![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 18, 2021, 2:29 PM IST
ಚನ್ನರಾಯಪಟ್ಟಣ: ಪಟ್ಟಣದಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೆ ವಾಹನ ಸಂಚಾರ ಮಾಡುತ್ತಿದ್ದು 250 ಮಂದಿ ಬೈಕ್ ಚಾಲಕರಿಂದ ಸುಮಾರು 1.25 ಲಕ್ಷ ರೂ. ದಂಡವನ್ನು ಸಂಚಾರಿ ಪೊಲೀಸರು ವಸೂಲಿ ಮಾಡುವ ಮೂಲಕ ಇನ್ನು ಮುಂದೆ ಪಟ್ಟಣದಲ್ಲಿ ಹೆಲ್ಮಟ್ ಕಡ್ಡಾಯ ಮಾಡಿದ್ದಾರೆ.
ಪಟ್ಟಣದ ಸಂಚಾರಿ ಪೊಲೀಸರ ನಾಲ್ಕು ತಂಡವು ಏಕಕಾಲದಲ್ಲಿ ರಸ್ತೆಗೆ ಇಳಿದಿದ್ದು ನವೋದಯ ವೃತ್ತ, ಶ್ರೀಕಂಠಯ್ಯವೃತ್ತ, ಮೈಸೂರು ರಸ್ತೆ, ಹಳೆಬಸ್ ನಿಲ್ದಾಣದಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುವವರ ತಡೆದು ಒರ್ವ ಚಾಲಕನಿಗೆ 500 ರೂ. ದಂಡ ಹಾಕಿದಲ್ಲದೆ ಬೈಕ್ ದಾಖಲಾತಿ, ಚಾಲನಾ ಪರವಾನಗಿ, ವಿಮೆ ಸೇರಿದಂತೆ ಇತರ ತಪಾಸಣೆಗಳನ್ನು ಮುಂದಿನ ದಿವಸಗಳಲ್ಲಿ ಮಾಡುವ ಮೂಲಕ ಹೆಚ್ಚುವರಿ ದಂಡ ಹಾಕಲಾಗುವುದು ಎಂದು ಎಚ್ಚರಿಸಿದರು.
ಪ್ರಭಾವಿಗಳಿಗೆ ಮೊರೆ: ನವೋದಯ ವೃತ್ತದಲ್ಲಿ ಬೈಕ್ ತಡೆದು ಹೆಲ್ಮೆಟ್ ಧರಿಸದ ಹಿನ್ನೆಲೆಯಲ್ಲಿ 500 ರೂ. ದಂಡ ಕಟ್ಟುವಂತೆ ಸಂಚಾರಿ ಠಾಣೆ ಪಿಎಸ್‌ಐ ಬ್ಯಾಟರಾಯಿಗೌ ಡರಿಗೆ ತಿಳಿಸಿದಾಗ ಆನೇಕರೆ ಗ್ರಾಮದ ವ್ಯಕ್ತಿಯೋರ್ವ ನಾನು ದಂಡ ನೀಡುವುದಿಲ್ಲ ಎಂದು ಕೂಡಲೆ ಮಾಜಿ ಮಂತ್ರಿ ರೇವಣ್ಣರ ಪತ್ನಿ ಭವಾನಿ ರೇವಣ್ಣ ಅವರಿಗೆ ದೂರವಾಣಿ ಕರೆ ಮಾಡಿ ಪೋನ್ ಪಿಎಸ್‌ಐಗೆ ಪೋಸ್ ನೀಡಿದರು. ಪೋನಿನಲ್ಲಿ ಮತನಾಡಿದ ಪಿಎಸ್‌ಐ ಮೇಡಂ ಇವರ ಬೈಕ್ ವಿಮೆ ಇಲ್ಲ, ರಸ್ತೆ ಸಂಚಾರಿ ನಿಮಯ ಉಲ್ಲಂಘನೆ ಮಾಡಿ ದ್ದಾರೆ. ಇನ್ನು ಹೆಲ್ಮೆಟ್ ಧರಿಸಿಲ್ಲ ಒಟ್ಟಾರೆಗಾಗಿ 3 ಸಾವಿರ ದಂಡ ಕಟ್ಟಬೇಕು ಎಂದು ಪೋನ್ ಕರೆ ಕಟ್ಟು ಮಾಡಿದರು.
ಇದನ್ನೂ ಓದಿ:- ಹಿಂದೂ ಜೂನಿಯರ್ ಕಾಲೇಜು ಶಿರ್ವ: ಜೇಸಿಐ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ
ದಂಡ ಪಾವತಿ: ಈ ವೇಳೆ ಬೈಕ್ ಚಾಲಕ ಹಾಗೂ ಪೊಲೀಸರ ನಡುವೆ ಮಾತಿಗೆ ಮಾತು ಬೆಳೆಯಿತು. ನೀವು ನ್ಯಾಯಾಲಯಕ್ಕೆ ತೆರಳಿ ದಂಡ ಕಟ್ಟಿ ಬಂದು ನಿಮ್ಮ ಬೈಕ್ ಪಡೆದುಕೊಂಡು ಹೋಗಿ ಅಲ್ಲಿಯವರೆಗೆ ಠಾಣೆಯಲ್ಲಿ ನಿಮ್ಮ ಬೈಕ್ ಇರುತ್ತದೆ. ಎಂದಾಗ ಆತ ಸ್ಥಳದಲ್ಲಿ ದಂಡ ನೀಡಿ ತಮ್ಮ ಬೈಕ್ ಪಡೆದುಕೊಂಡು ಗ್ರಾಮಕ್ಕೆ ತೆರಳಿದರು.
ಸಂಚಾರಿ ಠಾಣೆ ಎಎಸ್‌ಐಗಳಾದ ಪ್ರೇಮರಾಜ್, ರತ್ನಕುಮಾರ್, ಶ್ರೀನಿವಾಸಮೂರ್ತಿ ತಂಡಗಳು ಕಾರ್ಯಚರಣೆ ಮಾಡಿದ್ದು, ಸಾಕಷ್ಟು ಮಂದಿಗೆ ದಂಡ ಹಾಕಿದ್ದಾರೆ. ಈ ವೇಳೆ ಪಿಎಸ್‌ಐ ಬ್ಯಾಟರಾಯಗೌಡ ಮಾತನಾಡಿ, ನಾವು ಏಕಾಏಕಿ ದಂಡ ಹಾಕಲು ಮುಂದಾಗುತ್ತಿಲ್ಲ, ಕಳೆದ 15 ದಿವಸಗಳಿಂದ ನಿರಂತರವಾಗಿ ಪಟ್ಟಣದ ಪ್ರತಿ ವಾರ್ಡಿನಲ್ಲಿ ಆಟೋ ಪ್ರಚಾರ ಮಾಡಿಸಿದ್ದೇವೆ, ಪಟ್ಟಣದ ಪ್ರತಿ ವೃತ್ತದಲ್ಲಿ ಮೈಕ್ ಮೂಲಕ ದಿನದ 24 ತಾಸು ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ ಎಂದು ಹೇಳಿದರು.
ಏಕಾಏಕಿ ದಂಡ ವಿಧಿಸುತ್ತಿಲ್ಲ- ಸಾಕಷ್ಟು ದಿವಸ ಕಾಲಾವಕಾಶ ನೀಡಲಾಗಿದ್ದು ಜಾಗೃತಿ ಮೂಡಿಸಿದ್ದರೂ ಬೈಕ್ ಸವಾರರು ಹೆಲ್ಮಟ್ ಧರಿಸದ ಹಿನ್ನೆಲೆಯಲ್ಲಿ ದಂಡ ಹಾಕಲು ಮುಂದಾಗುತ್ತಿದ್ದೇವೆ ಹೊರತು ಏಕಾಏಕಿ ದಂಡ ವಿಧಿಸುತ್ತಿಲ್ಲ, ಒಂದು ದಿವಸಕ್ಕೆ ಸೀಮಿತವಾಗದೆ ನಿರಂತರವಾಗಿ ದಂಡ ಹಾಕಲಾಗುವುದು. ತಾಲೂಕಿನ ಪ್ರತಿಯೋರ್ವ ಬೈಕ್ ಸವಾರ ಹೆಲ್ಮಟ್ ಧರಿಸಿ ಬೈಕ್ ಚಾಲನೆ ಮಾಡುವುದರಿಂದ ಅಪಘಾತ ತಡೆಯಬಹುದು ಎಂದು ಪಿಎಸ್‌ಐ ಬ್ಯಾಟರಾಯಗೌಡ ತಿಳಿಸಿದರು.
R. Ashok: ನವೆಂಬರ್ ಬಳಿಕ ಕಾಂಗ್ರೆಸ್‌ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್‌ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
You seem to have an Ad Blocker on.
To continue reading, please turn it off or whitelist Udayavani.