2 ಕೋಟಿ ವಂಚನೆ: ಮಾಲೀಕ ಪರಾರಿ
Team Udayavani, Oct 24, 2021, 3:58 PM IST
ಸಕಲೇಶಪುರ: ಗ್ರಾಹಕರು ನೀಡಿದ್ದ ಚಿನ್ನಾಭರಣವನ್ನು ಅಂಗಡಿ ಮಾಲೀಕನೇ ದೋಚಿಕೊಂಡು ಪರಾರಿಯಾಗಿರುವ ಆರೋಪ ತಾಲೂಕಿನ ಬಾಳ್ಳುಪೇಟೆ ಸಾರ್ವಜನಿಕರಿಂದ ಕೇಳಿ ಬಂದಿದೆ. 5 ವರ್ಷಗಳ ಹಿಂದೆ ರಾಜಸ್ಥಾನ ಮೂಲದ ಹಿತೇಶ್ ಎಂಬುವವನು ತಾಲೂಕಿನ ಬಾಳ್ಳುಪೇಟೆ ಗ್ರಾಮದ ಬಿ.ಎಂ ರಸ್ತೆಯಲ್ಲಿ ರಾಮದೇವ್ ಜುವೆಲರ್ಸ್ ಮತ್ತು ಬ್ಯಾಂಕರ್ ಎಂಬ ಹೆಸರಿನಲ್ಲಿ ಅಂಗಡಿಯೊಂದನ್ನು ತೆರೆದು ಊರಿನ ಜನರ ವಿಶ್ವಾಸಗಳಿಸಿಕೊಂಡು ಚಿನ್ನಾಭರಣ ಮಾರಾಟ, ಚಿನ್ನವನ್ನು ಅಡವಿಟ್ಟು ಕೊಂಡು ಹಣ ನೀಡುವ ವ್ಯವಹಾರ ನಡೆಸುತ್ತಿದ್ದರು.
ಅನೇಕ ಗ್ರಾಹಕರು ತಮ್ಮ ಕಷ್ಟದ ಸಮಯದಲ್ಲಿ ಚಿನ್ನವನ್ನು ಅಡವಿಟ್ಟು ಹಣವನ್ನು ಪಡೆದುಕೊಂಡಿದ್ದರು. ಇನ್ನು ಕೆಲವು ಗ್ರಾಹಕರು ಪಡೆದ ಸಾಲದ ಹಣವನ್ನು ವಾಪಸ್ ಕಟ್ಟಿದ್ದರೂ ಅವರಿಗೂ ಅಡವಿಟ್ಟ ಚಿನ್ನವನ್ನು ನೀಡದೆ ಸತಾಯಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಗ್ರಾಮವನ್ನು ತೊರೆದಿರುವ ಚಿನ್ನದಂಗಡಿ ಮಾಲೀಕ ತನ್ನ ಸ್ನೇಹಿತರ ಬಳಿಯೂ ಲಕ್ಷಾಂತರ ಹಣ ಪಡೆದು ಅವರಿಗೂ ವಂಚಿಸಿದ್ದಾನೆ.
ಇದನ್ನೂ ಓದಿ:- ರೈಲ್ವೆ ಮಾರ್ಗ ಪದೇ ಪದೇ ಬದಲಿಗೆ ಆಕ್ರೋಶ
2 ಕೋಟಿಗೂ ಹೆಚ್ಚು ಹಣ ಲೂಟಿ ಮಾಡಿದ್ದಾನೆಂಬ ಆರೋಪವಿದ್ದು, ಈತ ಗ್ರಾಮದಲ್ಲಿದ್ದ ಮನೆ ಹಾಗೂ ಅಂಗಡಿಯನ್ನು ಖಾಲಿ ಮಾಡಿಕೊಂಡು ಪರಾರಿಯಾಗಿ ಸುಮಾರು 8-10 ತಿಂಗಳಾಗುತ್ತ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾಜಸ್ಥಾನಕ್ಕೆ ಹೋಗಿದ್ದಾನೆಂದು ತಿಳಿದಿದ್ದ ಗ್ರಾಹಕರು ಆತ ಇಂದು ಬರುತ್ತಾನೆ ನಾಳೆ ಬರುತ್ತಾನೆಂದು ಸುಮಾರು 8 ತಿಂಗಳುಗಳಿಂದ ಕಾಯುತ್ತಿದ್ದು, ಈಗ ಹಣ ಕಳೆದುಕೊಂಡವರು ಒಟ್ಟಾಗಿ ಈತನ ವಿರುದ್ಧ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ. “ಮೊದಲು ವಂಚನೆಗೊಳಗಾಗಿರುವ ಗ್ರಾಹಕರು ಠಾಣೆಗೆ ಬಂದು ದೂರು ನೀಡಲಿ. ನಂತರ ವಂಚಿಸಿರುವ ಚಿನ್ನದಂಗಡಿ ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಗ್ರಾಹಕರು ವ್ಯಾಪಾರ ವಹಿವಾಟು ನಡೆಸುವಾಗ ಮಾಲೀಕನ ಪೂರ್ವಪರ ತಿಳಿದು ವ್ಯವಹಾರ ನಡೆಸಿದರೆ ವಂಚನೆಗೊಳಗಾಗುವುದನ್ನು ತಪ್ಪಿಸಬಹುದು.” – ಅನಿಲ್ ಕುಮಾರ್‌ಡಿ.ವೈ.ಎಸ್.ಪಿ ಸಕಲೇಶಪುರ ಉಪವಿಭಾಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.