4 ಗ್ರಾಮಕ್ಕೆ ಟ್ಯಾಂಕರ್, 19 ಗ್ರಾಮಕ್ಕೆ ಕೊಳವೆ ಬಾವಿ ನೀರು
ಜಡಿ ಮಳೆಯಿಂದ ಕೃಷಿ ಕಾರ್ಯ ಕುಂಠಿತ •ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ನಿವಾರಣೆ ಎಂದ ಅಧಿಕಾರಿಗಳು
Team Udayavani, Aug 10, 2019, 1:38 PM IST
ಚನ್ನರಾಯಪಟ್ಟಣ: ಕಳೆದ 3-4 ದಿನದಿಂದ ಆಶ್ಲೇಷಾ ಮಳೆ ಸುರಿಯುತ್ತಿದ್ದು ಸುಮಾರು 4 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 19 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಕುಡಿಯುವ ನೀರಿನ ಸಮಸ್ಯೆ: ರಾಜ್ಯದ ಮಲೆನಾಡು, ಕರಾವಳಿ ಸೇರಿದಂತೆ ಬಯಲು ಸೀಮೆ ಪ್ರದೇಶದಲ್ಲಿ ಮಳೆ ಆರ್ಭಟ ಜೋರಾಗಿದೆ. ನೆರೆ ಸಂಭವಿಸುತ್ತಿದ್ದರೂ ತಾಲೂಕಿನಲ್ಲಿ ಮಾತ್ರ ಭೀಕರ ಬರಗಾಲ ತಾಂಡವವಾಡುತ್ತಿದೆ. ಸಾವಿರಾರು ಮಂದಿ ಕುಡಿ ಯುವ ನೀರಿನ ಸಮಸ್ಯೆಗೆ ಸಿಲುಕಿದ್ದಾರೆ. ಜಾನುವಾರ ಗಳಿಗೆ ಮೇವಿನ ಕೊರತೆ ಉಂಟಾಗಿದೆ. ತಾಲೂಕಿನಲ್ಲಿ ನೀರಿನ ಸಮಸ್ಯೆ ಇದ್ದರೂ ಹೇಮಾವತಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ನಾಲೆ ಮೂಲಕ ಕೆರೆ ಕಟ್ಟೆ ತುಂಬಿಸಲು ಜಿಲ್ಲಾಡಳಿತ ಮುಂದಾಗದೆ ಇರುವುದರಿಂದ ಅಂತರ್ಜಲವೂ ಕುಸಿಯುತ್ತಿದೆ.
ಎಲ್ಲೆಲ್ಲಿ ನೀರಿನ ಸಮಸ್ಯೆ?: ತಾಲೂಕಿನ ಬಸವನಹಳ್ಳಿ, ಬಿಳಿಕೆರೆ, ಬಡಕನಹಳ್ಳಿ ಹಾಗೂ ದೊಡ್ಡೇರಿಕಾವಲು ಗ್ರಾಮದ ಜನ ಹಾಗೂ ಜಾನುವಾಗುಗಳಿಗೆ ನಿತ್ಯವೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗು ತ್ತಿದ್ದರೆ ಪೂಮಡಿಹಳ್ಳಿ, ಹುಳಿಗೆರೆ, ಮಲ್ಲೇನಹಳ್ಳಿ, ಮಂಚೇನಹಳ್ಳಿ, ದಿಂಕಕೊಪ್ಪಲು, ಎಂ.ಹೊನ್ನೇನಹಳ್ಳಿ, ದುಗ್ಗೇಹಳ್ಳಿ, ಚನ್ನಗೋನಹಳ್ಳಿ, ಶೆಟ್ಟಿಹಳ್ಳಿ, ಜಿ.ಮಾವಿನ ಹಳ್ಳಿ, ದಾಸಾಪುರ, ಸಾಣೇನಹಳ್ಳಿ, ಪೂಮಡಿಹಳ್ಳಿ ಕಾಲೋನಿ, ದಾಸರಹಳ್ಳಿ, ಚನ್ನೇನಹಳ್ಳಿ, ದಾಸರಹಳ್ಳಿ, ಎಂ.ಕೆ.ಚಿಕ್ಕೇನಹಳ್ಳಿ, ವಡ್ಡರಹಳ್ಳಿ ಅಗ್ರಹಾರ ಗ್ರಾಮಗಳಿಗೆ ಕಳೆದ 3ತಿಂಗಳಿನಿಂದ ಖಾಸಗಿ ಕೊಳವೆ ಬಾವಿಯನ್ನು ಬಾಡಿಗೆ ಪಡೆದು ನೀರು ನೀಡಲಾಗುತ್ತಿದೆ.
3 ಲಕ್ಷ ರೂ.ವೆಚ್ಚ: ಟ್ಯಾಂಕರ್ ಮೂಲಕ ನೀರು ಸರಬ ರಾಜು ಮಾಡುವವರಿಗೆ ಒಂದು ಟ್ಯಾಂಕರ್ ನೀರಿಗೆ 650 ರೂ. ನಿಗದಿ ಮಾಡಿದ್ದು ಪ್ರತಿ ನಿತ್ಯ 2-3 ಟ್ಯಾಂಕರ್ ನೀರು ಒಂದು ಗ್ರಾಮಕ್ಕೆ ನೀಡಲಾಗುತ್ತಿದೆ. ಇನ್ನು 19 ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗೆ ತಾಲೂಕು ಆಡಳಿತ ತಿಂಗಳಿಗೆ 15 ಸಾವಿರ ಬಾಡಿಗೆ ರೂಪದಲ್ಲಿ ಪಡೆದಿದ್ದು 3 ತಿಂಗಳಿನಿಂದ ನೀರು ಒದಗಿಸಲಾಗುತ್ತಿದೆ. ಈವರೆಗೆ ಸುಮಾರು 3 ಲಕ್ಷ ರೂ. ಕುಡಿಯುವ ನೀರಿಗೆ ವೆಚ್ಚ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ತಾತ್ಕಲಿವಾಗಿ ಸಮಸ್ಯೆ ಇಲ್ಲ: ಆಶ್ಲೇಷಾ ಮಳೆ ತಾಲೂ ಕಿಗೆ ಸುರಿಯದೆ ಇದ್ದರೆ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಈಗ ಸೋನೆ ಮಳೆಯಿಂದ ಸರ್ಕಾರಿ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿದ್ದು ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದಿಲ್ಲ. ಆದರೂ ಈ ಸಮಸ್ಯೆ ತಾತ್ಕಲಿಕವಾಗಿ ಮಾತ್ರ ನಿವಾರಣೆಯಾಗಿದೆ. ಇನ್ನು ಮಳೆ ನಿಂತರೆ ಪುನಃ ಕುಡಿಯುವ ನೀರಿಗೆ ಜನರು ಯಾತನೆ ಪಡಬೇಕಾಗುತ್ತದೆ.
ಮೇವು ಬ್ಯಾಂಕ್: ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದ್ದು ಶ್ರವಣಬೆಳಗೊಳ ಹೋಬಳಿ ಸುಂಡಹಳ್ಳಿ ಗ್ರಾಮದಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ. ಇನ್ನು ಉಳಿದ ಹೋಬಳಿ ಕೇಂದ್ರದಲ್ಲಿ ಮೇವು ಬ್ಯಾಂಕ್ ತೆರೆಯುವ ವಿಶ್ವಾಸವನ್ನು ತಾಲೂಕು ಆಡಳಿತ ರೈತರಿಗೆ ನೀಡಿತ್ತು. ಆದರೆ ಈಗ ವರುಣನ ಕೃಪೆಯಿಂದ ಹೊಲ ಗದ್ದೆಗಳಲ್ಲಿ ಹಸಿರು ಹುಲ್ಲು ಚಿಗುರುತ್ತಿದ್ದು ತಕ್ಕ ಮಟ್ಟಿಗೆ ಮೇವಿನ ಸಮಸ್ಯೆ ನಿವಾರಣೆಯಾಗುವ ಸಾಧ್ಯತೆಯಿದ್ದು ತಾಲೂಕು ಆಡಳಿತಕ್ಕೆ ನೆಮ್ಮದಿ ತಂದಿದೆ.
•ನೀರಿನ ಸಮಸ್ಯೆ ಇದ್ದರೂ ಹೇಮಾವತಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ.
•ನಾಲೆ ಮೂಲಕ ಕೆರೆ ಕಟ್ಟೆ ತುಂಬಿಸಲು ಜಿಲ್ಲಾಡಳಿತ ಮುಂದಾಗದೆ ಇರುವುದರಿಂದ ಅಂತರ್ಜಲವೂ ಕುಸಿಯುತ್ತಿದೆ.
•ಆಶ್ಲೇಷಾ ಮಳೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ನಿವಾರಣೆ; ಅಧಿಕಾರಿಗಳ ಮಾಹಿತಿ
● ಶಾಮಸುಂದರ್ ಕೆ.ಅಣ್ಣೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
ದ್ವೇಷದ ರಾಜಕಾರಣ ಸುಡುವ ಕಾಲ ಸನ್ನಿಹಿತ: ಸೂರಜ್ ರೇವಣ್ಣ
ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ
Hasana: ಕರೆಯನ್ನು ಸ್ವೀಕರಿಸದ ಪ್ರಿಯಕರಗೆ ಚಾಕು ಇರಿದು ಪ್ರಿಯತಮೆ ಪರಾರಿ
Hassan: ಪತ್ನಿ ಕಿರುಕುಳ: ಹೇಮಾವತಿ ಹಿನ್ನೀರಿಗೆ ಹಾರಿ ಟೆಕ್ಕಿ ಆತ್ಮಹ*ತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.