ಬಹುಗ್ರಾಮ ನೀರಿಗೆ 1573 ಕೋಟಿ
Team Udayavani, Apr 21, 2021, 2:28 PM IST
ಹಾಸನ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ರಮವಾಗಿ ನದಿ ಮೂಲದಿಂದಲೇ ಕುಡಿಯುವ ನೀರುಪೂರೈಸುವ 1,573 ಕೋಟಿ ರೂ. ಅಂದಾಜಿನ 10 ಬಹುಗ್ರಾಮಕುಡಿಯುವ ನೀರು ಪೂರೈಕೆ ಯೋಜನೆ (ಎಂವಿಎಸ್)ಯನ್ನುಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಹಾಸನ ಜಿಲ್ಲಾಕಚೇರಿಯು ಸಿದ್ಧಪಡಿಸಿದ್ದು, ಮಂಜೂರಾತಿಗಾಗಿ ಸರ್ಕಾರಕ್ಕೆಪ್ರಸ್ತಾವನೆ ಸಲ್ಲಿಸಿದೆ.
ಈ ಯೋಜನೆ ಅನುಷ್ಠಾನಗೊಂಡರೆ ಜಿಲ್ಲೆಯ 6ತಾಲೂಕುಗಳ 1,906 ಗ್ರಾಮಗಳ 9.32 ಲಕ್ಷ ಜನರಿಗೆ ಕಾವೇರಿಮತ್ತು ಹೇಮಾವತಿ ನದಿ ಮೂಲದಿಂದಲೇ ಶಾಶ್ವತವಾಗಿಕುಡಿಯುವ ನೀರು ಪೂರೈಕೆ ಸಾಧ್ಯವಾಗಲಿದೆ.
ಆಲೂರು ತಾಲೂಕು: ಹೇಮಾವತಿ ಜಲಾಶಯದ ಹಿನ್ನೀರಿನಿಂದಗಂಜಿಗೆರೆ ಮತ್ತು ಕುಂದೂರು ಗ್ರಾಪಂಗಳ ವ್ಯಾಪ್ತಿಯ 55 ಜನವಸತಿ ಪ್ರದೇಶಗಳಿಗೆ ಕುಡಿವ ನೀರು ಪೂರೈಸುವ 10.83 ಕೋಟಿರೂ. ಹಾಗೂ ಕಾರಗೋಡು, ಮಗ್ಗೆ, ಮಲ್ಲಾಪುರ ಗ್ರಾಪಂಗಳವ್ಯಾಪ್ತಿಯ 143 ಜನ ವಸತಿ ಪ್ರದೇಶಗಳಿಗೆ ನೀರು ಫೂರೈಸುವ36.70 ಕೋಟಿ ರೂ. ಬಹುಗ್ರಾಮ ಕುಡಿಯುವ ನೀರುಯೋಜನೆಯನ್ನು ರೂಪಿಸಲಾಗಿದೆ.
ಅರಕಲಗೂಡು ತಾಲೂಕು: ಕಾವೇರಿ ನದಿಯಿಂದ ನೀರೆತ್ತಿರುದ್ರಪಟ್ಟಣ ಸೇರಿದಂತೆ 33 ಹಳ್ಳಿಗಳಿಗೆ ಕುಡಿಯುವ ನೀರುಸರಬರಾಜು ಮಾಡುವ 39.91 ಕೋಟಿ ರೂ. ಯೋಜನೆ,ಬಾನಗುಂದಿ ಮತ್ತು 305 ಗ್ರಾಮಗಳಿಗೆ ಕುಡಿವ ನೀರುಪೂರೈಸುವ 286.46 ಕೋಟಿ ರೂ. ಯೋಜನೆ ಹಾಗೂಹೇಮಾವತಿ ನದಿಯಿಂದ ನೀರೆತ್ತಿ ಬೋಳಕ್ಯಾತನಹಳ್ಳಿ ಮತ್ತು 85ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ66.88 ಕೋಟಿ ರೂ. ಯೋಜನಾ ಪ್ರಸ್ತಾವನೆ ಸಿದ್ಧವಾಗಿದೆ.
ಬೇಲೂರು ತಾಲೂಕು: ಹೇಮಾವತಿ ನದಿಯಿಂದ ಬೇಲೂರುತಾಲೂಕಿನ 465 ಗ್ರಾಮಗಳಿಗೆ ಕುಡಿವ ನೀರು ಪೂರೈಸುವ 277.76 ಕೋಟಿ ರೂ. ಅಂದಾಜಿನ ಬಹುಗ್ರಾಮ ಕುಡಿ ಯುವ ನೀರುಯೋಜನೆಯನ್ನು ಇಲಾಖೆಯು ರೂಪಿಸಿದೆ.
ಹಾಸನ ತಾಲೂಕು: ಗೊರೂರು ಸಮೀಪ ಹೇಮಾವತಿ ಜಲಾಶಯ ಸಮೀಪದಿಂದಲೇ ಹೇಮಾವತಿ ನದಿಯಿಂದ ನೀರೆತ್ತಿ ಹಾಸನ ತಾಲೂಕಿನ ( ಸಕಲೇಶಪುರ ವಿಧಾನಸಭಾ ಕ್ಷೇತ್ರವ್ಯಾಪ್ತಿ)ಯ ಒಟ್ಟು 246 ಗ್ರಾಮಗಳಿಗೆ ಕುಡಿವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಗ್ರಾಮೀಣಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯುಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ.
ಚನ್ನರಾಯಪಟ್ಟಣ ತಾಲೂಕು: ಹೇಮಾವತಿ ನದಿಯಿಂದಗನ್ನಿಕಡ ಬಳಿ ನೀರೆತ್ತಿ ಚನ್ನರಾಯಪಟ್ಟಣ ತಾಲೂಕಿನ 431ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ353.28 ಕೋಟಿ ರೂ. ಅಂದಾಜಿನ ಬಹುಗ್ರಾಮ ಕುಡಿಯುವನೀರು ಯೋಜನೆಯನ್ನು ಸಿದ್ಧಪಡಿಸಲಾಗಿದೆ.
ಹೊಳೆನರಸೀಪುರ ತಾಲೂಕು: ಹೇಮಾವತಿ ನದಿಯಿಂದಹೊಳೆನರಸೀಪುರ ತಾಲೂಕು ಹಳ್ಳಿಮೈಸೂರು ಹೋಬಳಿ (ಅರಕಲಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿ)ಯ ಆನೆಕನ್ನಂಬಾಡಿಮತ್ತು 54 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ 45.96ಕೋಟಿ ರೂ. ಬಹುಗ್ರಾಮ ಕುಡಿಯುವ ನೀರು ಯೋಜನೆರೂಪಿಸಲಾಗಿದೆ. ಮಲ್ಲಪ್ಪನಹಳ್ಳಿ ಮತ್ತು 89 ಗ್ರಾಮಗಳಿಗೆ (ಹೊಳೆನರಸೀಪುರ ವಿಧಾನಸಭಾ ವ್ಯಾಪ್ತಿ ) ಕುಡಿಯುವ ನೀರುಪೂರೈಸುವ 65.64 ಕೋಟಿ ರೂ. ಅಂದಾಜಿನ ಬಹುಗ್ರಾಮಕುಡಿಯುವ ನೀರು ಪೂರೈಕೆ ಯೋಜನಾ ಪ್ರಸ್ತಾವನೆಯನ್ನುಸಿದ್ದಪಡಿಸಲಾಗಿದೆ. ಹಾಸನ ತಾಲೂಕಿನ ಶಾಂತಿಗ್ರಾಮ ಮತ್ತು195 ಗ್ರಾಮಗಳಿಗೆ ಹೇಮಾವತಿ ನದಿಯಿಂದ ಕುಡಿಯುವನೀರು ಪೂರೈಸುವ 234.30 ಕೋಟಿ ರೂ. ಯೋಜನೆ ಯಕಾಮಗಾರಿ ಶೇ.30 ರಷ್ಟು ಪೂರ್ಣಗೊಂಡಿದೆ.ಹೊಳೆನರಸೀಪುರ ತಾಲೂಕಿನ ಚಾಕೇನಹಳ್ಳಿ ಸೇರಿ 24ಗ್ರಾಮಗಳು ಹಾಗೂ ಕೋಡಿಹಳ್ಳಿ ಸೇರಿ 17 ಗ್ರಾಮಗಳಿಗೆಹೇಮಾವತಿ ನದಿಯಿಂದ ಕುಡಿಯುವ ನೀರು ಪೂರೈಸುವ28.38 ಕೋಟಿ ರೂ. ಬಹುಗ್ರಾಮ ಕುಡಿಯುವ ನೀರಿನ ಎರಡುಯೋಜನೆಗಳು ಕಾಮಗಾರಿ ಶೇ.90 ಪೂರ್ಣಗೊಂಡಿದೆ.
ಆರಸೀಕೆರೆ ತಾಲೂಕುಹಾಸನ ಜಿಲ್ಲೆಗೆ ಮಾದರಿಬಹುಗ್ರಾಮ ಕುಡಿಯುವ ನೀರರು ಯೋಜನೆ (ಎಂವಿಎಸ್) ಗೆ ಅರಸೀಕೆರೆ ತಾಲೂಕು ಹಾಸನ ಜಿಲ್ಲೆಗೆಮಾದರಿಯಾಗಿದೆ. ಹೇಮಾವತಿ ನದಿಯಿಂದ ಸುಮಾರು50 ರಿಂದ 60 ಕಿಮೀ.ವರೆಗೆ ಪೈಪ್‌ಲೈನ್ ಅಳವಡಿಸಿ (ಚನ್ನರಾಯಪಟ್ಟಣ ತಾಲೂಕಿನ ಗನ್ನಿಕಡದ ಬಳಿಯಿಂದ)ಅರಸೀಕೆರೆ ತಾಲೂಕಿನ 530 ಗ್ರಾಮಗಳಿಗೆ ಕುಡಿಯುವನೀರು ಪೂರೈಸುವ 254.32 ಕೋಟಿ ರೂ. ಯೋಜನೆಈಗಾಗಲೇ ಅನುಷ್ಠಾನಗೊಂಡಿದ್ದು, ಜಿಲ್ಲೆಯ ಇತರೆತಾಲೂಕುಗಳಲ್ಲೂ ನದಿ ಮೂಲದಿಂದ ಕುಡಿಯುವ ನೀರಿನಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನುಜಾರಿಗೊಳಿಸಲು ಮಾದರಿಯಾಗಿದೆ. ಅರಸೀಕೆರೆ ತಾಲೂಕುಸೇರಿದಂತೆ ಚನ್ನರಾಯಪಟ್ಟಣ ತಾಲೂಕಿನ 89 ಗ್ರಾಮಗಳಿಗೆಹೇಮಾವತಿ ನದಿಯಿಂದ ಕುಡಿಯುವ ನೀರು ಪೂರೈಸುವ50.01 ಕೋಟಿ ರೂ.ನ 3 ಬಹುಗ್ರಾಮ ಕುಡಿಯುವ ನೀರಿನಯೋಜನೆ ಪೂರ್ಣಗೊಳ್ಳುವ ಹಂತದಲ್ಲಿವೆ.
ಎನ್. ನಂಜುಂಡೇಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.