ ವಿಶೇಷ ರೈಲಿನಲ್ಲಿ ಕಳುಹಿಸಲಾಯಿತು.
ರೈಲಿನಲ್ಲಿ ಹೊರಟ ಕಾರ್ಮಿಕರಿಗೆ ಜಿಲ್ಲಾಡಳಿತವು ಉಚಿತವಾಗಿ ತಪಾಸಣೆ, ಸ್ಯಾನಿಟೈಸರ್, ಮಾಸ್ಕ್, ಉಪಾಹಾರದೊಂದಿಗೆ ಎಲ್ಲಾ ಸೌಕರ್ಯ ವನ್ನು ಮಾಡಲಾಗಿದೆ. ಹೊರ ರಾಜ್ಯದವರು ತಮ್ಮೂರಿಗೆ ಹೋಗಲು ಅನೇಕ ದಿನಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಸಂಬಂಧ ಜಿಲ್ಲಾಡಳಿತ ಆಯಾ ರಾಜ್ಯದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಹಾಸನ ರೈಲು ನಿಲ್ದಾಣದಿಂದ ಬಿಹಾರ, ಅಸ್ಸಾಂ, ಜಾರ್ಖಂಡ್ ಸೇರಿದಂತೆ ವಿವಿಧ ಭಾಗಗಳಿಗೆ ಹೋಗುವ ಕಾರ್ಮಿಕರಿಗೆ ರೈಲು ಪ್ರಯಾಣಕ್ಕೆ ವ್ಯವಸ್ಥೆ ಮಾಡಿತ್ತು. ರೈಲಿನಲ್ಲಿ ಪ್ರಯಾಣ ಮಾಡುವ ಕಾರ್ಮಿಕರ ಪೂರ್ಣ ವಿವರವನ್ನು ಪಡೆದು ಮುಂಬೈನ ದಾದರ್ ಮೂಲಕ ಸಂಚರಿಸುವ ರೈಲಿನಲ್ಲಿ ಕಳುಹಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.