ಒಂದೇ ದಿನ 7 ಕೋವಿಡ್ 19 ಪ್ರಕರಣ
Team Udayavani, May 16, 2020, 7:11 AM IST
ಹಾಸನ: ಕೊರೊನಾ ಹರಡದಂತೆ ಕೈಗೊಂಡಿದ್ದ ಮುನ್ನೆಚ್ಚರಿಕೆ ಕ್ರಮಗಳಿಂದ ಹಸಿರು ವಲಯದಲ್ಲಿದ್ದ ಹಾಸನ ಜಿಲ್ಲೆಗೆ ಮಂಬೈನ ನಂಟು ಮಾರಕವಾಗಿ ಪರಿಣಮಿಸಿದೆ. ಶುಕ್ರವಾರ ಒಂದೇ ದಿನ 7 ಪಾಸಿಟಿವ್ ಪ್ರಕರಣ ವರದಿಯಾಗಿದ್ದು ನಾಲ್ಕೇ ದಿನಗಳಲ್ಲಿ ಜಿಲ್ಲೆಯಲ್ಲಿ ಕೊರೊನಾ ಶಂಕಿತರ ಸಂಖ್ಯೆ 16ಕ್ಕೆ ಏರಿದೆ.
ಲಾಕ್‌ಡೌನ್ ಸಡಿಲಿಕೆ ಸೇವಾಸಿಂಧು ಆ್ಯಪ್ ಮೂಲಕ ಪಾಸ್ ಪಡೆದು ಮುಂಬೈನಿಂದ ಬಂದವರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕಳೆದ 2 ದಿನದ ಪಾಸಿಟಿವ್ ಪ್ರಕರಣಗಳು ಚನ್ನರಾಯಪಟ್ಟಣ ತಾಲೂಕಿನ ಮೀಲದವರಿಗೆ ಮಾತ್ರ ಸೀಮಿತವಾಗಿದ್ದು, ಶುಕ್ರವಾರ ಹೊಳೆನರಸೀಪುರ ಮತ್ತು ಅರಕಲಗೂಡು ತಾಲೂಕಿನ ಮೂಲದವರಲ್ಲೂ ಕೊರೊನಾ ಪಾಸಿಟಿವ್ ಕಂಡು ಬಂದಿದೆ.
ಆತಂಕ ಸೃಷ್ಟಿ:ಮೇ 12 ರಂದು ಚನ್ನರಾಯ ಪಟ್ಟಣದ ಮೂಲದ ಐವರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದರೆ, ಮೇ 13ರ ಬುಧವಾರ ಮತ್ತೆ ನಾಲ್ವರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು ಈ ಮೂಲಕ ಕೊರೊನಾ ಶಂಕಿತರ ಸಂಖ್ಯೆ 9ಕ್ಕೆ ಏರಿತ್ತು. ಆದರೆ ಮೇ14ರಂದು ಪಾಸಿಟಿವ್ ಪ್ರಕರಣಗಳು ವರದಿಯಾಗದೆ ತುಸು ಸಮಾಧಾನ ತಂದಿತ್ತು. ಆದರೆ, ಶುಕ್ರವಾರ 7 ಪಾಸಿಟಿವ್ ಪ್ರಕರಣ ವರದಿ ಆಗುವುದರೊಂದಿಗೆ ಆತಂಕ ಹೆಚ್ಚಿಸಿದೆ.
ಪಾಸಿಟಿವ್:ಶುಕ್ರವಾರ ಕಂಡು ಬಂದಿ ರುವ ಪ್ರಕರಣಗಳಲ್ಲಿ ಅರಕಲ ಗೂಡು ತಾಲೂಕಿನ ಮೂಲದ ಇಬ್ಬರು, ಹೊಳೆನರಸೀಪುರ ಮೂಲದ ಇಬ್ಬರು,ಚನ್ನರಾಯಪಟ್ಟಣ ಮೂಲದ ಮೂವರು ಸೇರಿದ್ದಾರೆ. ಮೇ 12ರ ರಾತ್ರಿ 26 ಜನರು ಮುಂಬೈನ ದಾದರ್‌ನಿಂದ ಖಾಸಗಿ ಬಸ್ ಮಾಡಿಕೊಂಡು ಬಂದಿದ್ದು, ಅವರಲ್ಲಿ ಹೊಳೆನರಸೀಪುರ ತಾಲೂಕಿನ ಮೂಲದ ಇಬ್ಬರಿಗೆ ಪಾಸಿಟಿವ್ ಕಂಡು ಬಂದಿದೆ.
ಅರಕಲಗೂಡು ತಾಲೂಕಿನ ಮೂಲದ ಮೂವರು ಒಂದು ಕಾರಿನಲ್ಲಿ ನೇರವಾಗಿ ಬಂದಿದ್ದರು. ಅವರಲ್ಲಿ ಒಬ್ಬ ಯುವಕನಿಗೆ ಪಾಸಿಟಿವ್ ಕಂಡು ಬಂದಿದೆ. ಅದೇ ತಾಲೂಕಿನ ಒಬ್ಬ ಮಹಿಳೆಗೂ ಪಾಸಿಟಿವ್ ಬಂದಿದೆ. ಚನ್ನರಾಯಪಟ್ಟಣ ತಾಲೂಕಿನ 8 ಮಂದಿ ಒಂದು ಕ್ವಾಲಿಸ್ ವ್ಯಾನ್‌ನಲ್ಲಿ ಮುಂಬೈನಿಂದ ಬಂದಿದ್ದು ಅವರಲ್ಲಿ ಮೂವರಿಗೆ ಪಾಸಿಟಿವ್ ಕಂಡು ಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕ್ವಾರಂಟೈನ್‌ನಲ್ಲಿ ಸಾಮೂಹಿಕ ಟಿಕ್‌ಟಾಕ್: ಆಕ್ರೋಶ
ಚನ್ನರಾಯಪಟ್ಟಣ: ಹಾಸನ ಜಿಲ್ಲೆಯ ಜನರ ನಿದ್ದೆಗೆಡಿಸಿರುವ ಗೂರಮಾರನಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ತೆರೆದಿರುವ ಸಮುದಾಯ ಕ್ವಾರಂಟೈನ್ ಕೇಂದ್ರ ಮತ್ತೆ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೊರ ರಾಜ್ಯ ಹಾಗೂ ಜಿಲ್ಲೆಯಿಂದ ಆಗಮಿಸಿದವರನ್ನು ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಈಗಾಗಲೇ 11 ಮಂದಿಗೆ ಕೊರೊನಾ ತಗುಲಿದೆ.
ಆದರೆ ಇದೇ ಸ್ಥಳದಲ್ಲಿ ಬೇರೆ ಕಟ್ಟಡದಲ್ಲಿ ಕ್ವಾರಂಟೈನ್‌ನಲ್ಲಿ ಇರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ “ಜೇನಿನ ಗೂಡು ನಾವೆಲ್ಲಾ, ಬೇರೆಯಾದರೆ ಜೇನಿಲ್ಲ’ ಎಂಬ ಹಾಡಿಗೆ ಟಿಕ್‌ಟಾಕ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿ ಬಿಟ್ಟಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕ್ವಾರಂಟೈನ್‌ನಲ್ಲಿರುವ ಹಲವರು ಸಾಮಾಜಿಕ ತರ ಮರೆತು ಬೇಜವಾಬ್ದಾರಿತನದಿಂದ ಒಟ್ಟಿಗೆ ಸೇರಿ ಹಾಡಿ ಕುಣಿದು ಸ್ವತಃ ಅವರೇ ಸಾಮಾಜಿಕ ಜಾಲತಾಣಕ್ಕೆ ವಿಡಿಯೋ ತುಣುಕು ಹರಿಬಿಟ್ಟಿದ್ದಾರೆ. ತಾಲೂಕು ಆಡಳಿತ ಹಾಗೂ ತಾಲೂಕು ಆರೋಗ್ಯ ಇಲಾಖೆ ಇತ್ತ ಗಮನಹರಿಸಿ ಕ್ವಾರಂಟೈನ್‌ನಲ್ಲಿರುವವರು ಸಾಮಾಜಿಕ ಅಂತರ ಮರೆತು ಟಿಕ್‌ಟಾಕ್ ಮಾಡುತ್ತಿರುವ ಕಾರ್ಯಕ್ಕೆ ಕಡಿವಾಣ ಹಾಕಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.